Advertisement

ಬಿಜೆಪಿ ಅಧಿಕಾರಕ್ಕೇರಿದಾಗಿಂದ ಅಭಿವೃದ್ಧಿ ಮರೀಚಿಕೆ

09:27 PM Mar 08, 2020 | Team Udayavani |

ಹುಣಸೂರು: ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಕೆಲ ಮುಖಂಡರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಕಾರ್ಯಕರ್ತರ ಶ್ರಮದೊಂದಿಗೆ ಕಟ್ಟಿರುವ ಜೆಡಿಎಸ್‌ ಪಕ್ಷ ನಿರ್ನಾಮಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ, ಸಾರ್ವತ್ರಿಕ ಚುನಾವಣೆವರೆಗೆ ಕಾಯಿರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಭಾನುವಾರ ಜೆಡಿಎಸ್‌ ತಾಲೂಕು ಘಟಕದಿಂದ ಆಯೋಜಿಸಿದ್ದ ನೂತನ ನಗರಸಭಾ ಸದಸ್ಯರಿಗೆ ಸನ್ಮಾನ, ಮತದಾರರಿಗೆ ಕೃತ‌ಜ್ಞತಾ ಸಭೆ ಮತ್ತು ಬೆಂಗಳೂರಿನಲ್ಲಿ ಆಯೋಜಿಸಿರುವ ತಮ್ಮ ಪುತ್ರ ನಿಖೀಲ್‌ ವಿವಾಹ ಸಂಬಂಧ ಕಾರ್ಯಕರ್ತರನ್ನು ಆಹ್ವಾನಿಸಲು ಆಗಮಿಸಿದ್ದ ವೇಳೆ ಮಾತನಾಡಿದರು.

ಬೆನ್ನಿಗೆ ಚೂರಿ ಹಾಕಿದವರ ನಂಬಬೇಡಿ: ಕಳೆದ 40 ವರ್ಷಗಳಿಂದ ಪಕ್ಷದ ವರಿಷ್ಠ ದೇವೇಗೌಡರನ್ನು ಬೆಂಬಲಿಸಿಕೊಂಡು ಬಂದಿರುವ ರೈತಾಪಿ ವರ್ಗ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕಳೆದ ಉಪ ಚುನಾವಣೆಯ ಸೋಲು, ನಮಗೆ ಮೋಸ ಮಾಡಿದವರು ಗೆಲ್ಲಬಾರದೆಂದು ಕಾಂಗ್ರೆಸ್‌ ಬೆಂಬಲಿಸಿದ್ದಾರಷ್ಟೆ, ಬಿಜೆಪಿ ಸಖ್ಯ ಲೇಸೆಂದು ನಮ್ಮ ಬೆನ್ನಿಗೆ ಚೂರಿ ಹಾಕಿ ಹೋದವರು ಅಲ್ಲಿ ಏನು ಮಾಡಲು ಸಾಧ್ಯವೆಂಬುದನ್ನು ಜನತೆ ಗಮನಿಸುತ್ತಿದ್ದಾರೆ ಎಂದರು.

ಜನತೆಗೆ ಕೃತಜ್ಞತೆ: ಪಕ್ಷಕ್ಕೆ ಮುಖಂಡರು ಬರುವುದು-ಹೋಗುವುದು ಸಹಜ. ಆದರೆ ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ, ತಮ್ಮ ಸರಕಾರ ಪಥನಗೊಳಿಸಿ ಹೊಸ ಸರಕಾರ ತಂದವರಿಗೆ ಮುಂದೆ ಗೊತ್ತಾಗಲಿದೆ, ಕಾದು ನೋಡಿರೆಂದು ಬೇಸರಿಸಿ, ಉಪ ಚುನಾವಣೆಯಲ್ಲಿ ಸೋಮಶೇಖರ್‌ ಸೋಲಿಗೆ ಮುಖಂಡರ ಗೊಂದಲವೇ ಕಾರಣ, ಇನ್ನು ನಗರಸಭೆ ಚುನಾವಣೆ ವೇಳೆ ತಾವು ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸಾಧಯವಾಗಿಲ್ಲ, ಹಣಕಾಸಿನ ನೆರವಿಲ್ಲದೇ 7 ಸದಸ್ಯರನ್ನು ನಗರಸಭೆಗೆ ಆಯ್ಕೆ ಮಾಡಿ ಕಳುಹಿಸಿರುವ ನಗರದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿ, ಸೋತವರು ಧೃತಿಗೆಡದೆ ಸಕ್ರಿಯವಾಗಿ ತೊಡಗಿಸಿಕೊಳ್ಳಿ, ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಬಿಜೆಪಿ ಬಂದಾಗಿನಿಂದ ಕಿಲುಬು ಕಾಸು ಕೊಟ್ಟಿಲ್ಲ: ತಾವು ಅಧಿಕಾರದಲ್ಲಿದ್ದಾಗ ಹುಣಸೂರಿಗೆ ನೀಡಿದ್ದ ಅನುದಾನವನ್ನೇ ತಮ್ಮ ಅಭಿವೃದ್ಧಿ, ಇದು ಬಿಜೆಪಿ ಸರಕಾರ ನೀಡಿದ್ದೆಂದು ಬಿಂಬಿಸುತ್ತಾರೆ. ಆದರೆ ವಾಸ್ತವವಾಗಿ ಬಿಜೆಪಿ ಅಧಿಕಾರ ಹಿಡಿದಾಗಿನಿಂದ ಬಡವರ ಏಳಿಗೆಗಾಗಿ ನಯಾಪೈಸೆ ಬಿಡುಗಡೆ ಮಾಡಿಲ್ಲ, ಇನ್ನು ಕ್ಷೇತ್ರಗಳ ಅಭಿವೃದ್ಧಿಗಾಗಿ ಕಿಲುಬು ಕಾಸು ಕೊಟ್ಟಿಲ್ಲ ಎಂದು ಟೀಕಿಸಿದರು.

