Advertisement

ಹೀಗೊಂದು ಪರಿಸರಸ್ನೇಹಿ ಸಂದೇಶದ ಮದುವೆ!

06:50 AM Aug 20, 2018 | |

ಉಡುಪಿ: ಉಡುಪಿಯಲ್ಲಿ ರವಿವಾರ ನಡೆದ ವಿವಾಹವೊಂದರಲ್ಲಿ  ಗೃಹಿಣಿ ಬೀಳು,ಸಂದು ಬಳ್ಳಿ,ಮೈತಾಳ ಕಡ್ಡಿ,ಬಿಲ್ವ, ಅಶೋಕ,ಲಾವಂಚ,ಪಂಚಪತ್ರೆ,ಮಡಿವಾಳ ಸೊಪ್ಪು, ಅಮೃತಬಳ್ಳಿ,ಸಾಂಬಾರ ಬಳ್ಳಿ,ಮಧುನಾಶಿನಿ ಮೊದಲಾದ 12ಕ್ಕೂ ಹೆಚ್ಚು ಬಗೆಯ ಔಷಧೀಯ ಸಸ್ಯಗಳನ್ನು ವಿತರಿಸಿ ಪರಿಸರಸ್ನೇಹಿ ವಾತಾವರಣ ಸೃಷ್ಟಿಸಲಾಯಿತು. ಇದರೊಂದಿಗೆ ಇದರ ಬಳಕೆ ಕುರಿತು ಮಾಹಿತಿ ನೀಡುವ ಕರಪತ್ರಗಳನ್ನೂ ವಿತರಿಸಿದ ಕಾರಣ ಇದರ ಬಗೆಗೆ ಗೊತ್ತಿಲ್ಲದವರಿಗೆ ಅನುಕೂಲವಾಯಿತು. 

Advertisement

ಪ್ಲಾಸ್ಟಿಕ್‌ ಬಾಟಲಿಗಳು,ಪ್ಲಾಸ್ಟಿಕ್‌ ಸೀಲು ಇರುವ ಲೋಟಗಳಲ್ಲಿ ನೀರು ಣಿಸುವುದೇ ಪ್ರತಿಷ್ಠೆ ಎಂದು ಭಾವಿಸಿದ ಈ ಕಾಲಘಟ್ಟದಲ್ಲಿ ಇವುಗಳಿಂದಾಗುವ ಹಾನಿಗಳನ್ನು ಗಣಿಸಿದ ಆಯೋಜಕರು ಇಷ್ಟೇ ಶುದ್ಧದ ನೀರಿಗೆ ಇನ್ನಷ್ಟು ಆಯುರ್ವೇದೀಯ ಸಾಮಗ್ರಿಗಳನ್ನು ಸೇರಿಸಿ ಪ್ಲಾಸ್ಟಿಕ್‌ ಬಳಕೆಯಿಲ್ಲದೆ ವಿತರಿಸಿ ದರು. ಇದೇ ರೀತಿಯ ಇನ್ನೊಂದು ಒಣ ಪ್ರತಿಷ್ಠೆ ಎನಿಸಿದ ಐಸ್‌ಕ್ರೀಮ್‌ನ್ನು ಪ್ಲಾಸ್ಟಿಕ್‌ ಕಪ್‌ ಹೋಗಲಾಡಿಸಲು ಹಣ್ಣುಗಳ ಜತೆ ಮಿಶ್ರಣ ಮಾಡಿ ವಿತರಿಸಲಾಯಿತು. 

ಮಥುರಾ ಛತ್ರದಲ್ಲಿ ರವಿವಾರ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಎ.ಪಿ. ಭಟ್‌ ಅವರ ಪುತ್ರಿ ಸಂಹಿತಾ ಮತ್ತು ಪಾರಂಪಳ್ಳಿ ಲಕ್ಷ್ಮೀನಾರಾಯಣ ಮಧ್ಯಸ್ಥರ ಪುತ್ರ ಹರೀಶರ ಮದುವೆ ಸಮಾರಂಭದಲ್ಲಿ  ಡಾ| ಭಟ್‌ ಅವರ ಆಶಯದಂತೆ ಇಂತಹ ಪರಿಸರ ಪೂರಕ ವ್ಯವಸ್ಥೆ ಮಾಡಲಾಯಿತು. 

“ಎಷ್ಟೋ ಜನರಿಗೆ ಈ ಸಸ್ಯಗಳ ಬಳಕೆಯ ಮಹತ್ವ ಗೊತ್ತಿಲ್ಲ. ಇದನ್ನು ಮತ್ತೆ ಜನಪ್ರಿಯಗೊಳಿಸಿ ಜನರ ಆರೋಗ್ಯವನ್ನು ಕಾಪಾಡಬೇಕಾಗಿದೆ’ ಎನ್ನುತ್ತಾರೆ  ಕರ್ಜೆಯ ಮಂಜುನಾಥ ಗೋಳಿಯವರ ಸಹಕಾರದಲ್ಲಿ ಆಯೋಜಿಸಿದ ಆಯುರ್ವೇದ ತಜ್ಞ ಡಾ| ಶ್ರೀಧರ ಬಾಯರಿಯವರು.

Advertisement

Udayavani is now on Telegram. Click here to join our channel and stay updated with the latest news.

Next