Advertisement

ನಮಗೂ ಮಾದರಿ: ನದಿ ಉಳಿಸಲು ಕಾನೂನು ರಚಿಸಿದ ದೇಶಗಳು..!

04:38 PM Oct 27, 2021 | Team Udayavani |

ಶಿವು

Advertisement

ಪ್ರಕೃತಿ ಜಗದ ಅಚ್ಚರಿಗಳಲ್ಲಿ ಒಂದು. ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು. ನಮ್ಮ ವೈಯಕ್ತಿಕ ಜವಾಬ್ದಾರಿಯನ್ನು ಮೆರಿಯುವುದರ ಜತೆಗೆ ಪರಿಸರ ಸಂರಕ್ಷಣೆಗೆ ಸರಕಾರ ರೂಪಿಸಿರುವ ಕಾನೂನುಗಳನ್ನು ಕೂಡ ನಾವು ಕಠಿನವಾಗಿ ಪಾಲಿಸಬೇಕಾಗುತ್ತದೆ. ಈ ವಿಚಾರವಾಗಿ ಭಾರತದಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಪರಿಸರ ಸಂರಕ್ಷಣೆಗೆ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ನಮ್ಮ ಜನಗಳಿಗೆ ಅವುಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇಲ್ಲದಿರುವುದು ವಿಪರ್ಯಾಸ. ಈ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಾಗರಿಕ ಸಮಾಜದ ಮುಂದಿದೆ.

ಇನ್ನು ಮುಂದುವರಿದು ಹೇಳುವುದಾದರೆ ದೇಶದಲ್ಲಿ ಜಲಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿದೆ. ಏಕೆಂದರೆ ಪ್ರತೀ ಬೇಸಗೆಯಲ್ಲಿ ನೀರಿನ ಬವಣೆ ಕಥೆಗಳನ್ನು ನಾವು ಕೇಳಿರುತ್ತೇವೆ. ಆದರೆ ಅದಕ್ಕೆ ಪರಿಹಾರ ಕಂಡುಕೊಂಡಿದ್ದು ಕಡಿಮೆ. ಜಲದ ಮೂಲಗಳಾದ ನದಿ, ಹಳ್ಳ-ಕೊಳ್ಳಗಳನ್ನು ಸಮರ್ಪಕವಾಗಿ ನಾವು ಸಂರಕ್ಷಿಸಿದಾಗ ಮತ್ತು ಅಂತರ್ಜಲವನ್ನು ವೃದ್ಧಿಸಿದಾಗ ಮಾತ್ರ ಜಲ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು.

ವಾಸ್ತವವಾಗಿ ನಮ್ಮ ನದಿಗಳು ಸುರಕ್ಷೆಯಿಂದ ಇದ್ದಾವೆಯೇ ಎಂದು ಪ್ರಶ್ನೆ ಕೇಳಿಕೊಂಡಾಗ ಇದಕ್ಕೆ ಉತ್ತರ ದ್ವಂದ್ವವಾಗಿರುತ್ತದೆ. ಇತ್ತೀಚೆಗೆಷ್ಟೇ ಗಂಗಾ ನದಿಯಲ್ಲಿ ಸಾಲು ಸಾಲು ಹೆಣಗಳು ತೇಲಿಬಂದ ಹೃದಯ ವಿದ್ರಾವಕ ಸಂಗತಿಯನ್ನು ಕೇಳಿರುತ್ತೇವೆ. ಇದು ಕೇವಲ ಗಂಗೆಯ ಕಥೆಯಷ್ಟೇ ಅಲ್ಲ, ಎಲ್ಲ ನದಿಗಳ ಗೋಳು ಇದೆ. ನೀರಿಗಿಂತ ಹೆಚ್ಚು ಹೂಳು ಅಥವಾ ತ್ಯಾಜ್ಯವೇ ತುಂಬಿರುತ್ತದೆ. ಇದು ಹೀಗೆ ಮುಂದುವರಿದರೆ ನದಿಗಳ ಮೂಲವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಎಚ್ಚರಿಕೆಯ ಸಂದೇಶವೂ ಹೌದು.

ನದಿಗಳ ಸಂರಕ್ಷಣೆಗೆ ನಾವು ಕೆಲವು ಸಣ್ಣ ದೇಶಗಳ ತೆಗೆದುಕೊಂಡ ಮಾದರಿಗಳು ನಮಗೆ ಮಾದರಿಯ ಎನಿಸುತ್ತದೆ. ಆ ದೇಶಗಳಲ್ಲಿ ನದಿಗಳ ಸಂರಕ್ಷಣೆಗೆ ಕಡ್ಡಾಯವಾಗಿ ಕಾನೂನುಗಳನ್ನು ರೂಪಿಸಲಾಗಿದೆ. ಆ ಕಾನೂನುಗಳ ಕೇವಲ ಕಾನೂನುಗಳಾದೇ ವೈಯಕ್ತಿಕ ಜವಾಬ್ದಾರಿಯಾಗಿದೆ. ಅಂತಹ ಸಣ್ಣ ಸಣ್ಣ ದೇಶಗಳು ಮಾದರಿಯ ಕಾನೂನು ರಚಿಸಿರುವುದು ಗಮನಾರ್ಹ ಸಂಗತಿ. ಆ ದೇಶಗಳು ಯಾವ ರೀತಿಯಾಗಿ ಕಾನೂನು ರೂಪಿಸಿವೆ ಎಂದು ತಿಳಿಯುವುದು ಅಗತ್ಯ.

