Advertisement
ನಗರಸಭೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರವನ್ನು ಸಮಗ್ರವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ತಮ್ಮ ಗುರಿಯಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಹೊಸ ಯೋಜನೆಗಳ ಜಾರಿಯ ಜೊತೆಗೆ ಸರ್ಕಾರದ ಯೋಜನೆಗಳ ಸಮರ್ಪಕ ಜಾರಿಗೆ ಆದ್ಯತೆ ನೀಡುತ್ತೇನೆ ಎಂದರು.
Related Articles
Advertisement
ಫ್ಲೆಕ್ಸ್‌ಗೆ ಕಡಿವಾಣ: ನಗರದ ಸುಂದರ ಪರಿಸರವನ್ನೇ ಹಾಳು ಮಾಡುವ ಫ್ಲೆಕ್ಸ್-ಕಟೌಟ್‌ಗಳನ್ನು ಎಲ್ಲೆಂದರಲ್ಲಿ ಅಳವಡಿಸುತ್ತಿದ್ದು, ಇನ್ನು ಮುಂದೆ ನಿಗದಿತ ಜಾಗದಲ್ಲೇ ಆಳವಡಿಸಬೇಕು ಹಾಗೂ ಅವಧಿಯೊಳಗೆ ಅಳವಡಿಸಿದವರೇ ತೆರವುಗೊಳಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೆಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುಂದರ ನಗರ-ಸುಗಮ ಸಂಚಾರಕ್ಕೆ ಕ್ರಮ: ಇನ್ನು ಹೆಚ್ಚು ಜನ-ವಾಹನ ದಟ್ಟಣೆ ಇರುವ ಬೆಪಾಸ್‌ರಸ್ತೆ, ಕೋರ್ಟ್ ಸರ್ಕಲ್ ಮತ್ತು ಕಲ್ಕುಣಿಕೆ ವತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಹಾಗೂ ನಗರವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರಬರೆಯಲಾಗುವುದು ಹಾಗೂ ಸುಸಜ್ಜಿತ ಖಾಸಗಿ ವಾಹನನಿಲ್ದಾಣ, ಕೈಗಾರಿಕಾ-ವಸತಿ ಪ್ರದೇಶ, ಫುಟ್‌ಪಾತ್ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಸ್ಟರ್ ಪ್ರಾಜೆಕ್ಟ್ ಮೂಲಕವೇ ಆಗಬೇಕಿದ್ದು ಈ ಬಗ್ಗೆಯೂ ಗಮನ ಹರಿಸುತ್ತೇನೆ.
ಸಾರ್ವಜನಿಕ ಭೇಟಿಗೆ ಅವಕಾಶ: ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆವರೆಗೆ ಕಚೇರಿಯಲ್ಲಿ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಿದರು. ಸದಸ್ಯರಾದ ಸುನಿತಾ, ಜಯರಾಮೇಗೌಡ, ಹಜರತ್‌ಜಾನ್, ಶಿವರಾಜ್, ಸತೀಶ್‌ಕುಮಾರ್, ಕೃಷ್ಣರಾಜ ಗುಪ್ತ, ಎಚ್.ವೈ.ಮಹದೇವ್, ಶರವಣ ಇತರರು ಇದ್ದರು.