Advertisement

BY-Election: ಫ‌ಲಿತಾಂಶದ ಬಳಿಕ ಯೋಗಿಗೆ ಅರಿವು: ಬಿ.ವೈ. ವಿಜಯೇಂದ್ರ

12:09 AM Oct 26, 2024 | Team Udayavani |

ಬಳ್ಳಾರಿ: ಹಿಂದೆ ನಮ್ಮ ಜತೆಯಿದ್ದ ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್‌ ಈಗ ನನ್ನ ಜತೆಗಿಲ್ಲ. ಅವರ ಬಗ್ಗೆ ಮಾತನಾಡಲ್ಲ, ಉಪಚುನಾವಣೆ ಫಲಿತಾಂಶ ಬಂದ ಬಳಿಕ ಅವರಿಗೆ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ. ಶ್ರೀರಾಮುಲು ಅಸಮಾಧಾನಗೊಂಡಿಲ್ಲ. ಗುರುವಾರ ನಾನು, ಶ್ರೀರಾಮುಲು, ಜನಾರ್ದನ ರೆಡ್ಡಿ ಸೇರಿ ಚುನಾವಣೆ ಕುರಿತು ಚರ್ಚೆ ನಡೆಸಿದ್ದೇವೆ. ಉಪ ಚುನಾವಣೆಯಲ್ಲಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಎಲ್ಲರೂ ಸೇರಿ ಎದುರಿಸುತ್ತಾರೆ ಎಂದರು.

ಸಂಡೂರಿನಲ್ಲಿ ಈವರೆಗೆ ಬಿಜೆಪಿ ಕಮಲ ಅರಳಿಲ್ಲ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ನಮ್ಮ ಜತೆಗೆ ಶಾಸಕರಿದ್ದಾರೆ ಎನ್ನುವ ಎಸ್‌.ಟಿ. ಸೋಮಶೇಖರ್‌ಗೆ ಉಪಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಗೊತ್ತಾಗಲಿದೆ ಎಂದರು.

ಎಸ್ಟಿ ನಿಗಮದ ಹಗರಣಕ್ಕೆ ಸಂಬಂ ಧಿಸಿ ದೂರು ನೀಡಿದ್ದು, ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸಚಿವ ಆರ್‌.ವಿ. ದೇಶಪಾಂಡೆ ಸರಕಾರದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಸರಕಾರ ತಮ್ಮ ಶಾಸಕರ ವಿರೋಧವನ್ನು ಎದುರಿಸುತ್ತಿದೆ ಎಂದು ಆರೋಪಿಸಿದರು.

ಉಪಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ
ಕೊಟ್ಟೂರು: ಮುಡಾ ಹಗರಣದ ಎ-1 ಆರೋಪಿ ಸಿದ್ದರಾಮಯ್ಯ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅನಂತರ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಅವರು ರಾಜೀನಾಮೆ ನೀಡುವುದನ್ನು ಯಾವುದೇ ಶಕ್ತಿ ತಡೆಯಲಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಶುಕ್ರವಾರ ಉಜ್ಜಿನಿ ಸದ್ಧರ್ಮ ಪೀಠಕ್ಕೆ ಆಗಮಿಸಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಮುಡಾ ಹಗರಣ ಸಿದ್ದರಾಮಯ್ಯರ ಮುಖವಾಡ ಬಯಲಿಗೆಳೆಯಲಿದೆ. ಚನ್ನಪಟ್ಟಣದಲ್ಲಿ ರಾಜಕೀಯ ಮೇಲಾಟ ನಡೆದಿದ್ದು, ಮೈತ್ರಿ ಅಭ್ಯರ್ಥಿ ಗೆಲುವಿನ ದಡ ತಲುಪಲಿದ್ದಾರೆ. ಯೋಗೇಶ್ವರ್‌ ಅವರನ್ನು ಕಾಂಗ್ರೆಸ್‌ ಹರಕೆಯ ಕುರಿ ಮಾಡಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next