Advertisement

ಬಸ್‌ಗಳಿದ್ದರೂ ಜನರಿಲ್ಲ, ಜನರಿದ್ದೆಡೆ ಬಸ್‌ಗಳಿಲ್ಲ

11:29 PM Jun 01, 2020 | Sriram |

ಕುಂದಾಪುರ: ಖಾಸಗಿ ಬಸ್‌ಗಳ ಓಡಾಟ ಸೋಮವಾರ ಆರಂಭವಾಗಿದೆ. ಉಡುಪಿ, ಮಂಗಳೂರು, ಬೈಂದೂರು ಕಡೆಗೆ ಬಸ್‌ಗಳು ಸಂಚರಿಸಿದವು. ಜನರ ಸಂಖ್ಯೆ ಕಡಿಮೆಯಿತ್ತು. ಸಿದ್ದಾಪುರ, ಹಾಲಾಡಿ, ಗಂಗೊಳ್ಳಿ, ಕಂಡ್ಲೂರು, ಮೊದಲಾದೆಡೆಗೆ ಬಸ್‌ಗಳ ಸಂಖ್ಯೆಯೇ ಕಡಿಮೆಯಿತ್ತು. ಒಂದಷ್ಟು ಜನ ಬಸ್‌ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.

Advertisement

ಖಾಸಗಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಜನರಿನ್ನೂ ಬಸ್‌ನಲ್ಲಿ ಓಡಾಡುವಷ್ಟು ಮುಕ್ತವಾಗಿಲ್ಲ. ಜನರೂ ಈಗ ಅಗತ್ಯ ಕೆಲಸಗಳಿಗಷ್ಟೇ ನಗರಕ್ಕೆ ಬರುತ್ತಿದ್ದು ಅಂತಹ ಸಂದರ್ಭದಲ್ಲಿ ಮಾತ್ರ ಬಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಕಚೇರಿ ವೇಳೆ ಹೊರತಾಗಿ ಬಸ್‌ಗಳಲ್ಲಿ ಜನರ ಸಂಖ್ಯೆ ಕಡಿಮೆಯಿದ್ದುದು ಕಂಡುಬಂತು.

ಗ್ರಾಮಾಂತರಕ್ಕೆ ಪೂರ್ಣ ಪ್ರಮಾಣದಲ್ಲಿ ಬಸ್‌ ಓಡಾಟ ಇನ್ನೂ ಆರಂಭಗೊಂಡಿಲ್ಲ. ಸೀಮಿತ ಸಂಖ್ಯೆಯ ಬಸ್‌ಗಳಾದ ಕಾರಣ ಜನರೂ ಮರಳಿ ಹೋಗಲು ಬಸ್‌ ದೊರೆಯದಿದ್ದರೆ ಎಂಬ ಆತಂಕ ಹೊತ್ತೇ ಆಗಮಿಸುತ್ತಿದ್ದರು. ಚಾಲಕ, ನಿರ್ವಾ ಹಕರು ಮಾಸ್ಕ್, ಸ್ಯಾನಿಟೈಸರ್‌ ಬಳಸಿಯೇ ವ್ಯವಹರಿಸುತ್ತಿದ್ದರು.

ಕಾರ್ಕಳ: ಜನ ವಿರಳ
ಕಾರ್ಕಳ: ಕಾರ್ಕಳ ಬಸ್‌ ನಿಲ್ದಾಣದಲ್ಲಿ ಜೂ. 1ರಂದು ಜನ ವಿರಳವಿದ್ದು, ಬಸ್‌ ಸಂಖ್ಯೆಯೂ ಬೆರಳೆಣಿಕೆಯಿತ್ತು. 2 ಕೆಎಸ್‌ಆರ್‌ಟಿಸಿ, 4 ಪ್ರೈವೇಟ್‌ ಬಸ್‌ಗಳು ಓಡಾಟ ನಡೆಸಿದ್ದು, ಉಡುಪಿಗೆ ಒಟ್ಟು 14 ಟ್ರಿಪ್‌ ಸಂಚರಿಸಿವೆ. ಮಂಗಳೂರಿಗೆ 2 ಟ್ರಿಪ್‌, ಹೆಬ್ರಿಗೆ 1 ಟ್ರಿಪ್‌ ಬಸ್‌ ಓಡಾಟ ನಡೆಸಿದೆಯಾದರೂ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಿತ್ತು.

Advertisement

Udayavani is now on Telegram. Click here to join our channel and stay updated with the latest news.

Next