Advertisement

US ಷಿಕಾಗೋದಲ್ಲಿ ಶೂಟೌಟ್‌: 7 ವರ್ಷದ ಬಾಲಕಿ ಸಾವು

12:29 AM Apr 15, 2024 | Team Udayavani |

ಷಿಕಾಗೋ: ಅಮೆರಿಕಾದ ಷಿಕಾಗೋದಲ್ಲಿ ಕೌಟುಂಬಿಕ ಕಾರ್ಯಕ್ರಮದ ಮೇಲೆ ಶಂಕಿತ ಗ್ಯಾಂಗ್‌ಸ್ಟರ್‌ಗಳು ನಡೆಸಿದ ಗುಂಡಿನ ದಾಳಿಯಲ್ಲಿ 7 ವರ್ಷದ ಬಾಲಕಿಯೊಬ್ಬಳು ಅಸು ನೀಗಿದ್ದು, ಇಬ್ಬರು ಮಕ್ಕಳು ಸೇರಿ 7 ಮಂದಿ ಗಂಭೀರ ಗಾಯ ಗೊಂಡಿದ್ದಾರೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಕಾರ್ಯಕ್ರಮದ ಹೊರಗೆ ನಿಂತಿದ್ದ ಜನರ ಮೇಲೆ ಅಪರಿಚಿತ ಗ್ಯಾಂಗ್‌ ದಾಳಿ ನಡೆಸಿದೆ. ತತ್‌ಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹಣೆಗೆ ಗುಂಡು ತಾಗಿದ್ದ ಬಾಲಕಿ ಮೃತ ಪಟ್ಟಿ ದ್ದಾಳೆ. 1 ವರ್ಷದ ಗಂಡು ಮಗು, 7 ವರ್ಷದ ಬಾಲ ಕನಿಗೆ ಗುಂಡುಗಳು ತಾಗಿದ್ದು, ಸ್ಥಿತಿ ಗಂಭೀರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next