Advertisement
ಹೌದು, ತಾಲೂಕಿನ ಪ್ರತಿಯೊಂದು ಹಳ್ಳಿ, ಪಟ್ಟಣಕ್ಕೆ ಕೃಷ್ಣೆ, ಘಟಪ್ರಭಾ ನದಿಯ ಒಡಲು ಕುಡಿಯುವ ನೀರಿನ ಬಾಯಾರಿಕೆ ನೀಗಿಸಿವೆ. ಕೆಲವು ವರ್ಷಗಳ ಹಿಂದೆ ಹಲವಾರು ಬಾರಿ ಬೇಸಿಗೆಯಲ್ಲಿ ಎರಡು ನದಿಗಳು ಇದ್ದರೂ ತಾಲೂಕಿನ ಜನತೆ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಸ್ಥಿತಿ-ಸಮಸ್ಯೆಗಳಿಲ್ಲ.
Related Articles
Advertisement
ಸಹಾಯವಾಣಿ ಸ್ಥಾಪನೆ: ತಾಲೂಕಿನ ಎಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿದ್ದು, ಒಂದು ವೇಳೆ ರಿಪೇರಿ ಉಂಟಾದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ಸಹಾಯವಾಣಿ ನಿರ್ಮಾಣ ಸ್ಥಾಪಿಸಲಾಗುವುದು. ಗ್ರಾಮಸ್ಥರ ದೂರು ಬಂದ ಎರಡು ದಿನಗಳ ಒಳಗಾಗಿ ತ್ವರಿತವಾಗಿ ದುರಸ್ತಿಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.
ಪಟ್ಟಣಕ್ಕೆ ನೀರಿನ ಸಮಸ್ಯೆ: ಇಡೀ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಹುತೇಕ ಉದ್ಭವಿಸುವ ಸಾಧ್ಯತೆ ಇಲ್ಲ. ಆದರೆ, ತಾಲೂಕು ಕೇಂದ್ರವಾದ ಬೀಳಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಕೊಂಚ ಹೆಚ್ಚಾಗಿಯೇ ಇದೆ. ಒಟ್ಟು 18 ವಾರ್ಡ್ ಹೊಂದಿರುವ ಬೀಳಗಿ ಪಟ್ಟಣಕ್ಕೆ ಗುಳಬಾಳ ಜಾಕ್ ವೆಲ್‌ನಿಂದ ನೀರನ್ನು ಎತ್ತಿ ತೆಗ್ಗಿಯ ನೀರು ಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಅಲ್ಲಿಂದ ಪಟ್ಟಣದ ಗಾಂಧಿ ನಗರದಲ್ಲಿನ 10 ಲಕ್ಷ ಲೀಟರ್ ಸಾಮರ್ಥ್ಯದ ಮತ್ತು ಸಿದ್ದೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ 4 ಲಕ್ಷ ಲೀಟರ್ ಸಾರ್ಥ್ಯದ ನೀರಿನ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ಟ್ಯಾಂಕ್‌ಗಳು ಭರ್ತಿಯಾಗಲು 14 ಗಂಟೆ ಬೇಕು. ಪಟಣದ ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ 14 ಲಕ್ಷ ಲೀಟರ್. ಆದರೆ ಪಟ್ಟಣದಲ್ಲಿ ಅಂದಾಜು 20 ಸಾವಿರ ಜನಸಂಖ್ಯೆ ಇದೆ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಒಂದು ದಿನಕ್ಕೆ ಸುಮಾರು 27 ಲಕ್ಷ ಲೀಟರ್ ನೀರು ಬೇಕು. ಹೀಗಾಗಿ ಒಂದು ವಾರಕ್ಕೊಮ್ಮೆ ಇಲ್ಲಿನ ನಲ್ಲಿಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಪಟ್ಟಣದಲ್ಲಿ ಒಟ್ಟು 7 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವೂ ಕೂಡಾ ಸಮರ್ಪಕವಾಗಿ ಬಳಕೆಯಾ ಗುತ್ತಿಲ್ಲ. ಒಂದೆಡೆ ಅಧಿಕಾರಿಗಳ ದಿವ್ಯ ನಿರ್ಲಕ್ಷವಾದರೆ, ಇನ್ನೊಂದೆಡೆ ಸಾರ್ವಜನಿಕರ ಸಹಕಾರದ ಕೊರತೆಯಿಂದ ಘಟಕಗಳಲ್ಲಿನ ಸಾಮಗ್ರಿಗಳು ಹಾಳಾಗುತ್ತಿವೆ ಎಂಬ ದೂರು ಕೇಳಿ ಬಂದಿದೆ.
ಪಟ್ಟಣಕ್ಕೆ 20 ವರ್ಷಗಳ ಹಿಂದೆ ಅಳವಡಿಸಿದ ಪೈಪ್‌ಗ್ಳ ಮೂಲಕವೆ ನೀರು ಸರಬರಾಜು ಮಾಡುತ್ತಿರುವುದರಿಂದ ಈಗಿನ ಜನ ಸಂಖೆಗೆ ಅನುಗುನವಾಗಿ ಸಮರ್ಪಕವಾಗಿ ನೀರು ಒದಗಿಸಲಾಗುತ್ತಿಲ್ಲ. ಆದರೆ ಮುಂಬರುವ 2-3 ತಿಂಗಳಲ್ಲಿ ನಿರಂತರ 24 ಗಂಟೆ ನೀರು ಒದಗಿಸುವ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
-ಕಿರಣ ನಾಯ್ಕರ