ವಾಷಿಂಗ್ಟನ್: ಭಾರತಕ್ಕೆ ವಾಪಸು ಹೋಗುವಂತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ನಿಕ್ಕಿ ಹ್ಯಾಲೆ ಅವರಿಗೆ ಕನ್ಸರ್ವೇಟಿವ್ ಪಕ್ಷದ ನಾಯಕಿ ಅನ್ ಕೌಲ್ಟರ್ ವಾಗ್ಧಾಳಿ ನಡೆಸಿದ್ದಾರೆ.
ಆನ್ ಮಾಡಿರುವ ಜನಾಂಗೀಯ ನಿಂದನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಪೋಡ್‌ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಆನ್, ನಿಕ್ಕಿ ಹ್ಯಾಲೆ ಅವರನ್ನು ಮೂರ್ಖಳು, ಅವಿವೇಕಿ ಎಂದು ಜರಿದಿದ್ದಾರೆ. ಇದೇ ವೇಳೆ ಭಾರತವನ್ನು ಟೀಕಿಸಿದ್ದಾರೆ.
“ಭಾರತದಲ್ಲಿ ಗೋವುಗಳಿಗೆ ಪೂಜಿಸುತ್ತಾರೆ. ಆದರೆ ಅವುಗಳು ಹಸಿವಿನಿಂದ ಅಲ್ಲಿ ಒದ್ದಾಡುತ್ತಿವೆ. ಪೂಜೆಯಿಂದ ಏನು ಪ್ರಯೋಜನ?. ಅಲ್ಲದೇ ಅಲ್ಲಿ ಇಲಿಗೂ ದೇವಾಲಯವಿದೆ. ಅಲ್ಲಿ ಇಲಿಗಳನ್ನೂ ಅವರು ಪೂಜಿಸುತ್ತಾರೆ,’ ಎಂದು ವ್ಯಂಗ್ಯವಾಡಿದ್ದಾರೆ.
ನಿಕ್ಕಿ ಹ್ಯಾಲೆ ಅವರು ಅಮೆರಿಕದಲ್ಲಿ ಜನಿಸಿದ್ದು, ಅವರ ತಂದೆ-ತಾಯಿ ಭಾರತ ಮೂಲದವರಾಗಿದ್ದಾರೆ.