ಮಣಿಪಾಲ: ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ನಡೆಸುತ್ತಿರುವ ಮಹಿಳೆಯರ ಗುಂಪೊಂದು ಉಡುಪಿ ನಗರದಲ್ಲಿ ಸಕ್ರೀಯವಾಗಿದೆ.
ಮಣಿಪಾಲ ಪೊಲೀಸರು ಈ ಬಗ್ಗೆ ಪ್ರಕಟಣೆ ನೀಡಿದ್ದು, ಐದರಿಂದ ಆರು ಮಂದಿ ಮಹಿಳೆಯರು ಕೂಡಿಕೊಂಡು ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಗುಂಪೊಂದು ನಗರಕ್ಕೆ ಬಂದಿದೆ.
ಇದನ್ನೂ ಓದಿ:ಮಾರುವೇಷದಲ್ಲಿ ಅಭಿಮಾನಿಗಳ ಮಧ್ಯೆ ಚಿತ್ರ ವೀಕ್ಷಿಸಿದ ದರ್ಶನ್!
ಇಂಥವರು ಯಾರಾದರೂ ಅಪರಿಚಿತರು ಸಂಶಯಾಸ್ಪದವಾಗಿ ತಮ್ಮ ಮನೆ ಮುಂದೆ ಓಡಾಡಿಕೊಂಡಿದ್ದರೆ ಅಂಥವರು ಕಂಡುಬಂದರೆ ಅವರಿಂದ ದೂರವಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.
ಮಣಿಪಾಲ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್: 9480805448. ಸಬ್ ಇನ್ಸ್ ಪೆಕ್ಟರ್: 9480805475 ಅಥವಾ 112
ಇದನ್ನೂ ಓದಿ: ಉದ್ಯಾವರ: ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದ ಯುವಕ ಶವವಾಗಿ ಪತ್ತೆ!