Advertisement

Sagara: ಆಯತಪ್ಪಿ ಬಾವಿಗೆ ಬಿದ್ದು 3 ವರ್ಷದ ಮಗು ಸಾವು

08:14 PM Apr 17, 2024 | Vishnudas Patil |

ಸಾಗರ: ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ನಗರದ ಎಸ್‌ಎನ್ ನಗರದಲ್ಲಿ ಬುಧವಾರ ನಡೆದಿದೆ. ಮನೆ ಹಿಂಭಾಗದ ಬಳಿ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಮನ್ನತ್ (3) ಮೃತಪಟ್ಟಿದ್ದಾಳೆ.

Advertisement

ಬಾಲಕಿ ಆಟವಾಡುತ್ತಾ ಬಾವಿ ಬಳಿ ತೆರಳಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ. ಮಗುವಿನ ತಾಯಿ ತತ್ ಕ್ಷಣ ನೋಡಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಮಗುವನ್ನು ಮೇಲಕ್ಕೆತ್ತಿದ್ದು, ಮಗುವಿನ ತಲೆ ಹಾಗೂ ಹಣೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಮನ್ನತ್ ಅಷ್ಟಾರಲ್ಲಾಗಲೇ ಮೃತಪಟ್ಟಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next