Advertisement
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ಸಮಯ ನೋಡಿ ದಿಲ್ಲಿಗೆ ಹೋಗಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ದಿಲ್ಲಿಯ ನಾಯಕರು ಶೀಘ್ರ ಮಾಡಬೇಕೆಂಬುದು ನನ್ನ ವಿನಂತಿ ಎಂದು ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಸಂಬಂಧ ಪ್ರತ್ಯೇಕಪಾದಯಾತ್ರೆ ನಡೆಸಬೇಕೆಂದು ಪಕ್ಷದಲ್ಲಿ ನಡೆಯುತ್ತಿರುವ ಚರ್ಚೆಗೆ ಉತ್ತರಿಸಿದ ಅಶೋಕ್, ಬಳ್ಳಾರಿ ಪಾದಯಾತ್ರೆ ಬಗ್ಗೆ ಮೊದಲೇ ಪ್ರಸ್ತಾವನೆ ಇತ್ತು. ಯಾವುದನ್ನು ಮೊದಲು ಮಾಡಬೇಕೆಂಬ ಪ್ರಶ್ನೆ ಬಂದಾಗ ಮುಡಾ ಅನಂತರ ಬಳ್ಳಾರಿ ಎಂಬ ತೀರ್ಮಾನವಾಯ್ತು. ಬಿಜೆಪಿಯ ಹಿರಿಯ ಮುಖಂಡರು ಬಳ್ಳಾರಿ ಪಾದಯಾತ್ರೆ ಮಾಡಲು ತೀರ್ಮಾನಿಸಿ¨ªಾರೆ. ನಮ್ಮದು ಅದಕ್ಕೆ ಏನೂ ಅಭ್ಯಂತರ ಇಲ್ಲ. ಕೇಂದ್ರೀಯ ನಾಯಕರು ಒಪ್ಪಿಗೆ ಕೊಡಬೇಕು. ಒಪ್ಪಿಗೆ ಕೊಟ್ಟರೆ ನಾನೂ ಬಳ್ಳಾರಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ. ಎಲ್ಲರೂ ಒಟ್ಟಾಗಿ ಹೋಗಬೇಕೆಂಬುದು ನನ್ನ ಉದ್ದೇಶ ಎಂದರು. ನಮ್ಮಲ್ಲೂ ಸ್ವಲ್ಪ ಎಡರು-ತೊಡರು, ಭಿನ್ನಾಭಿಪ್ರಾಯಗಳು ಇವೆ. ಅವನ್ನು ಸರಿಪಡಿಸಿಕೊಂಡು ಹೋಗುವುದು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಒಳ್ಳೆಯದು. ಬಳ್ಳಾರಿ ಪಾದಯಾತ್ರೆಗೆ ಕೇಂದ್ರ ಅನುಮತಿ ಕೊಟ್ಟರೆ ಯಾರು ಭಾಗವಹಿಸಬೇಕೆಂಬುದನ್ನು ಕೇಂದ್ರ ತೀರ್ಮಾನ ಮಾಡುತ್ತದೆ, ನಾವಲ್ಲ.
