Advertisement

ಅಡ್ಡಗಟ್ಟಿ ಚಿನ್ನಾಭರಣ ಕಸಿದು ಕಳ್ಳರು ಪರಾರಿ

02:44 PM Feb 21, 2022 | Team Udayavani |

ಬಾಗೇಪಲ್ಲಿ: ತಾಲೂಕಿನ ಪರಗೋಡು ಚಿತ್ರಾವತಿ ಅಣೆಕಟ್ಟು ವೀಕ್ಷಣೆಗೆ ಆಗಮಿಸಿರುವಪ್ರವಾಸಿಗರ ದ್ವಿಚಕ್ರ ವಾಹನ ಅಡ್ಡಗಟ್ಟಿ ಚಿನ್ನಾಭರಣ, ನಗದು, ಮೊಬೈಲ್‌ ಕಸಿದುಕೊಂಡ ಕಳ್ಳರು ಪ್ರವಾಸಿಗರ ದ್ವಿಚಕ್ರ ವಾಹನ ಸಮೇತ ಪರಾರಿಯಾಗಿರುವ ಘಟನೆ ಬಾಗೇಪಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹರ್ಷ ಮತ್ತುದಂಪತಿ ಗುಡಿಬಂಡೆ ತಾಲೂಕಿನಆದಿನಾರಾಯಣ ಸ್ವಾಮಿ ಜಾತ್ರೆಯ ರಥೋತ್ಸವವನ್ನು ವೀಕ್ಷಿಸಿ ನಂತರ ಬಾಗೇಪಲ್ಲಿತಾಲೂಕಿನ ಪರಗೋಡು ಗ್ರಾಮದ ಬಳಿ ಇರುವ ಚಿತ್ರಾವತಿ ಅಣೆಕಟ್ಟು ವೀಕ್ಷಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸ್ಸು ದೊಡ್ಡಬಳ್ಳಾಪುರ ಕಡೆ ಪ್ರಯಾಣ ಬೆಳಸಿದ್ದಾರೆ. ಚಿತ್ರಾವತಿ ಅಣೆಕಟ್ಟು ಬಳಿಯ ವಸತಿ ಗೃಹಗಳ ಮುಂಭಾಗದಲ್ಲಿ 18 ರಿಂದ 20 ವರ್ಷ ವಯಸ್ಸಿನ ಮೂವರು ಕಳ್ಳರು ಹರ್ಷ ಮತ್ತು ದಂಪತಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಏಕಾಎಕಿ ಅಡ್ಡಗಟ್ಟಿ ಚಾಕು ಇತರೆ ಮಾರಕಾಸ್ತ್ರ ತೋರಿಸಿ ದಂಪತಿಗಳನ್ನು ಬೆದರಿಸಿ ನಗದು, ಚಿನ್ನದ ಮಾಂಗಲ್ಯ ಸರ, ಮೊಬೈಲ್‌ಗ‌ಳನ್ನು ನೀಡುವಂತೆ ಪ್ರಾಣ ಬೆದರಿಕೆ ಹಾಕಿ ಎಲ್ಲವನ್ನು ಕಸಿದು ಕೊಂಡಿದ್ದಾರೆ. ಅಲ್ಲದೇ ದಂಪತಿಗಳು ಬಂದಿದ್ದ ದ್ವಿಚಕ್ರ ವಾಹನವನ್ನು ಕಿತ್ತುಕೊಂಡು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯರಿಗೆ ಮಾಹಿತಿ: ದೊಡ್ಡಬಳ್ಳಾಪುರದ ಹರ್ಷ ಮತ್ತು ದಂಪತಿಗಳಿಗೆ ದಿಕ್ಕು ತೋಚದಂತಾಗಿ ಹತ್ತಿರದಲ್ಲಿರುವ ಚೆಂಡೂರು ಕ್ರಾಸ್‌ಗೆ ಕಾಲ್ನಡಿಗೆ ಮೂಲಕ ಹೋಗಿ ನಡೆದಂತಹ ಘಟನೆ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ಹೈವೇ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಅಗಮಿಸಿದ್ದ ಬಾಗೇಪಲ್ಲಿ ಪೊಲೀಸರು ಪರಿಶೀಲಿಸಿ ದಂಪತಿಗಳಿಂದ ಮಾಹಿತಿ ಪಡೆದುಕೊಂಡು ದೂರು ಸ್ವೀಕರಿಸಿದ್ದಾರೆ.

ಆತಂಕ: ಭಾನುವಾರ ಮಧ್ಯಾಹ್ನ ಸಮಯದಲ್ಲಿ ನಡೆದಿರುವ ಕಳ್ಳತನದ ಘಟನೆಯಿಂದ ಪ್ರವಾಸಿಗರನ್ನು ಒಮ್ಮೆಲೆ ಬೆಚ್ಚಿ ಬೀಳುಸುವಂತೆ ಮಾಡಿದ್ದು, ಚಿತ್ರಾವತಿ ಅಣೆಕಟ್ಟು ಬಳಿ ಇಂತಹ ಘಟನೆ ನಡೆದಿರುವುದು ಇದೆ ಮೊದಲ ಬಾರಿಗೆ ಎಂದು ಅತಂಕ ವ್ಯಕ್ತಪಡಿಸಿದ್ದಾರೆ.

ಚಿತ್ರಾವತಿ ಅಣೆಕಟ್ಟು ಬಳಿ ನಿರ್ವಹಣೆ ಇಲ್ಲದೆ ಪಾಲು ಬಿದ್ದಿರುವ ಚಿತ್ರಾವತಿ ವಸತಿ ಗೃಹದ ಅವರಣದಲ್ಲೆ ಬಾನುವಾರ ಮಧ್ಯಾಹ್ನ ಅಪರಿಚಿತ ವ್ಯಕ್ತಿಗಳ ತಂಡವೊಂದು ಅಡುಗೆಸಿದ್ದಪಡಿಸಿಕೊಂಡು ಮಧ್ಯಪಾನ ಮಾಡಿರುವಶಂಕೆ ವ್ಯಕ್ತವಾಗಿದ್ದು, ಚಿತ್ರಾವತಿ ಅಣೆಕಟ್ಟು ಕೋಡಿ ಹರಿದ ಹಿನ್ನಲೆಯಲ್ಲಿ ಪ್ರವಾಸಿಗರುಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸುತ್ತಿದ್ದುಪೊಲೀಸ್‌ ಚೆಕ್‌ ಪೋಸ್ಟ್‌ ಸ್ಥಾಪನೆ ಮಾಡಬೇಕಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next