Advertisement

Canada; ಅಮೆರಿಕ ಮಾದರಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ

12:41 AM Apr 15, 2024 | Team Udayavani |

ಒಟ್ಟಾವಾ: ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಗಳನ್ನು ಹತ್ಯೆ ನಡೆಸುವ ಘಟನೆಗಳು ನಡೆಯುತ್ತಿರು ವಂತೆಯೇ ಕೆನಡಾದ ದಕ್ಷಿಣ ವ್ಯಾಂಕೋವರ್‌ನಲ್ಲಿ ಹರಿಯಾಣ ಮೂಲದ ವಿದ್ಯಾರ್ಥಿ ಚಿರಾಗ್‌ ಅಂತಿಲ್‌ (24)ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ತಮ್ಮ ಕಾರಿನಲ್ಲಿ ಕುಳಿತಿದ್ದ ಚಿರಾಗ್‌ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿ ದ್ದಾರೆ. ವ್ಯಾಂಕೋವರ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ಮುಂದುವರಿದಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿ ಗಳು ಹೇಳಿದ್ದಾರೆ. “ಚಿರಾಗ್‌ಗೆ ಯಾರೊಂದಿಗೂ ಕಲ ಹ ಇರಲಿಲ್ಲವೆಂದು ಅವರ ಸಹೋದರ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next