Advertisement

ಬಲಪಂಥೀಯರಲ್ಲೂ ಉಗ್ರರಿದ್ದಾರೆ: ಕಮಲ್‌

10:25 AM Nov 03, 2017 | Harsha Rao |

ಚೆನ್ನೈ: ಬಲಪಂಥೀಯ ಸಂಘಟನೆಗಳಲ್ಲೂ ಇದೀಗ ಭಯೋತ್ಪಾದನೆ ವ್ಯಾಪಿಸಿದೆ ಎಂದು ಆರೋಪಿಸುವ ಮೂಲಕ ಬಹುಭಾಷಾ ನಟ ಕಮಲ್‌ಹಾಸನ್‌ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ನ.7ರಂದು ರಾಜಕೀಯ ಪಕ್ಷ ಆರಂಭಿಸುವ ಇರಾದೆಯಲ್ಲಿರುವ ಕಮಲ್‌ “ಆನಂದ ವಿಕಟನ್‌’ ತಮಿಳು ವಾರಪತ್ರಿಕೆಯಲ್ಲಿ ಬರೆಯಲಾಗಿರುವ ಲೇಖನದಲ್ಲಿ ಈ ಆರೋಪ ಮಾಡಿದ್ದಾರೆ.

Advertisement

“ಹಿಂದಿನ ಸಂದರ್ಭಗಳಲ್ಲಿ ಬಲಪಂಥೀಯ ವಾದಿಗಳು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗದೆ, ಇತರ ಧರ್ಮದವರನ್ನು ತಮ್ಮ ವಾದ ವಿವಾದಗಳ ಮೂಲಕ ಕುಕೃತ್ಯಗಳನ್ನು ಮಾಡಿಸುತ್ತಿದ್ದರು. ಇಂಥ ಉಪಾಯಗಳು ಈಗ ಕೆಲಸ ಮಾಡುತ್ತಿಲ್ಲವಾದ್ದರಿಂದ ಅವರೇ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ದ್ದಾರೆ. ಅಲ್ಲದೆ, “ಹಿಂದೂ ಭಯೋ ತ್ಪಾದನೆ’ ಎಂಬುದೇ ಇಲ್ಲ ಎಂದು ಈಗ ಬಲಪಂಥೀಯರು ವಾದಿಸಬಾರದು ಎಂದೂ ಹೇಳಿದ್ದಾರೆ.

ತೀವ್ರವಾದಿತನ ಎನ್ನುವುದು ಅಭಿವೃದ್ಧಿಗೆ ಪೂರಕವಲ್ಲ ಎಂದು ಪ್ರತಿಪಾದಿಸಿರುವ ಕಮಲ್‌, ಇದು ಹಿಂದೂವಾದಿಗಳು ಎಂದು ಹೇಳಿಸಿಕೊಂಡವರಿಗೆ ಶೋಭೆಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ  ಜನಾಂಗೀಯ ತಾರತಮ್ಯ ಮತ್ತು  ಪ್ರತಿಗಾಮಿತ್ವ ಹೆಚ್ಚು ಢಾಳಾಗಿ ಎದ್ದುಕಾಣುತ್ತಿದೆ ಎಂದು ಬರೆದುಕೊಂಡಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಮಿಳುನಾಡಿನಲ್ಲಿ ಹಿಂದುತ್ವ ಶಕ್ತಿ ನೆಲೆಯೂರು ತ್ತಿದೆ ಎಂಬ ಮಾತಿಗೆ ಕಮಲ್‌ ಈ ಸಾಲಿನ ಮೂಲಕ ಉತ್ತರಿಸಿದ್ದಾರೆ. 

“ಯಾವ ಶಕ್ತಿಯನ್ನು ನೀವು ಹಿಂದಿಕ್ಕುತ್ತೀರೋ ಎನ್ನುವುದು ಮುಖ್ಯವಲ್ಲ. ಕೇವಲ ಬದಲಾ ವಣೆಯೇ ಸ್ಥಿರವಾಗಿ ನಿಲ್ಲುತ್ತದೆ. ಸಾಮಾಜಿಕ ಸುಧಾರಣೆಗಳಲ್ಲಿ ತಮಿಳುನಾಡು ಹಿಂದಿನಂ ತೆಯೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕೇರಳ ಈ ಬಗ್ಗೆ ಮಾದರಿಯಾಗಿದೆ. ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.

ಪಿಎಫ್ಐ ಕುರಿತು ಏನಂತಾರೆ ಕಮಲ್‌?
ನಟ ಕಮಲ್‌ ಹಾಸನ್‌ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, “ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಕಮಲ್‌ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ. “ತಮಿಳು ಚಿತ್ರರಂಗದ ಹಲವು ನಟರು ಈಗ ಎಂಜಿಆರ್‌ ಆಗಲು ಹೊರಟಿದ್ದಾರೆ. ಎಂಜಿಆರ್‌ ಜನನಾಯಕರಾಗಿ ಹೊರ ಹೊಮ್ಮಿದವರು. ಆದರೆ, ಕಮಲ್‌ ಅವರು ಮುಸ್ಲಿಂ ಮೂಲಭೂತವಾದಿ ಗಳು ಮತ್ತು ಹಿಂದೂ ವಿರೋಧಿಗಳನ್ನು ಓಲೈಸಲು ಹೊರಟಿದ್ದಾರೆ. ಝಾಕೀರ್‌ ನಾಯ್ಕ, ಪಿಎಫ್ಐ (ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ), ಕೆಂಪು ಉಗ್ರವಾದದ ಬಗ್ಗೆ ಕಮಲ್‌ ಅವರ ಅಭಿಪ್ರಾಯವೇನು ಎಂದು ತಿಳಿಯುವ ಕುತೂಹಲವಿದೆ ಎಂದು ಬಿಜೆಪಿ ವಕ್ತಾರ  ಜಿ.ವಿ.ಎಲ್‌. ನರಸಿಂಹರಾವ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next