Advertisement
ಒಂದು ನರಿ, ಕೊಕ್ಕರೆಯನ್ನು ಮನೆಯ ಔತಣಕೂಟಕ್ಕೆ ಆಹ್ವಾನಿಸಿತು. ಆ ದಿನ ಮಧ್ಯಾಹ್ನ ಕೊಕ್ಕರೆ ಊಟದ ಸಮಯಕ್ಕೆ ಸರಿಯಾಗಿ ನರಿಯ ಮನೆಗೆ ಬಂತು. ಭರ್ಜರಿ ಔತಣದ ನಿರೀಕ್ಷೆಯಲ್ಲಿದ್ದ ಅದು ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ. ನರಿಯ ಮನೆಯವರೆಲ್ಲರೂ ಕೊಕ್ಕರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಅಡುಗೆ ಮನೆಯಿಂದ ಸೊಗಸಾದ ಪಾಯಸದ ವಾಸನೆ ಬರುತ್ತಿತ್ತು. ಆದರೆ ಮನೆಯವರ ಯಾರ ಮುಖದಲ್ಲೂ ಅಷ್ಟೊಂದು ಸಂತೋಷವಿರಲಿಲ್ಲ. ಕೊಕ್ಕರೆ “ಏನು ನರಿಯಣ್ಣಾ, ನಿನ್ನ ಮುಖದಲ್ಲಿ ಏನೋ ದುಗುಡವಿದೆ. ಏನಾದರೂ ತೊಂದರೆಯೆ?’ ಎಂದು ವಿಚಾರಿಸಿತು. ಅದಕ್ಕೆ ನರಿ “ಹೌದು ಕೊಕ್ಕರೆಯಣ್ಣಾ, ಮನೆಯಲ್ಲಿ ಏನೋ ತೊಂದರೆ. ಆದ್ದರಿಂದ ಔತಣಕ್ಕೆ ಪಾಯಸ ಬಿಟ್ಟು ಬೇರೆ ಏನನ್ನೂ ಕೊಡಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಬೇಸರ’ ಎಂದು ಅಲವತ್ತುಕೊಂಡಿತು. ನರಿಯ ಮಾತು ಕೇಳಿ, ಬೆಳಿಗ್ಗೆಯಿಂದ ಏನೂ ತಿನ್ನದಿದ್ದ ಕೊಕ್ಕರೆಗೆ ನಿರಾಸೆಯನ್ನು ತೋರಗೊಡದೆ, “ಪಾಯಸವಾದರೂ ಇದೆಯಲ್ಲಾ’ ಎಂದುಕೊಂಡು ನರಿಗೆ ಸಮಾಧಾನ ಹೇಳಿತು.
Related Articles
Advertisement
ಔತಣದ ದಿನ, ನರಿ ಬೆಳಿಗ್ಗೆಯಿಂದ ಏನೂ ತಿನ್ನದೆ ಮಧ್ಯಾಹ್ನ ಕೊಕ್ಕರೆಯ ಮನೆಗೆ ಬಂದಿತು. ಮನೆಯಲ್ಲೆಲ್ಲಾ ಮೀನಿನ ಅಡುಗೆಯ ಘಮಲು ತುಂಬಿತ್ತು. ಅದರ ವಾಸನೆಗೆ, ನರಿಯ ಬಾಯಲ್ಲಿ ನೀರೂ, ಹೊಟ್ಟೆಯಲ್ಲಿ ಹಸಿವೂ ಎರಡೂ ಹೆಚ್ಚಾದವು. ಕೊಕ್ಕರೆ, ಎರಡು ಕಡಿಮೆ ಅಗಲದ ಬಾಯಿಯುಳ್ಳ, ಉದ್ದ ಕುತ್ತಿಗೆಯ ಪಾತ್ರೆಯಲ್ಲಿ ಮೀನಿನ ಖಾದ್ಯಗಳನ್ನು ಅರ್ಧರ್ಧ ತುಂಬಿಸಿ ತಂದು ಒಂದನ್ನು ನರಿಗೆ ಕೊಟ್ಟು, ಇನ್ನೊಂದನ್ನು ತನ್ನ ಮುಂದಿಟ್ಟುಕೊಂಡು “ಸಂಕೋಚ ಬೇಡ. ಕೇಳಿ ಬಡಿಸಿಕೊಂಡು ಚೆನ್ನಾಗಿ ಊಟ ಮಾಡು ನರಿಯಣ್ಣಾ’ ಎಂದು, ತನ್ನ ಉದ್ದ ಕೊಕ್ಕಿನಿಂದ ಪಾತ್ರೆಯ ಆಳದಲ್ಲಿದ್ದ ಮೀನುಗಳನ್ನು ಅರಾಮವಾಗಿ ತಿನ್ನತೊಡಗಿತು.
ಇತ್ತ, ಪಾತ್ರೆ ಒಳಕ್ಕೆ ತನ್ನ ತಲೆಯನ್ನು ತೂರಿಸಲಾರದೆ, ಒಂದೇ ಒಂದು ಮೀನನ್ನೂ ತಿನ್ನಲಾಗಲಿಲ್ಲ. ಕೊಕ್ಕರೆಯ ಬುದ್ಧಿವಂತಿಕೆ ನರಿಗೆ ಅರ್ಥವಾಗಿತ್ತು. ತನ್ನ ಪಾಲಿನ ಊಟ ಮುಗಿಸಿ ಏನೋ ಹೇಳಲು ಬಂದ ಕೊಕ್ಕರೆಯ ಮಾತನ್ನು ಕೇಳಿಸಿಕೊಳ್ಳದೆ, ನರಿ ಊಟವನ್ನೂ ಬಿಟ್ಟು ಓಡಿಹೋಯಿತು. ನರಿಯ ಪಾಲಿನ ಊಟವನ್ನೂ ಸವಿದುಂಡ ಕೊಕ್ಕರೆ ವಿಜಯದ ನಗೆ ನಕ್ಕಿತು.
– ಡಾ. ಬಿ.ಆರ್. ಸತ್ಯನಾರಾಯಣ, ಬೆಂಗಳೂರು