ಬೆಂಗಳೂರು: ಪ್ರಸ್ತುತ ಮಾನ್ಯ ಸಭಾಪತಿಗಳ ಮುಂದೆ ಎರಡು ಆಯ್ಕೆಗಳಿವೆ. ಅವರಾಗಿಯೇ ರಾಜೀನಾಮೆ ಕೊಡಬೇಕು.ಇಲ್ಲವೇ ಸದನದಲ್ಲಿ ಅವಿಶ್ವಾಸ ಮಂಡನೆ ಎದುರಿಸಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರವಾಗಿ ವಿಧಾನಸೌಧದಲ್ಲಿ ಹೇಳಿಕೆ ನೀಡಿರುವ ಇವರು ಈಗ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ, ನಿರ್ಣಯ ಅಂಗೀಕಾರವಾಗಿದೆ ಇನ್ನೆರಡು ದಿನದಲ್ಲಿ ಇದರ ಕುರಿತಾದ ಪ್ರಕ್ರಿಯೆ ಮುಗಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ:ಎಟಿಎಂನಲ್ಲಿ ಹಲ್ಲೆ ಪ್ರಕರಣ: ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ಪ್ರಕಟ
ಮುಂದಿನ ಸಭಾಪತಿ ಯಾರು ಅನ್ನುವುದು ಚರ್ಚೆಯಾಗಬೇಕಿದೆ. ಮುಖ್ಯಮಂತ್ರಿಗಳು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾಪತಿ ರಾಜೀನಾಮೆ ವಿಚಾರದಲ್ಲಿ ಅಡೆತಡೆ ಮಾಡಿಲ್ಲ, ಸಭಾಪತಿ ರಾಜೀನಾಮೆ ನೀಡಬೇಡಿ ಎಂದು ಹೇಳಿಲ್ಲ ಎಂದರು.