Advertisement

ಏಣಿಕೆ ಕೇಂದ್ರ ಪ್ರವೇಶಿಸಲು ಹಲವು ನಿಯಮ

12:22 PM May 15, 2018 | Team Udayavani |

ಬೆಂಗಳೂರು: ಮಂಗಳವಾರ ಬೆಂಗಳೂರಿನ ನಾಲ್ಕು ಕೇಂದ್ರಗಳಲ್ಲಿ 26 ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ನಡೆಸಲಿರುವ ಹಿನ್ನೆಲೆಯಲ್ಲಿ ಮತ ಏಣಿಕೆ ಕೇಂದ್ರಗಳ ಪರಿಮಿತಿಯೊಳಗೆ ಪ್ರವೇಶಿಸಲು ಆಯೋಗವು ಕೆಲವೊಂದು ನಿಯಮಗಳನ್ನು ವಿಧಿಸಿದೆ.

Advertisement

ಅದರಂತೆ ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವೀಕ್ಷಕರು, ಅಭ್ಯರ್ಥಿಗಳು ಅಥವಾ ಅವರ ಏಜೆಂಟರುಗಳು ಸೇರಿದಂತೆ ಎಲ್ಲರೂ ಲಾಗ್‌ ಪುಸ್ತಕದಲ್ಲಿ ಹೆಸರು, ವಿಳಾಸ, ಸಮಯ, ದಿನಾಂಕ, ಅವಧಿ ನಮೂದಿಸಿ ಸಹಿ ಮಾಡಿದ ನಂತರವೇ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ. 

ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕೇಂದ್ರ ಸಶಸ್ತ್ರ ಮೀಸಲು ಪಡೆಯವರು ವಿಡಿಯೋ ಚಿತ್ರೀಕರಣ ಮಾಡಲಿದ್ದು, ಇವಿಎಂಗಳನ್ನು ಇರಿಸಿರುವ ಆವರಣದೊಳಗೆ ಅಧಿಕಾರಿ ಅಥವಾ ಸಚಿವರು ಅಥವಾ ಯಾವುದೇ ಪಕ್ಷದ ರಾಜಕೀಯ ಕಾರ್ಯಕರ್ತರು ಸೇರಿದಂತೆ ಯಾವುದೇ ವಾಹನಗಳಿಗೆ ಪ್ರವೇಶವಿರುವುದಿಲ್ಲ.

ವಾಹನಗಳನ್ನು ಭದ್ರತಾ ಹೊರ ವಲಯದಲ್ಲಿಯೇ ನಿಲುಗಡೆ ಮಾಡಿ ಕಾಲ್ನಡಿಗೆಯ ಮೂಲಕ ಮತ ಏಣಿಕೆ ಕೇಂದ್ರ ಪ್ರವೇಶಿಸಬೇಕು. 
ಮಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಪ್ರದರ್ಶಿಸಿದ ಬಳಿಕವೇ ಮತ ಏಣಿಕೆ ಕೇಂದ್ರ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದು ಆಯೋಗವು ತಿಳಿಸಿದೆ. 

ಪಿಜನ್‌ ಹೋಲ್‌ ಮಾದರಿ ಪಾರದರ್ಶಕ ಪೆಟ್ಟಿಗೆ: ದೇಶದಲ್ಲೇ ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ವಿವಿಪ್ಯಾಟ್‌ ಯಂತ್ರಗಳನ್ನು ಬಳಸಲಾಗಿದ್ದು, ಮತ ಏಣಿಕೆ ವೇಳೆ ಪ್ರತಿ ಕ್ಷೇತ್ರಕ್ಕೆ ಒಂದರಂತೆ ವಿವಿಪ್ಯಾಟ್‌ ಯಂತ್ರಗಳನ್ನು ತೆರೆದು ಮುದ್ರಿತ ಪ್ರತಿಗಳನ್ನು ಮತಯಂತ್ರದಲ್ಲಿನ ಫ‌ಲಿತಾಂಶದೊಂದಿಗೆ ತಾಳೆ ಮಾಡಲಾಗುತ್ತದೆ. ಮತಯಂತ್ರವನ್ನು ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ ಎಂಬುದು ವಿವಿಪ್ಯಾಟ್‌ನ ಮುದ್ರಿತ ಪತ್ರಿಗಳ ಮೂಲಕ ತಿಳಿಯಲಿದೆ.

Advertisement

ಆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಿವಿಪ್ಯಾಟ್‌ನಲ್ಲಿರುವ ಮುದ್ರಿತ ಪತ್ರಿಗಳನ್ನು ಲೆಕ್ಕ ಹಾಕಲು ಅನುವಾಗುವಂತೆ ಪಿಜನ್‌ ಹೋಲ್‌ ಮಾದರಿಯ ಸಣ್ಣ ಪಾರದರ್ಶಕ ಪೆಟ್ಟಿಗೆಗಳನ್ನು ವಿನ್ಯಾಸ ಮಾಡಲಾಗಿದ್ದು, ಮತಗಟ್ಟೆಯಲ್ಲಿ ಹಾಜರಿರುವವರ ಸಮ್ಮುಖದಲ್ಲಿ ಅವುಗಳನ್ನು ತೆಗೆದು ವಿಂಗಡಿಸಿ ಲೆಕ್ಕ ಹಾಕಲಾಗುತ್ತದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next