Advertisement

ಪಕ್ಷ ತೊರೆಯುವ ಚಿಂತನೆ ಇಲ್ಲ : ಜಯಪ್ರಕಾಶ್‌ ಹೆಗ್ಡೆ

01:54 AM Mar 15, 2019 | |

ಬೆಂಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎನ್ನಲಾಗಿರುವ ಜಯಪ್ರಕಾಶ್‌ ಹೆಗ್ಡೆಅವರು ಗುರುವಾರ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಶೃಂಗೇ ರಿಗೆ ತೆರಳಿದ್ದ ಕಾರಣ ಭೇಟಿ ಸಾಧ್ಯವಾಗಲಿಲ್ಲ. ಇತರೆ ಕೆಲ ನಾಯಕರನ್ನು ಭೇಟಿಯಾಗಿ ಮಾತು ಕತೆ ನಡೆಸಿದರು.

Advertisement

ಭೇಟಿ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಜಯಪ್ರಕಾಶ್‌ ಹೆಗ್ಡೆ, ನಾನು ನಿಯಮಿತವಾಗಿ ಪಕ್ಷದ ಕಚೇರಿಗೆ
ಭೇಟಿ ನೀಡುತ್ತಿರುತ್ತೇನೆ. ಪಕ್ಷ ತೊರೆಯುವ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next