Advertisement

ಮೋದಿ ಟೀಕಿಸಲು “ಕೈ’ಗೆ ಪದಗಳಿಲ್ಲ

07:47 AM Mar 17, 2019 | |

ಚಳ್ಳಕೆರೆ: ಸುದೀರ್ಘ‌ ಕಾಲ ರಾಷ್ಟ್ರವನ್ನಾಳಿದ ಕಾಂಗ್ರೆಸ್‌ನ ಯಾವ ಮುಖಂಡರೂ ಬಿಜೆಪಿ ಮತ್ತು ಮೋದಿ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ತಮ್ಮ ಮೊದಲ ಅವಧಿಯಲ್ಲೇ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಎಸ್‌. ಜಯರಾಮ್‌ ಹೇಳಿದರು.

Advertisement

ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಹಾಗೂ “ಮತ್ತೂಮ್ಮೆ ಮೋದಿ’ ಅಭಿಯಾನದಲ್ಲಿ ಅವರು ಮಾತನಾಡಿದರು.

ಪ್ರಧಾನಿಯಾಗಿ ನರೇಂದ್ರ ಮೋದಿಯವರು ರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು 2014ರಿಂದ ಪಡೆದಿದ್ದು, ಇಲ್ಲಿಯ ತನಕ ಎಲ್ಲಾ ಹಂತದಲ್ಲೂ ರಾಷ್ಟ್ರದ ಗೌರವವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಭಾರತೀಯರಷ್ಟೇ ಅಲ್ಲ, ವಿಶ್ವದ ಎಲ್ಲಾ ರಾಷ್ಟ್ರಗಳ ನಾಯಕರು ಕೂಡ ಮೋದಿಯವರ ಸ್ನೇಹಕ್ಕಾಗಿ ಹಂಬಲಿಸುತ್ತಾರೆ. ಹಾಗಾಗಿ ಮತ್ತೂಮ್ಮೆ ಪ್ರಧಾನಿಯಾಗಿ ನರೇಂದ್ರ ಮೋದಿಯವರೇ ಆಯ್ಕೆಯಾಗಬೇಕಿದೆ. ಈ ಕಾರ್ಯವನ್ನು ಮತದಾರರು ಮಾಡಬೇಕಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ವಿವಿಧ ಪಕ್ಷಗಳ ಮುಖಂಡರಾದ ಚಿತ್ರಯ್ಯನಹಟ್ಟಿ ಎಸ್‌. ನಾಗರಾಜ, ಪಾಲಯ್ಯ, ವೆಂಕಟೇಶ್ವರನಗರದ ಬಾಲು, ಆಟೋ ಬಸವರಾಜು, ಅಲ್ಲಾಭಕ್ಷ್, ಭರತ್‌, ಜಯಣ್ಣ, ವೀರಣ್ಣ, ಅಶೋಕ, ಶಿವಣ್ಣ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್‌. ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಟಿ. ಮಂಜುನಾಥ, ನಗರಸಭಾ ಸದಸ್ಯ ಎಸ್‌. ಜಯಣ್ಣ, ಬೋರನಾಯಕ, ತಾಲೂಕು ಪ್ರಧಾನ ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ, ಕಾರ್ಯದರ್ಶಿ ಇಂದುಮತಿ, ಅನ್ನಪೂರ್ಣಮ್ಮ, ಮಂಗಳಮ್ಮ,
ಪ್ರಮೀಳಮ್ಮ, ತಾಪಂ ಮಾಜಿ ಸದಸ್ಯ ವೆಂಕಟೇಶ್‌, ನಗರಸಭೆ ಮಾಜಿ ಸದಸ್ಯರಾದ ಡಿ.ಕೆ. ಸೋಮಶೇಖರ್‌, ಶ್ರೀಕಾಂತ್‌, ರಂಗಣ್ಣ, ಈಶ್ವರ ನಾಯಕ, ವೀರೇಶ್‌, ರಂಗಸ್ವಾಮಿ ಇದ್ದರು.

ಯಶಸ್ಸಿನತ್ತ “ಮತ್ತೂಮ್ಮೆ ಮೋದಿ’ ಅಭಿಯಾನ  “ಮತ್ತೂಮ್ಮೆ ಮೋದಿ’ ಅಭಿಯಾನ ಯಶಸ್ಸಿನತ್ತ ಸಾಗಿದೆ. ವಿಶೇಷವಾಗಿ ಯುವ ಮತದಾರರು ಮತ್ತು ಮಹಿಳಾ ಮತದಾರರು ನರೇಂದ್ರ ಮೋದಿಯವರೇ ಮತ್ತೂಮ್ಮೆ ಈ ರಾಷ್ಟ್ರದ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ “ಮತ್ತೂಮ್ಮೆ ಮೋದಿ’ ಅಭಿಯಾನವನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದು ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ. ಸಿರಿಯಣ್ಣ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next