Advertisement

ಈಕ್ವೆಡಾರ್‌ನಲ್ಲಿ ಪ್ರಕೃತಿಗೆ ಹಕ್ಕು

ದಕ್ಷಿಣ ಅಮೆರಿಕದ ಒಂದು ಸಣ್ಣ ದೇಶವಾದ ಈಕ್ವೆಡಾರ್‌ನಲ್ಲಿ ಪ್ರಕೃತಿಯ ಹಕ್ಕುಗಳಿಗೆ ಮನ್ನಣೆ ನೀಡುವ ಕಾರಣಕ್ಕಾಗಿಯೇ 2007ರಲ್ಲಿ ದೇಶದ ಸಂವಿಧಾನದಲ್ಲಿ ಬದಲಾವಣೆ ಮಾಡಲಾಯಿತು. 2008ರಲ್ಲಿ ಜನಾದೇಶದ ಮೂಲಕ ಪ್ರಕೃತಿಯ ಹಕ್ಕುಗಳನ್ನು ಮಂಡಿಸಲಾಯಿತು. ಈ ಕಾನೂನಿನ್ವಯ “ಪ್ರಕೃತಿಯನ್ನು ಆಸ್ತಿ ಎಂದು ಭಾವಿಸುವ ಬದಲು, ಅದನ್ನು ಉಳಿವಿಗಾಗಿ ಕಾಪಾಡಿಕೊಳ್ಳುವ ಜವಾಬ್ದಾರಿʼಎಂದು ಘೋಷಿಸಲಾಯಿತು. ಮುಂದುವರಿದು ಜೀವನಾಧಾರ ನೈಸರ್ಗಿಕ ಚಕ್ರಗಳನ್ನು ಪುನರುಜ್ಜೀವನಗೊಳಿಸುವ ಹಕ್ಕನ್ನು ಈ ಕಾನೂನು ಪ್ರಕಾರ ಪ್ರಕೃತಿ ಹೊಂದಿದೆ ಎಂದು ತಿಳಿಸಲಾಗಿದೆ.

ಬೊಲಿವಿಯಾದಲ್ಲಿ ಮಾದರಿ ಕಾನೂನು
ದಕ್ಷಿಣ ಅಮೆರಿಕದ ಈ ಪುಟ್ಟ ದೇಶ. ಇಲ್ಲಿ ಹವಾಮಾನ ಬದಲಾವಣೆ ಹಾಗೂ ನಿಸರ್ಗದ ಅತಿ ಬಳಕೆಯನ್ನು ತಪ್ಪಿಸಲು ಪ್ರಕೃತಿಗೆ ಸಮಗ್ರ ಕಾನೂನು ಹಕ್ಕು ನೀಡಿದ ಜಗತ್ತಿನ ಪ್ರಥಮ ದೇಶವಾಗಿದೆ. ಆ ಕಾನೂನು ಎಂದರೆ “ಭೂಮಿ ತಾಯಿಯ ಹಕ್ಕುʼ (ಲಾ ಆಫ್‌ ಮದರ್‌ಅರ್ಥ್ ಆ್ಯಕ್ಟ್). ಈ ಕಾನೂನು ಪ್ರಕಾರ ನಿಸರ್ಗವನ್ನು ಗೌರವಿಸುವ ಸಂರಕ್ಷಿಸುವ ಮೂಲಕ ಹೊಸ ಸಾಮಾಜಿಕ- ಆರ್ಥಿಕ ಮಾದರಿಯನ್ನು ರೂಪಿಸಿದೆ.

ನ್ಯೂಝಿಲ್ಯಾಂಡ್‌
ವಿಶ್ವದಲ್ಲಿಯೇ ಪ್ರಥಮ ಬಾರಿಗೆ ಒಂದು ನದಿಗೆ ಕಾನೂನು ಸ್ಥಾನಮಾನ ನೀಡಿದ ದೇಶ ನ್ಯೂಝಿಲ್ಯಾಂಡ್‌. ಈ ದೇಶದಲ್ಲಿ ನದಿಯನ್ನು ಲೀಗಲ್‌ ಪರ್ಸನ್‌ ಎಂದು ಪರಿಗಣಿಸಲಾಗಿದೆ. ಅಲ್ಲಿ ಮವೋರಿ ಬುಡಕಟ್ಟು ಸಮುದಾಯಕ್ಕೆ “ವಾಂಗ್‌ ನೂಯಿʼ ನದಿ ಪವಿತ್ರವಾದುದು. ಇದು ಆ ದೇಶದ ಮೂರನೇ ಅತಿದೊಡ್ಡ ನದಿ. ಈ ಪವಿತ್ರ ನದಿಗೆ ಕಾನೂನು ನೀಡಿರುವ ಕಾರಣದಿಂದಾಗಿ ಇದರ ರಕ್ಷಣೆ ಜವಾಬ್ದಾರಿ. ಇಂತಹ ಸಣ್ಣ ಪುಟ್ಟ ದೇಶಗಳು ಕಾನೂನಿನಲ್ಲಿ ಪ್ರಕೃತಿಗೆ ಮೊದಲ ಆದ್ಯತೆ ನೀಡಿರುವುದರಿಂದ ನಮ್ಮ ದೇಶದಲ್ಲಿ ಕೂಡ ಇಂತಹ ಮಾದರಿ ಕಾನೂನುಗಳಿಗೆ ಆದ್ಯತೆ ನೀಡಿ, ಪ್ರಕೃತಿಯನ್ನು ಕಾಪಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next