Advertisement

ಆಯ್ಕೆಗಳಿಗೆ ಅವಕಾಶವೇ ಇಲ್ಲದ ಕಾಲವಿದು

09:11 PM Jul 03, 2019 | Lakshmi GovindaRaj |

ಮೈಸೂರು: ಇಂದಿನ ಜಾಗತೀಕರಣ ಯುಗದಲ್ಲಿ ನಮ್ಮ ಆಯ್ಕೆಗಳನ್ನು ಬೇರೆಯವರು ನಿರ್ಧರಿಸುತ್ತಿದ್ದು, ನಮಗೆ ಆಯ್ಕೆಗಳಿಗೆ ಅವಕಾಶವೇ ಇಲ್ಲದ ಕಾಲ ಇದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕವಿತಾ ರೈ ಅಭಿಪ್ರಾಯಪಟ್ಟರು.

Advertisement

ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಪದವಿ ಪೂರ್ವ ಉಪನ್ಯಾಸಕರಿಗೆ ಆಯೋಜಿಸಿರುವ ಕನ್ನಡ ಪಠ್ಯ ಬೋಧನೆ ಮತ್ತು ತರಬೇತಿ ಕಾರ್ಯಾಗಾರದ ಮೂರನೇ ದಿನದಲ್ಲಿ “ಆಯ್ಕೆಯಿದೆ ನಮ್ಮ ಕೈಯಲ್ಲಿ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಜಾಗತೀಕರಣದಲ್ಲಿ ನಮಗೆ ಆಯ್ಕೆಗಳೇ ಇಲ್ಲದಂತಾಗಿದೆ. ಜನರಲ್ಲಿ ಸರಿಯಾದ ಆಯ್ಕೆ ಇಲ್ಲದಿದ್ದಾಗ ಅದೃಷ್ಟದ ಮೊರೆ ಹೋಗುತ್ತಾರೆ. ನಮ್ಮ ಆಯ್ಕೆಗಳನ್ನು ಬೇರೆಯವರು ನಿರ್ಧರಿಸುವರು ಎಂಬ ಸ್ಥಿತಿಯೊಳಗೆ ಬದುಕುತ್ತಿದ್ದೇವೆ. ಕೆಲವು ಸಂದರ್ಭದಲ್ಲಿ ವ್ಯಕ್ತಿ ಸಮರ್ಥವಾಗಿದ್ದರೂ ಕೂಡ ಉದ್ಯೋಗ ದೊರಕುವುದಿಲ್ಲ. ಕಲ್ಚರಲ್‌ ಪಾಲಿಟಿಕ್ಸ್‌ ವ್ಯವಸ್ಥೆಯಿಂದ ಅಸಮರ್ಥರೂ ಕೂಡ ಹಿಂಬದಿಯಿಂದ ಕೆಲಸ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ.ನಟರಾಜ ಬೂದಾಳ್‌, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಹಾಯಕ ಸಂಶೋಧಕ ಡಾ.ಕುಪ್ನಳ್ಳಿ ಎಂ.ಬೈರಪ್ಪ, ಡಾ.ಪಿ.ಎನ್‌.ಹೇಮಲತಾ, ಕೆಂಬೋಡಿ ಕುಮಾರ್‌, ಡಾ.ಎಂ.ಎ.ರಾಧಾಮಣಿ, ಪ್ರೊ.ಕೆ.ಆರ್‌.ದುರ್ಗಾದಾಸ್‌, ಉಪನ್ಯಾಸಕರು, ಸಂಶೋಧಕರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next