Advertisement

ರೋಗದ ಸುತ್ತ ಹೀಗೊಂದು ಸಿನಿಮಾ

11:51 AM Jun 03, 2018 | Team Udayavani |

ಈಗಾಗಲೇ ರೋಗಗಳನ್ನಿಟ್ಟುಕೊಂಡು ಇತರೆ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಯಾವುದಾದರೊಂದು ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಹೇಗೆ ವರ್ತಿಸುತ್ತಾನೆ, ಆತನ ವರ್ತನೆಯಿಂದ ಸುತ್ತಲ ವಾತಾವರಣ ಹೇಗೆಲ್ಲಾ ನಿರ್ಮಾಣವಾಗುತ್ತದೆ ಎಂಬ ಅಂಶದೊಂದಿಗೆ ಅಂತಹ ಸಿನಿಮಾಗಳು ಸಾಗಿಬಂದಿವೆ. ಅವು ಕನ್ನಡದಲ್ಲೂ ಹೊರತಾಗಿಲ್ಲ. ಕನ್ನಡದಲ್ಲೂ ಅಂತಹ ಅನೇಕ ಚಿತ್ರಗಳು ಬಂದಿವೆ.

Advertisement

ಈಗ ಹೊಸಬರ ತಂಡವೊಂದು ಅಂಥದ್ದೊಂದು “ರೋಗ’ ಕುರಿತು ಕಥೆ ಮಾಡಿಕೊಂಡು ಚಿತ್ರ ಮಾಡಿ ಮುಗಿಸಿದೆ. ಅದು “ಸಂಕಷ್ಟಕರ ಗಣಪತಿ’. ಹೌದು, ಈ ಚಿತ್ರದ ನಿರ್ದೇಶಕ ಅರ್ಜುನ್‌ ಕುಮಾರ್‌ “ಅಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ಎಂಬ ವಿಚಿತ್ರ ಖಾಯಿಲೆ ಇರುವ ರೋಗದ ಕುರಿತು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಕಥಾನಾಯಕ ವ್ಯಂಗ ಚಿತ್ರಕಾರ. ಒಂದು ಹಂತದಲ್ಲಿ ಅವನಿಗೆ “ಅಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ಖಾಯಿಲೆ ಆವರಿಸಿಕೊಂಡಾಗ ಆಗುವ ಪರಿಪಾಟಿಲು ಚಿತ್ರದ ಹೈಲೆಟ್‌.

ಇದೊಂದು ಕಾಮಿಡಿ ಜೊತೆಗೆ ಸುಂದರ ಪ್ರೇಮ ಕಥಾಹಂದರ ಹೊಂದಿದೆ. ಸಂಕಷ್ಟ ಅಂದರೆ ತೊಂದರೆಗಳು, ಕರ ಅಂದರೆ ಕೈ, ನಾಯಕನ ಹೆಸರು ಗಣಪತಿ ಆಗಿರುವುದರಿಂದ ಚಿತ್ರಕ್ಕೆ “ಸಂಕಷ್ಟಕರ ಗಣಪತಿ’ ಎಂದು ಇಡಲಾಗಿದೆ. ಇನ್ನು, ಈ ಚಿತ್ರಕ್ಕೆ ಲಿಖಿತ್‌ ಶೆಟ್ಟಿ ಹೀರೋ. ಇವರಿಗೆ ಶ್ರುತಿ ನಾಯಕಿ. ಚಿತ್ರದಲ್ಲಿ ಅಚ್ಯುತಕುಮಾರ್‌, ಮಂಜುನಾಥ್‌ ಹೆಗಡೆ, ಶ್ರೀನಿವಾಸಪ್ರಭು, ರೇಖಾಸಾಗರ್‌, ನಾಗಭೂಷಣ್‌ ಇತರರು ನಟಿಸಿದ್ದಾರೆ.

ಚಿತ್ರದ ಐದು ಹಾಡುಗಳಿಗೆ ಲಿಖಿತ್‌ ಮುರಳಿಧರ್‌ ಸಂಗೀತ ಸಂಯೋಜಿಸಿದ್ದಾರೆ. ವಿಜೇತ್‌ ಸಂಕಲನವಿದೆ. ಉದಯಲೀಲಾ ಛಾಯಗ್ರಹಣ ಮಾಡಿದ್ದಾರೆ. ರಘುನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಫೈಜಾನ್‌ ಖಾನ್‌ ತಮ್ಮ ಗೆಳೆಯರಾದ ಭರತ್‌ರಾವ್‌ ಹಾಗು ಇತರರ ಜತೆ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಡಿಐ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಸೆನ್ಸಾರ್‌ಗೆ ಹೋಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next