Advertisement

ಮಗು ಹೆತ್ತ 15ರ ಬಾಲಕಿ; ಮಗುವಿನ ತಂದೆಗೆ 13!

03:45 AM Apr 22, 2017 | |

ತಿರುವನಂತಪುರಂ: ಕೇವಲ 15 ವರ್ಷದ ಆ ಬಾಲೆ ಮಗುವಿಗೆ ಜನ್ಮ ನೀಡಿದ್ದಾಳೆ. ಆ ಮಗುವಿನ ತಂದೆ ಪಕ್ಕದ ಮನೆ ಹುಡುಗ. ಅವನ ವಯಸ್ಸು ಈಗಿನ್ನೂ 13 ವರ್ಷ! ಇಂಥದೊಂದು ಅಸಹಜ ಘಟನೆ ಹಿನ್ನೆಲೆಯಲ್ಲಿ ತಿರುವನಂತಪುರಂ ಪೊಲೀಸರು 13 ವರ್ಷದ ಬಾಲಕನನ್ನು ಗುರುವಾರ ಬಂಧಿಸಿದ್ದಾರೆ. 

Advertisement

ಬಾಲಕನನ್ನು ಕೊಲ್ಲಂ ಮುಖ್ಯ ಮ್ಯಾಜಿಸ್ಟ್ರೇಟ್‌ ಎದುರು ಹಾಜರುಪಡಿಸಿದ್ದು, ನ್ಯಾಯಾಧೀಶರು ಬಾಲಕನಿಗೆ ಜಾಮೀನು ಮಂಜೂರು ಮಾಡಿ, ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಪೊಲೀ ಸರು ಹೇಳುವಂತೆ, “9ನೇ ತರಗತಿ ಬಾಲಕಿಯೊಬ್ಬಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಗರ್ಭಿಣಿಯಾಗಿದ್ದು,  ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಆದರೆ ಪೋಷಕರು ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದು, ಮನೆಗೆ ಹೋಗುತ್ತಿದ್ದಂತೆ ಹೆರಿಗೆಯಾಗಿದೆ. ತಕ್ಷಣ ಪೋಷಕರು ಪಕ್ಕದ ಮನೆ ಹುಡುಗನ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಯಿಯಾಗಲು ಪಕ್ಕದ ಮನೆ ಹುಡುಗನೇ ಕಾರಣ. ಆತ ರಜೆ ಕಳೆಯಲು ಮಂಗಳೂರಿನಲ್ಲಿನ ಸಂಬಂಧಿಕರ ಮನೆಗೆ ತೆರಳಿದ್ದಾನೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದು ಬಾಲಕನ ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next