ಸ್ಯಾನ್ ಸಾಲ್ವಡಾರ್: ಮಧ್ಯ ಅಮೆರಿಕನ್ ದೇಶಗಳಿಂದ ಆಗಮಿಸುವ ವಲಸಿಗರನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತ, ಆಫ್ರಿಕಾ ದೇಶಗಳ ಪ್ರಯಾಣಿಕರಿಗೆ ಒಂದು ಸಾವಿರ ಅಮೆರಿಕನ್ ಡಾಲರ್ ತೆರಿಗೆ ವಿಧಿಸಲಾಗುವುದು ಎಂದು ಎಲ್ ಸಾಲ್ವಡಾರ್ ತಿಳಿಸಿದೆ.
ಇದನ್ನೂ ಓದಿ:Shocking Video: ಹುಲಿ ಜತೆ ರಸ್ತೆಯಲ್ಲಿ ವಾಕಿಂಗ್… ಇದು ಹುಚ್ಚಾಟದ ಪರಮಾವಧಿ-ನೆಟ್ಟಿಗರ ಕಿಡಿ
ಭಾರತ ಸೇರಿದಂತೆ 50ಕ್ಕೂ ಅಧಿಕ ಅಮೆರಿಕನ್ ದೇಶಗಳಿಂದ ಪಾಸ್ ಪೋರ್ಟ್ ಮೂಲಕ ಪ್ರಯಾಣಿಸುವ ವ್ಯಕ್ತಿಗಳು ತೆರಿಗೆ ಪಾವತಿಸಬೇಕಾಗಲಿದೆ ಎಂದು ಎಲ್ ಸಾಲ್ವಡಾರ್ ಬಂದರು ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಗ್ರಹವಾಗುವ ತೆರಿಗೆ ಹಣವನ್ನು ಸಾಲ್ವಡಾರ್ ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅನಿಯಮಿತ ವಲಸಿಗರನ್ನು ನಿಯಂತ್ರಿಸುವ ಬಗ್ಗೆ ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಇತ್ತೀಚೆಗೆ ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಬ್ರಿಯಾನ್ ನಿಕೋಲಸ್ ಅವರೊಂದಿಗೆ ಚರ್ಚೆ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ಯಾಟ್ರೋಲ್ ಮಾಹಿತಿ ಪ್ರಕಾರ, 2023ನೇ ಸಾಲಿನ ಅಕ್ಟೋಬರ್ ವರೆಗೆ ದೇಶಾದ್ಯಂತ 3.2 ಮಿಲಿಯನ್ ದಾಖಲೆಯ ವಲಸಿಗರು ಆಗಮಿಸಿರುವುದಾಗಿ ತಿಳಿಸಿದೆ.
ವಲಸಿಗರಲ್ಲಿ ಬಹುತೇಕರು ಆಫ್ರಿಕಾ ದೇಶದವರು ಎಂದು ವರದಿ ಹೇಳಿದೆ. ಅಕ್ಟೋಬರ್ 23ರಿಂದ ಎಲ್ ಸಾಲ್ವಡಾರ್ ಗೆ ಆಗಮಿಸುವ ಪ್ರಯಾಣಿಕರಿಗೆ ವ್ಯಾಟ್ ಸೇರಿದಂತೆ 1,130 ಅಮೆರಿಕನ್ ಡಾಲರ್ ತೆರಿಗೆ ವಿಧಿಸಲಾಗುತ್ತಿದೆ ಎಂದು ಪ್ರಕಟನೆ ವಿವರಿಸಿದೆ.