Advertisement

ನ್ಯಾ|ನಾಗಮೋಹನದಾಸ್‌ ವರದಿ ಒಪ್ಪುವ ಮಾತೇ ಇಲ್ಲ

06:40 AM Mar 08, 2018 | |

ದಾವಣಗೆರೆ: ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನ್ಯಾ| ನಾಗಮೋಹನದಾಸ್‌ ನೇತೃತ್ವದ ಸಮಿತಿಯ ವರದಿಯನ್ನು
ಅಂಗೀಕರಿಸಬಾರದು ಮತ್ತು ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ನೀಡುವ ಸಂಬಂಧ ಕೇಂದ್ರಕ್ಕೆ
ಶಿಫಾರಸು ಮಾಡಲೇಬಾರದು ಎಂದು ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್‌ ಪ್ರಬಲವಾಗಿ ಆಗ್ರಹಿಸಿದೆ.

Advertisement

ನಗರದ ಶ್ರೀಶೈಲ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ|ಪ್ರಸನ್ನ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ನಾಡಿನ ಸಮಸ್ತ ವೀರಶೈವ ಮಠಾಧೀಶರು, ಹರ ಗುರು ಚರ ಮೂರ್ತಿಗಳು ಪ್ರಾರಂಭದಿಂದಲೂ ತಜ್ಞರ ಸಮಿತಿ ರಚನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದು, ಈಗ ಆ ಸಮಿತಿ ನೀಡಿರುವ ವರದಿ ಒಪ್ಪುವ ಮಾತೇ ಇಲ್ಲ. ರಾಜ್ಯ ಸರ್ಕಾರ ನ್ಯಾ| ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ವರದಿ ತಿರಸ್ಕರಿಸಬೇಕು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಇಲ್ಲಿಗೆ ಕೈ ಬಿಡಬೇಕು. ಇದು ಬಹುಸಂಖ್ಯಾತರ ಮನವಿ. ಒತ್ತಾಯಕ್ಕೆ ಸಿಎಂ ಮನ್ನಣೆ ನೀಡಬೇಕು. ಹಠದಿಂದ ಏನಾದರೂ ಮುಂದುವರಿದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧರ್ಮ ಯುದ್ಧ ಸಾರಲಾಗುವುದು ಎಂದು ಎಚ್ಚರಿಸಿದರು.

ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಭಗವತ್ಪಾದರು, ಹೊಸಪೇಟೆಯ ಜಗದ್ಗುರು ಸಂಗನ ಬಸವ ಸ್ವಾಮೀಜಿ, ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮುಕ್ತಿ ಮಂದಿರದ ಶ್ರೀ ವಿಮಲ ರೇಣುಕ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.

ಲಿಂಗಾಯತ ಸಮಾಜದ 99 ಒಳಪಂಗಡಗಳಲ್ಲಿ ಲಿಂಗಾಯತ ಕುರುಬ ಮತ್ತು ಲಿಂಗಾಯತ ಕುರುಬರು ಇವೆ ಎಂಬ ಪ್ರಕಟಣೆ
ನೀಡಲಾಗಿದೆ. ಹಾಗಾಗಿ ಕುರುಬ ಸಮಾಜಕ್ಕೆ ಸೇರಿದ ಸಿದ್ದರಾಮಯ್ಯನವರು ತಾವೆಲ್ಲರೂ ಲಿಂಗಾಯತ ಸಮಾಜದವರು ಎಂಬುದಾಗಿ ಘೋಷಿಸಬೇಕು. ಸಿದ್ದರಾಮಯ್ಯನವರು ತಾವು ಲಿಂಗಾಯತರು ಎಂದು ಘೋಷಿಸಿಕೊಳ್ಳುವರೇ?

– ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ
ಸ್ವಾಮೀಜಿ

Advertisement
Advertisement

Udayavani is now on Telegram. Click here to join our channel and stay updated with the latest news.

Next