Advertisement

“ಅಂದವಾದ’ಟೀಸರ್‌ ಬಂತು

10:09 AM Aug 21, 2019 | Lakshmi GovindaRaj |

ಕಳೆದ ವಾರ ಕನ್ನಡದ ಈ ವರ್ಷದ ಬಹುನಿರೀಕ್ಷಿತ ಚಿತ್ರ “ಕುರುಕ್ಷೇತ್ರ’ ಅದ್ಧೂರಿಯಾಗಿ ಬಿಡುಗಡೆಯಾಗಿ ಹೊರಬಂದಿದೆ. ಇದೇ ವೇಳೆ “ಕುರುಕ್ಷೇತ್ರ’ದ ಜೊತೆ ಜೊತೆಗೆ ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ “ಅಂದವಾದ’ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಿದೆ.

Advertisement

“ಕಳೆದ ತಿಂಗಳು ಬಿಡುಗಡೆಯಾದ “ಅಂದವಾದ’ ಚಿತ್ರದ ಹಾಡುಗಳು ಕೂಡ ಕೇಳುಗರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ವಿಜಯ ಪ್ರಕಾಶ್‌, ಸೋನು ನಿಗಮ್‌, ಆಲಾ ಬಿ. ಬಾಲಾ ಮೊದಲಾದವರು ಹಾಡಿರುವ ಹಾಡುಗಳಿಗೆ ಪ್ರೇಕ್ಷಕರು ತಲೆದೂಗುತ್ತಿದ್ದಾರೆ. ಅದರಲ್ಲೂ ಚಿತ್ರದ ಟೈಟಲ್‌ಸಾಂಗ್‌ ಮತ್ತು ಪ್ಯಾಥೋಸಾಂಗ್‌ಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲೂ ಹಾಡುಗಳಿಗೆ, ಟೀಸರ್‌ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇಡೀ ಸಿನಿಮಾವನ್ನು ಮಾನ್ಸೂನ್‌ ಫೀಲ್‌ನಲ್ಲಿ ಕಟ್ಟಿಕೊಟ್ಟಿರುವುದರಿಂದ, ಚಿತ್ರದ ಹಾಡುಗಳು ಮತ್ತು ಟೀಸರ್‌ನ್ನೂ ಮಾನ್ಸೂನ್‌ನಲ್ಲೇ ಹೊರತಂದಿದ್ದೇವೆ’ ಎನ್ನುತ್ತದೆ ಚಿತ್ರತಂಡ. ಜೈ ಹಾಗೂ ಅನುಷಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಚಲಪತಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿಕ್ರಮ್‌ ವರ್ಮನ್‌ ಸಂಗೀತ ಸಂಯೋಜಿಸಿದ್ದು, ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ, ಹೃದಯ ಶಿವ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಮಧುಶ್ರೀ ಗೋಲ್ಡನ್‌ ಫ್ರೇಮ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಡಿ.ಆರ್‌. ಮಧು ಜಿ. ರಾಜ್‌ ಹಾಗೂ ಹೆಚ್‌.ಸಿ. ಜಯಕುಮಾರ್‌ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಸಕಲೇಶಪುರ, ಬಿಸಿಲೆ ಘಾಟ್‌, ಚಿಕ್ಕಮಗಳೂರು, ಅಂಡಮಾನ್‌ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಅಂತಿಮ ಹಂತದ ಪ್ರಮೋಶನ್‌ ಕಾರ್ಯಗಳಲ್ಲಿ ಬ್ಯುಸಿಯಾಗಿರುವ “ಅಂದವಾದ’ ಚಿತ್ರತಂಡ, ಸೆಪ್ಟೆಂಬರ್‌ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next