Advertisement
ರಂಗಭೂಮಿಯಲ್ಲಿ ಪಳಗಿರುವ ಕಾಜಲ್ ಅವರು ಇತ್ತೀಚೆಗೆ ‘ಐಸಿಯು-ನೋಡುವೆ ನಿನ್ನನ್ನೆ’ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆ ನೀಡಿದ್ದಾರೆ. ಚಲನಚಿತ್ರಗಳಲ್ಲಿ ಈ ಹಿಂದಿನಿಂದಲೂ ಮಂಗಳಮುಖೀಯರನ್ನು ಹೆಚ್ಚಾಗಿ ಹಾಸ್ಯ ಪಾತ್ರಗಳಿಗೆ ಬಳಸಲಾಗುತ್ತಿತ್ತು. ಆದರೆ ಇದೀಗ ಮೊದಲ ಬಾರಿಗೆ ಮಂಗಳಮುಖೀಯೋರ್ವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. 30 ಲ. ರೂ. ಬಜೆಟ್ ನ ಈ ಚಿತ್ರದ ಚಿತ್ರೀಕರಣ ಮೈಸೂರು ಮತ್ತು ಮಂಗಳೂರಿನಲ್ಲಿ ನಡೆಯುತ್ತಿದೆ. ಈ ವರ್ಷದಲ್ಲೇ ಚಿತ್ರ ಬಿಡುಗಡೆಗೊಳಿಸಲು ನಿರ್ಧರಿಸಿದ್ದೇವೆ ಎಂದು ಚಂದನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾನು ಮೂಲತಃ ಮಂಡ್ಯದವಳು. ನಾನು ಸಣ್ಣವಳಿರುವಾಗಲೇ ನಟಿ, ರೇಡಿಯೋ ಜಾಕಿಯಾಗಬೇಕು ಎಂಬ ಕನಸಿತ್ತು. ಉಡುಪಿಯ ರಂಗಭೂಮಿ ಸಂಸ್ಥೆಯಲ್ಲಿ ನಾಟಕಗಳಲ್ಲಿ ಅವಕಾಶ ದೊರೆಯಿತು. ಇದು ನನಗೆ ಹೆಚ್ಚು ಗೌರವ ತಂದುಕೊಟ್ಟಿತು. ಇದೀಗ ‘ಲವ್ ಬಾಬಾ’ ಚಿತ್ರದಲ್ಲಿ ನನಗೆ ನಾಯಕಿಯಾಗುವ ಅವಕಾಶ ನೀಡಲಾಗಿದೆ. ಈ ಮೂಲಕ ನನ್ನಲ್ಲಿರುವ ಹೆಣ್ಣಿನ ಭಾವನೆಗಳಿಗೆ ಬೆಲೆ ನೀಡಿದಂತಾಗಿದೆ. ಮಂಗಳಮುಖೀಯರಿಗೂ ವಿಶೇಷ ಗೌರವ ದೊರೆತಂತಾಗಿದೆ. ಇದರಿಂದ ತಂಬಾ ಖುಷಿಯಾಗಿದೆ ಎಂದು ನಟಿ ಕಾಜಲ್ ಹೇಳಿದರು. ಚಂದನ್ ಗೌಡ ಈ ಹಿಂದೆ ‘ಮಳೆಗಾಲ’ ಎಂಬ ಸಿನೆಮಾ ನಿರ್ದೇಶಿಸಿದ್ದರು. ‘ಲವ್ ಬಾಬಾ’ ಅವರ ಎರಡನೇ ಚಿತ್ರ. ಇದರಲ್ಲಿ ಉಡುಪಿಯ ಅಬ್ದುಲ್ ರೆಹಮಾನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರೆಹಮಾನ್, ಕಲಾವಿದ ರವಿ ಉಪಸ್ಥಿತರಿದ್ದರು.