Advertisement

ಮೂರು ನದಿಗಳಿದ್ರೂ ನೀಗದ ಬಾಯಾರಿಕೆ

01:21 PM May 17, 2019 | Team Udayavani |

ಬಾಗಲಕೋಟೆ: ಮುಳುಗಡೆ ಜಿಲ್ಲೆ ಎಂದೇ ಕರೆಸಿಕೊಳ್ಳುವ ಬಾಗಲಕೋಟೆ ಪ್ರತಿ ವರ್ಷವೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪಿಲ್ಲ.

Advertisement

ಜಿಲ್ಲೆಯಲ್ಲಿ 5 ನಗರಸಭೆ, ಐದು ಪುರಸಭೆ ಹಾಗೂ ಐದು ಪಟ್ಟಣ ಪಂಚಾಯತ ಇದ್ದು, ಇವುಗಳ ವ್ಯಾಪ್ತಿಯಲ್ಲಿ 5,88,066 ಜನಸಂಖ್ಯೆ ಇದೆ. ಆರು ತಾಲೂಕು ವ್ಯಾಪ್ತಿಯಲ್ಲಿ 1072 ಜನ ವಸತಿ ಪ್ರದೇಶಗಳಿದ್ದು, ಅವುಗಳಲ್ಲಿ 13,01,686 ಜನರಿದ್ದು, ಒಟ್ಟು 18,89,752 ಜನಸಂಖ್ಯೆ ಇದೆ.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 30 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗಳಿದ್ದು, ಸದ್ಯ ಘಟಪ್ರಭಾ ಮತ್ತು ಮಲಪ್ರಭಾ ನದಿ ಪಾತ್ರದ ಯೋಜನೆಗಳು ಚಾಲ್ತಿಯಲ್ಲಿವೆ. ಕೃಷ್ಣಾ ನದಿ ಸಂಪೂರ್ಣ ಬತ್ತಿದ್ದು, ಇದರ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜ್‌ ಅವಲಂಬಿತ ಐದು ಯೋಜನೆಗಳು ಸ್ಥಗಿತಗೊಂಡಿವೆ. ಹೀಗಾಗಿ ಸದ್ಯ ಸರ್ಕಾರಿ ಮತ್ತು ಖಾಸಗಿ ಕೊಳವೆ ಬಾವಿಗಳ ಮೂಲಕವೇ ನೀರು ಕೊಡಲಾಗುತ್ತಿದೆ.

ಮುಖ್ಯವಾಗಿ ಇದೇ ಹಿಪ್ಪರಗಿ ಬ್ಯಾರೇಜ್‌ ಅವಲಂಬಿಸಿ ಜಮಖಂಡಿ, ತೇರದಾಳ, ರಬಕವಿ-ಬನಹಟ್ಟಿ ನಗರಗಳಿಗೆ ನೀರು ಕೊಡಲಾಗುತ್ತಿತ್ತು. ಬ್ಯಾರೇಜ್‌ ನೀರು ಖಾಲಿಯಾಗಿದ್ದರಿಂದ ಮೂರು ನಗರಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ತಲಾ ಒಂದೊಂದು ಟ್ಯಾಂಕರ್‌ ಮೂಲಕ ತುರ್ತು ಸಮಸ್ಯೆ ಇರುವ ವಾರ್ಡ್‌ಗಳಿಗೆ ನೀರು ಕೊಡಲಾಗುತ್ತಿದೆ. ಅಲ್ಲದೇ ರಬಕವಿ-ಬನಹಟ್ಟಿಯಲ್ಲಿ 115 ಖಾಸಗಿ ವ್ಯಕ್ತಿಗಳು ನೀರು ಕೊಡಲು ಮುಂದೆ ಬಂದಿರುವುದು ಆಡಳಿತಕ್ಕೆ ಸಹಕಾರ ನೀಡಿದೆ ಎನ್ನುತ್ತಾರೆ ಅಧಿಕಾರಿಗಳು.

Advertisement

11 ಗ್ರಾಮಕ್ಕೆ ಟ್ಯಾಂಕರ್‌ ನೀರು: ಕೊಳವೆ ಬಾವಿ ವಿಫಲಗೊಂಡ ಹಿನ್ನೆಲೆಯಲ್ಲಿ ಹುನಗುಂದ ತಾಲೂಕಿನ ಗುಡೂರ ಎಸ್‌.ಸಿ, ಗಾಣದಾಳ, ಚಿಕನಾಳ, ಧನ್ನೂರ, ಬಾದಾಮಿ ತಾಲೂಕಿನ ಲಿಂಗಾಪುರ, ಸಾಗನೂರ, ನರೇನೂರ ತಾಂಡಾ-1 ಮತ್ತು 2, ಜಮಖಂಡಿ ತಾಲೂಕಿನ ಕಲ್ಲಹಳ್ಳಿ, ಬೆಳಗಲಿ ವಸ್ತಿ, ಕುಳಲಿ ವಸ್ತಿ ಸೇರಿ ಒಟ್ಟು 11 ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೇ ಜಿಲ್ಲೆಯ ವಿವಿಧೆಡೆ 104 ಖಾಸಗಿ ಕೊಳವೆ ಬಾವಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಈಗಾಗಲೇ 12 ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಟಿಟಿಎಫ್‌ (ತಾಲೂಕು ಟಾಸ್ಕ್ಪೋರ್ಸ್‌ ಸಮಿತಿ) ಅಡಿ ಅಗತ್ಯವಿರುವ 210 ಕಡೆ ಕಿರು ನೀರು ಪೂರೈಕೆ ಯೋಜನೆ ಕೈಗೊಳ್ಳಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಟ್ಟು 780 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ 10 ಘಟಕಗಳು ಸ್ಥಗಿತಗೊಂಡಿವೆ.

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next