ರಾಮಪುರ ಎಂಬ ಊರಿನಲ್ಲಿ 40 ರಿಂದ 50 ಮನೆಗಳಿದ್ದ ಪುಟ್ಟ ಊರದು. ಆ ಊರಿನಲ್ಲಿ ಇಬ್ಬರು ಬಾಲ್ಯ ಸ್ನೇಹಿತರಿದ್ದರು ಅವರೇ ಹರೀಶ ಮತ್ತು ಸತೀಶ. ಹರೀಶ ದೊಡ್ಡ ಶ್ರೀಮಂತನ ಮಗ. ಆದರೂ ಸ್ನೇಹದ ವಿಷಯದಲ್ಲಿ ಹರೀಶ ಶ್ರೀಮಂತಿಕೆಯನ್ನು ತೋರಿಸುತ್ತಿರಲಿಲ್ಲ. ಸತೀಶ ಆರ್ಥಿಕ ಸ್ಥಿತಿಯಲ್ಲಿ ಬಡವನಾಗಿದ್ದರು ಜ್ಞಾನದ ವಿಚಾರದಲ್ಲಿ ಶ್ರೀಮಂತ. ಹಾಗಾಗಿ ಹರೀಶನಿಕ್ಕಿಂತ ಸತೀಶ ಉತ್ತಮ ಅಂಕಗಳನ್ನು ತೆಗೆಯುತ್ತಿದ್ದನು.
ಆದರೆ ಹರೀಶ ಶಾಲೆಗೂ ಹೋಗದೆ ಸಿನಿಮಾ, ಮೋಜು ಮಸ್ತಿ ಎಂದು ಅಲ್ಲಿ ಇಲ್ಲಿ ತಿರುಗಾಡಿಕೊಂಡು ಅಪ್ಪನ ಹಣವನ್ನು ಉಪಯೋಗಿಸಿಕೊಂಡು ಕಾಲ ಕಳೆಯುತ್ತಿದ್ದ. ಇದನ್ನು ಗಮನಿಸಿದ ಶಾಲಾ ಶಿಕ್ಷಕಿ ಹರೀಶನನ್ನು ಕರಿಸಿ, ನೋಡು ಹರೀಶ ನೀನು ಖರ್ಚು ಮಾಡುತ್ತಿರುವ ಹಣವೆಲ್ಲ ನಿನ್ನ ಅಪ್ಪನ ಹಣ ನೀನು ನಿನ್ನ ಕಾಲಲ್ಲಿ ನಿಲ್ಲಬೇಕಾದರೆ ನೀನು ಕಲಿತು ಒಳ್ಳೆ ಅಂಕ ತೆಗೆದು ಎಲ್ಲರಿಗೂ ಮಾದರಿ ಆಗಬೇಕು ಎಂದು ಹೇಳಿದರೂ ಅದಕ್ಕೆ ಕೊಂಚ ಗಮನವು ಕೊಡದೆ, ಶಿಕ್ಷಕಿ ಹರೀಶನಿಗೆ ಬೈಯಲು ಸತೀಶನೆ ಕಾರಣ ಎಂದು ಹರೀಶ ಅಮ್ಮನ ಬಳಿ ಹೇಳುತ್ತಾನೆ.
ಇದನ್ನು ಗಮನಿಸಿದ ಸಾಹುಕಾರ್ ಮುಗª ಸತೀಶನನ್ನು ಶಾಲೆಯಿಂದ ಬಿಡಿಸುತ್ತಾಳೆ. ಸತೀಶಗೆ ಈ ವಿಚಾರದಲ್ಲಿ ಮನಸಿಗೆ ಆಘಾತವಾಗಿದ್ದರು ಛಲ ಬಿಡದೆ ಮನೆಯಲ್ಲಿ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಒಳ್ಳೆಯ ಅಂಕದಲ್ಲಿ ಉತ್ತೀರ್ಣನಾಗುತ್ತಾನೆ.
ಈ ವಿಷಯ ಧಣಿಗಳಿಗೆ ಗೊತ್ತಾಗಿ ಅವರು ಶಹಭಾಷ್ ಮಗನೆ ಎಂದು ಸತೀಶನಿಗೆ ಹೇಳುತ್ತಾರೆ. ಸತೀಶನ ಜೀವನದಲ್ಲಿ ಏಳು – ಬಿಳು ಗಳಿದ್ದರು ಯಾರೇ ಹಂಗಿಸಿದರು ಅದನ್ನು ಲೆಕ್ಕಿಸದೆ ಎಲ್ಲವನ್ನು ಹಠವಾಗಿ ತೆಗೆದುಕೊಂಡು ಛಲದಿಂದ ನಾನೇನಾದರೂ ಸಾಧಿಸಬೇಕೆಂಬ ನಿಟ್ಟಿನಲ್ಲಿ ಸಾಧಿಸಿ ಊರಿಗೆ ಊರೇ ಹೆಮ್ಮೆ ಪಡುವ ಕೆಲಸವನ್ನು ಮಾಡುತ್ತಾನೆ.
-ಕಲಾನ್ವಿತ ಜೈನ್
ಎಸ್‌ಡಿಎಂ, ಉಜಿರೆ