ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸುವ ತಾಕತ್ತು ಬಿಜೆಪಿ ಹೊರತುಪಡಿಸಿ ಬೇರಾರಿಗೂ ಇಲ್ಲ. ಮಂದಿರದ ವಿಚಾರವು ಬಿಜೆಪಿಗೆ ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದನ್ನೇ ಮಾಡಿದೆ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ಈ ಬಗ್ಗೆ ಶೀಘ್ರವೇ ವಿಚಾರಣೆ ನಡೆಸಿ ತೀರ್ಪು ನೀಡಬೇಕು. ಇದು ನಮ್ಮ ಒತ್ತಾಯ ಎಂದು ರವಿವಾರ ಕೋಲ್ಕತಾದಲ್ಲಿ “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
Advertisement
ಒಂದು ವೇಳೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದಲ್ಲಿ ಕೇಂದ್ರ ಸರಕಾರ ಬದಲಿ ಮಾರ್ಗದ ಬಗ್ಗೆ ಅಂದರೆ ಸುಗ್ರೀವಾಜ್ಞೆ ಬಗ್ಗೆ ಚಿಂತನೆ ನಡೆಸಬೇಕಾ ಗುತ್ತದೆ ಎಂದೂ ಹೇಳಿದ್ದಾರೆ. ಆದರೆ ಸದ್ಯ ಆ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.