Advertisement

ಷೇರುಪೇಟೆಯ ಈ ಹಿಂದಿನ ಅತಿ ದೊಡ್ಡ ಕುಸಿತಗಳು

09:34 AM Jun 20, 2022 | Team Udayavani |

ಕಳೆದ ವಾರ ಅಂದರೆ ಜೂ.13ರಿಂದ ಜೂ.17ರ ವರೆಗೆ ಬಾಂಬೆ ಷೇರು ಪೇಟೆ ಮತ್ತು ನಿಫ್ಟಿ ಸೂಚ್ಯಂಕ ಕುಸಿತಗಳನ್ನೇ ಕಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ ಕಳೆದ ವಾರದ ಅವಧಿಯಲ್ಲಿ 15 ಲಕ್ಷ ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಹಿಂದಿನ ವರ್ಷಗಳಲ್ಲಿ ಉಂಟಾಗಿದ್ದ ಮಹಾ ಕುಸಿತಗಳ ಹಿನ್ನೋಟ ಇಲ್ಲಿದೆ

Advertisement

1992
ಷೇರು ಪೇಟೆ ದಲ್ಲಾಳಿ ಹರ್ಷದ್‌ ಮೆಹ್ತಾ ಹಗರಣದಿಂದಾಗಿ ಒಂದು ವರ್ಷ ಗರಿಷ್ಠಕ್ಕೆ ಕುಸಿದಿತ್ತು. ಆತನ ವಂಚನೆಯಿಂದಾಗಿ ಬಿಎಸ್‌ಇನಲ್ಲಿ ಶೇ.12.77ರಷ್ಟು ಷೇರುಗಳು ಕುಸಿದಿದ್ದವು

2007
ಆ ವರ್ಷದ ಏ.2ರಂದು ಬಿಎಸ್‌ಇ ಸೂಚ್ಯಂಕ 617 ಪಾಯಿಂಟ್ಸ್‌ ಕುಸಿದಿತ್ತು. ಇದು ಷೇರು ಮಾರುಕಟ್ಟೆಯ ಅತ್ಯಂತ ದೊಡ್ಡ ಪತನ ಎಂದು ದಾಖಲಾಗಿದೆ.

2008
ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದ್ದ ಕಾರಣದಿಂದಾಗಿ ಬಿಎಸ್‌ನಲ್ಲಿ ಜ.22, 2008ರಲ್ಲಿ 875 ಪಾಯಿಂಟ್ಸ್‌ ಕುಸಿದಿತ್ತು. 2008ರ ಫೆಬ್ರವರಿಯಲ್ಲಿ 11 834 ಪಾಯಿಂಟ್ಸ್‌ ಕುಸಿದಿತ್ತು, 2008ರ ಅ.24ರಂದು 1,070 ಕುಸಿದಿತ್ತು.

2015
ಚೀನದ ಕರೆನ್ಸಿ ಯುವಾನ್‌ ಅನ್ನು ಅಪಮೌಲ್ಯಗೊಳಿಸಿದ್ದರಿಂದ 2015ರ ಆ.24ರಂದು ಬಿಎಸ್‌ಇ ಸೂಚ್ಯಂಕ 1,624 ಪಾಯಿಂಟ್ಸ್‌ ಕುಸಿದಿತ್ತು. ಚೀನಾ ಅರ್ಥ ವ್ಯವಸ್ಥೆ ಕುಸಿಯಲಿದೆ ಎಂಬ ಭೀತಿ ಕಾರಣವಾಗಿತ್ತು.

Advertisement

2016
ಕೇಂದ್ರ ಸರ್ಕಾರ ನೋಟು ಅಮಾನ್ಯ ನಿರ್ಧಾರ ಜಾರಿಗೊಳಿಸಿದ್ದರಿಂದ 1,689 ಪಾಯಿಂಟ್ಸ್‌ ಸೂಚ್ಯಂಕ ಕುಸಿತಕ್ಕೆ ಕಾರಣವಾಯಿತು. ಆ ವರ್ಷ 26 ಸಾವಿರಕ್ಕಿಂತಲೂ ಕಡಿಮೆ ಮಟ್ಟಕ್ಕೆ ಸೂಚ್ಯಂಕ ಪತನಗೊಂಡಿತ್ತು.

2019
ಕೊರೊನಾದಿಂದಾದ ಆರ್ಥಿಕ ಹಿಂಜರಿತದ ಆತಂಕದಿಂದಾಗಿ ಬಿಎಸ್‌ಇ ಮತ್ತು ನಿಫ್ಟಿಸೂಚ್ಯಂಕ ಇಳಿಕೆಯಾಗಿತ್ತು. ಆ ವರ್ಷದ ಕೇಂದ್ರ ಬಜೆಟ್‌ನ ಮರುದಿನವೇ ಹೂಡಿಕೆದಾರರಿಗೆ 13.70 ಲಕ್ಷ ಕೋಟಿ ರೂ. ನಷ್ಟ ಉಂಟಾಗಿತ್ತು.

2020
ಮಾ.20ರಂದು ಎಸ್‌ ಬ್ಯಾಂಕ್‌ ಬಿಕ್ಕಟ್ಟಿಗೆ ತುತ್ತಾಗಿದ್ದ ಕಾರಣ ಬಿಎಸ್‌ಇನಲ್ಲಿ 3,944 ಪಾಯಿಂಟ್ಸ್‌ ಇಳಿಕೆಯಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next