Advertisement

ಎಂಇಎಸ್ ಹಿಂದೆ ಅನೇಕ ಕಾಣದ ಕೈಗಳಿವೆ : ಶಾಸಕ ಅಮರೇಗೌಡ

02:44 PM Dec 19, 2021 | Team Udayavani |

ಕುಷ್ಟಗಿ: ನಮ್ಮ ರಾಜ್ಯದ 224 ಶಾಸಕರು ಭಾಗವಹಿಸುವ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿಯೇ ಗಮನ ಸೆಳೆಯಲು ಈ ಆಟ ಆಡುತ್ತಿದ್ದು, ಅವರ ಆಟ ಎಂದಿಗೂ ನಡೆಯದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಎಂಇಎಸ್ ಸಂಘಟನೆ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ಇಲ್ಲಿನ ತಾಲೂಕು ಕ್ರೀಡಾಂಗಣದ ಆವರಣದಲ್ಲಿ ನೂತನ ಒಳಾಂಗಣ ಕ್ರೀಡಾಂಗಣದ ಲೋಕಾರ್ಪಣೆಗೊಳಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬೇರೆ ಸಮಯದಲ್ಲಿ ತೆಪ್ಪಗೆ ಇರುವ ಎಂಇಎಸ್ ಸಂಘಟನೆ, ಅಧಿವೇಶನದ ಸಂಧರ್ಭದಲ್ಲಿ ಕಿಡಕೇಡಿತನ ಪ್ರದರ್ಶಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಈ ಪ್ರಕರಣದ ಬಗ್ಗೆ ಆ ಪಕ್ಷವನ್ನು ಧೂಷಿಸುವುದು ಸರಿಯಲ್ಲ. ಈ ಹಿಂದೆ ಎಲ್ಲಾ ಸರ್ಕಾರದ ಅವಧಿಯಲ್ಲೂ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಮೆರೆದ ಇತಿಹಾಸವಿದೆ. ಬೆಳಗಾವಿ ತಮ್ಮದಾಗಿಸಲು ಪದೇ ಪದೇ ಮಹಾಮೇಳವ ಮೂಲಕ ಕಿಡಿಗೇಡಿತನ ಕೃತ್ಯಕ್ಕೆ ಇಳಿದಿದೆ. ಈ ಸಂಘಟನೆಯ ಹಿಂದೆ ಅನೇಕ ಕಾಣದ ಕೈಗಳಿವೆ ಎಂದರು.

ಎಂಇಎಸ್ ಏನೇ ಆಟವಾಡಲಿ ಅದೇನು ನಡೆಯದು. ನಮ್ಮ ಪೊಲೀಸ್ ಇಲಾಖೆ ಪ್ರಖರವಾಗಿದ್ದು ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿದೆ.  ಅಂತವರಿಗೆ ಉಗ್ರ ಶಿಕ್ಷೆ ವಿಧಿಸಲು ಸರಕಾರಕ್ಕೆ ಒತ್ತಾಯಿಸುತ್ತೇನೆ. ಬೆಳಗಾವಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪಗೊಳಿಸಿವ ನೀಚತನದ ಪರಮಾವಧಿಯಾಗಿದೆ. ಸದರಿ ಕಿಡಗೇಡಿಗಳನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಧ್ಯಮದ ಮೂಲಕ ತಿಳಿದುಕೊಂಡಿರುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next