Advertisement

ಅನ್ನದಾತರೊಂದಿಗೆ ಹೋರಾಟಕ್ಕೆ ಸಿದ್ಧ: 14 ತಿಂಗಳ ಅಧಿಕಾರವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದೆ ಆದರೆ ಬಿಜೆಪಿ ಸರಕಾರ 2020-21 ಬಜೆಟ್‌ನಲ್ಲಿ ಯಾವ ಹೊಸ ಯೋಜನೆಯೂ ತಂದಿಲ್ಲ, ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಸಿದೆ, ಇದನ್ನು ಪ್ರಶ್ನಿಸುವ ಯಾವ ರಾಜಕಾರಣಿಯೂ ಕಾಣುತ್ತಿಲ್ಲ. ಇದನ್ನು ವಿರೋಧಿಸಿದರೆ ಮಾಜಿಯಾಗಿದ್ದಕ್ಕೆ ವಿರೋಧಿಸಿದೆನೆಂದು ಬೊಬ್ಬಿಡುತ್ತಾರೆ, ಎಲ್ಲವನ್ನೂ ಗಮನಿಸುತ್ತಿರುವ ತಾವು ನಾಡಿನ ಅನ್ನದಾತರೊಂದಿಗೆ ಹೋರಾಟ ನಡೆಸುವ ದಿನ ಹತ್ತಿರವಿದೆ ಎಂದರು.

ಮದುವೆಗೆ ಆಹ್ವಾನ: ತಮ್ಮ ಪುತ್ರ ನಿಖೀಲ್‌ ಮದುವೆ ಓಡಾಟದಲ್ಲಿ ಎಲ್ಲರನ್ನೂ ಭೇಟಿಯಾಗಲು ಆಗುತ್ತಿಲ್ಲ, ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ಹೋಗಿ ಬರಲು ಶಾಸಕ ಸಾರಾ ಮಹೇಶ್‌ ಹಾಗೂ ಮುಖಂಡ ದೇವರಹಳ್ಳಿ ಸೋಮಶೇಖರ್‌ಗೆ ತಿಳಿಸಿದ್ದೇನೆ ಎಲ್ಲ ಜವಾಬ್ದಾರಿ ಹೊತ್ತು ಮದುವೆಗೆ ಬಂದು ಆಶೀವರ್ದಿಸಿ ಎಂದು ಕೋರಿದರು.

ಸನ್ಮಾನ: ನೂತನ ಸದಸ್ಯರಾದ ಕೃಷ್ಣರಾಜಗುಪ್ತ, ದೇವರಾಜ್‌, ಶ್ರೀನಾಥ್‌, ಶರವಣ, ರಾಣಿಪೆರುಮಾಳ್‌, ತಾಹಿನಾತಾಜ್‌, ರಾಧಾ ಸತ್ಯನಾರಾಯಣ್‌ ಅವರನ್ನು ಸನ್ಮಾನಿಸಲಾಯಿತು. ದೇವರಹಳ್ಳಿಸೋಮಶೇಖರ್‌, ಜಿಪಂ ಮಾಜಿ ಸದಸ್ಯ ಫಜಲುಲ್ಲಾ, ಕಾರ್ಯದರ್ಶಿ ಆರ್‌.ಸ್ವಾಮಿ, ಎಸ್‌ಸಿ ಘಟಕದ ಅಧ್ಯಕ್ಷ ಪುಟ್ಟರಾಜು ಗೋವಿಂದೇಗೌಡ, ಅಣ್ಣಯ್ಯ, ಲಾರಿಸ್ವಾಮಿಗೌಡ, ಪಿಕಾರ್ಡ್‌ ಬ್ಯಾಂಕ್‌ ಸದಸ್ಯ ಬಿಳಿಕೆರೆಪ್ರಸನ್ನ, ಚಂದ್ರಮ್ಮ, ಮೋನಿಕಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next