ಗುಂಡ್ಲುಪೇಟೆ: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡಿರುವ ಘಟನೆ ಪಟ್ಟಣದ ಕೆ.ಎಸ್. ನಾಗರತ್ನಮ್ಮ ಬಡಾವಣೆಯಲ್ಲಿ ನಡೆದಿದೆ.
ಪಟ್ಟಣ ನಿವಾಸಿ ನಾಗೇಂದ್ರ ಅವರ ಮನೆಯಲ್ಲಿ ಕಳವು ನಡೆದಿದೆ. ಇವರು ಮತ್ತು ಪತ್ನಿ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ನಂತರ ಮನೆ ಮಾಲೀಕ ನಾಗೇಂದ್ರ ಗುಂಡ್ಲುಪೇಟೆ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ವಿಭಾಗದ ಪೊಲೀಸರು ಬೇಟಿ ನೀಡಿ ಪರಿಶೀಲಿ ಸಿದರು. ಆದರೆ ಆರೋಪಿಯ ಸುಳಿವು ಪತ್ತೆ ಆಗಿಲ್ಲ. ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಲ್ಲದ ಕಳ್ಳತನ ಪ್ರಕರಣ: ಪಟ್ಟಣದಲ್ಲಿ ಕಳ್ಳತ ಪ್ರಕರಣಗಳು ಕಳೆದ 6 ತಿಂಗಳಿಂದ ನಿರಂತವಾಗಿ ನಡೆಯುತ್ತಲೆ ಇದೆ. ಹೀಗಿದ್ದರೂ ಸಹ ಇಲ್ಲಿಯ ತನ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಖದೀಮರು ಎಗ್ಗಿಲ್ಲದೆ ರಾತ್ರಿ ಹಗಲೆನ್ನದೆ ಕಳ್ಳತನ ಮಾಡುತ್ತಿದ್ದಾರೆ. ಈ ಹಿನ್ನೆಲೆ ಪಟ್ಟಣದ ನಿವಾಸಿಗಳು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದಾರೆ.
ಪೊಲೀಸರು ನಿರ್ಲಕ್ಷ್ಯ: ಈಗಾಗಲೇ 20ಕ್ಕೂ ಅಧಿಕ ಕಡೆ ಕಳ್ಳತನ ಪ್ರಕರಣಗಳು ನಡೆದಿದೆ. ಕೆಲವೆಡೆ ಸಿಸಿ ಕ್ಯಾಮರಾದಲ್ಲಿ ಖದೀಮರ ಸುಳಿವು ಪತ್ತೆಯಾದರೂ ಸಹ ಇಲ್ಲಿಯ ತನಕ ಯಾವೊಬ್ಬ ಆರೋ ಪಿ ಯನ್ನು ಪೊಲೀಸರು ಬಂಧಿಸಿಲ್ಲ ಎಂದು ಪಟ್ಟಣದ ನಿವಾಸಿಗಳು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.