Related Articles
Advertisement
ಸಿ.ಟಿ. ರವಿಗೆ ತಿರುಗೇಟುಸಿ.ಟಿ. ರವಿ ಮಾಡಿರುವ ಹೊಂದಾಣಿಕೆ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್.ಅಶೋ ಕ್, ಆಗಾಗ ಈ ವಿಚಾರ ಬಂದೇ ಬರುತ್ತದೆ. ಬರೀ ಹೊಂದಾಣಿಕೆ ಅಂದರೆ ಏನೂ ಆಗುವುದಿಲ್ಲ. ಸವಿಸ್ತಾರ ದಾಖಲೆ ಕೊಟ್ಟರೆ ಆಗ ಸರಿ ಹೋಗುತ್ತದೆ. ಏನೇ ಇದ್ದರೂ ಇದನ್ನು ನಾಲ್ಕು ಗೋಡೆ ಮಧ್ಯೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಹಾದಿಬೀದಿಗಳಲ್ಲಿ ಚರ್ಚೆ ಮಾಡುವುದು ಒಳ್ಳೆಯದಲ್ಲ ಎಂದು ತಿರುಗೇಟು ನೀಡಿದರು. ಬಿಜೆಪಿ ನಾಯಕರ ಮೇಲಿನ ಪ್ರಕರಣಗಳ ತನಿಖೆಗೆ ರಾಜ್ಯ ಸರಕಾರ ಮುಂದಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಶೋ ಕ್, ಸರಕಾರ ತಪ್ಪು ಮಾಡಿದಾಗ ಬಯಲಿಗೆ ತರಲೆಂದೇ ಜನ ನಮ್ಮನ್ನು ಇಲ್ಲಿ ಕೂರಿಸಿ¨ªಾರೆ. ಬೆದರಿಕೆ ಹಾಕುವುದು, ನಿಮ್ಮದೆಲ್ಲ ತೆಗೆಯುತ್ತೇನೆ ಎಂದರೆ ಯಾರೂ ಅಂಜುವುದಿಲ್ಲ. ತೆಗೆಯುವಂತಿದ್ದರೆ ಇವರು ವಿಪಕ್ಷದಲ್ಲಿದ್ದಾಗ ಕಳ್ಳೇಕಾಯಿ ತಿನ್ನುತ್ತಿದ್ದರಾ? ಎಂದು ಪ್ರಶ್ನಿಸಿದರು. ಸಂಘ ರಾಜಕೀಯ ಮಾಡುವುದಿಲ್ಲ
ಬಿಜೆಪಿ ಬೆಳವಣಿಗೆಗಳ ಬಗ್ಗೆ ಆರೆಸ್ಸೆಸ್ ಸಭೆ ಸಾಧ್ಯತೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಶೋ ಕ್, ಸಂಘದಿಂದ ಸಭೆ ಕರೆದಿರುವುದು ನನ್ನ ಗಮನದಲ್ಲಿ ಇಲ್ಲ. ಯಾವುದೇ ರಾಜಕಾರಣವನ್ನು ಸಂಘ ಮಾಡುವುದಿಲ್ಲ. 40 ವರ್ಷದ ಹಿಂದೆಯೇ ನಾನು ಆರೆಸ್ಸೆಸ್ ಚಡ್ಡಿ ಹಾಕಿದವನು. ಅದರ ನೀತಿ, ನಿಯಮ ಎಲ್ಲವೂ ನನಗೂ ಗೊತ್ತಿದೆ. ಆರೆಸ್ಸೆಸ್ ಎಂಬುದು ಸ್ವಯಂ ಸೇವಾ ಸಂಸ್ಥೆ. ಅದು ರಾಜಕಾರಣದಲ್ಲಿ ಭಾಗವಹಿಸುವುದು ನನಗೆ ಗೊತ್ತಿಲ್ಲ ಎಂದರು. ಪರ-ವಿರೋಧ ಬಣದಿಂದ ಸಂತೋಷ್ ಭೇಟಿ
ಬಿಜೆಪಿ ರಾಜ್ಯ ಘಟಕದ ವಿದ್ಯಮಾನ ಗೊಂದ ಲದ ಗೂಡಾಗಿರುವ ಸಂದರ್ಭದಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಗಳೂರಿಗೆ ಆಗಮಿಸಿದ್ದು, ಪಕ್ಷದ ಕಚೇರಿಯಲ್ಲಿ ಚಟುವಟಿಕೆ ತೀವ್ರಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪರ-ವಿರೋಧ ಬಣದವರು ಸಂತೋಷ್ ಭೇಟಿ ಮಾಡಿದ್ದಾರೆ. ವಿಜಯೇಂದ್ರ, ಸಂತೋಷ್ ಮಾತುಕತೆಯ ವಿವರ ಲಭ್ಯವಾಗಿಲ್ಲ.