Advertisement

ಯಾವ ಭಯವೂ ಇಲ್ಲ: ರಾಘವೇಶ್ವರ ಶ್ರೀ

12:41 PM Sep 26, 2018 | Team Udayavani |

ಬೆಂಗಳೂರು: ಆತ್ಮಶುದ್ಧಿ ಇರುವುದರಿಂದ ನಮಗೆ ಯಾವುದರ ಭಯವೂ ಇಲ್ಲ, ಸಮಾಜ ಪರಿವರ್ತನೆಯಲ್ಲಿ ತೊಡಗಿಕೊಂಡವರು ವಿಷಕಂಠರಾಗಿ ಎಲ್ಲವನ್ನೂ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

Advertisement

ಗಿರಿನಗರದ ಶಾಖಾಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಸೀಮೋಲ್ಲಂಘನದ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಮಚಂದ್ರಾಪುರ ಮಠವೆಂಬ ಶಂಕರಾಚಾರ್ಯ ಸ್ಥಾಪಿತ ಸಂಸ್ಥೆಯನ್ನು ಯಾರು ಏನು ಮಾಡಲು ಪ್ರಯತ್ನಪಟ್ಟರೂ ಏನೂ ಆಗದು ಎಂದು ತಿಳಿಸಿದರು.

ಚಾತುರ್ಮಾಸ್ಯ ವ್ರತಕ್ಕೆ ತೊಂದರೆ ನೀಡುವ ಪರಂಪರೆ ಆರಂಭವಾಗಿದೆ. ನಾವು ಚಾತುರ್ಮಾಸ್ಯ ಮಾಡುವಾಗ ಮಠದ ಶತ್ರುಗಳು ಚಾತುರ್ಮಾಸ್ಯ ಮಾಡುತ್ತಾರೆ. ನಾವು ರಾಮ ಸ್ಮರಣೆಯಲ್ಲಿದ್ದರೆ, ಅವರು ನಮ್ಮದೇ ಸ್ಮರಣೆಯಲ್ಲಿ ಇರುತ್ತಾರೆ. ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಮಠದಲ್ಲಿ ಯಾವ ಲೋಪವೂ ಇಲ್ಲ.

ಮಠಮಾನ್ಯಗಳಿಗೆ ರಕ್ಷಣೆ ಕೊಡಬೇಕಾದವರೇ ಭಕ್ಷಣೆಗೆ ಮುಂದಾಗಿದ್ದಾರೆ. ಚಾತುರ್ಮಾಸ್ಯ ವ್ರತ ಭಂಗಕ್ಕೆ ವ್ಯಯಿಸಿದ ಶಕ್ತಿ, ಹಣ, ಶ್ರಮಗಳನ್ನು ಉತ್ತಮ ಕಾರ್ಯಗಳಿಗೆ ಬಳಸಿದ್ದರೆ ಜಗತ್ತಿಗೆ ಒಳಿತಾಗುತ್ತಿತ್ತು ಎಂದರು. ಶಿಕ್ಷಣ ತಜ್ಞೆ ಡಾ. ಶಾರದಾ ಜಯಗೋವಿಂದ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next