Advertisement

ಸಂಬಂಧಿ ಮನೆಯಲ್ಲಿ ಕಳವು: ಬಂಧನ

10:10 AM Oct 13, 2021 | Team Udayavani |

ಬೆಂಗಳೂರು: ಹೆಲ್ಮೆಟ್‌ ಧರಿಸಿ ಸಂಬಂಧಿಕರ ಮನೆ ಯಲ್ಲೇ ಕಳ್ಳತನ ಮಾಡಿದ್ದ ಗುತ್ತಿಗೆದಾರನನ್ನು ವಿಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ನಿವಾಸಿ ಶ್ರೀನಿವಾಸ್‌(46) ಬಂಧಿತ ಗುತ್ತಿಗೆದಾರ. ಆತನಿಂದ ಹತ್ತು ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Advertisement

ನಗರ ದಲ್ಲಿ ಗುತ್ತಿಗೆದಾರನಾಗಿರುವ ಆರೋಪಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಬಹಳಷ್ಟು ಬ್ಯಾಂಕ್‌, ಫೈನಾನ್ಸ್‌ ನಲ್ಲಿ ಸಾಲಕ್ಕೆ ಯತ್ನಿಸಿದರೂ ಹಣ ಸಿಕ್ಕಿರಲಿಲ್ಲ. ಹೀಗಾಗಿ ಸಂಬಂಧಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಇಟ್ಟಿರುವ ಮಾಹಿತಿ ಪಡೆದುಕೊಂಡಿದ್ದ ಆರೋಪಿ, ಸೆ.30ರಂದು ಸಂಬಂಧಿ ಮನೆ ಸಮೀಪದಲ್ಲಿ ಅವಿತುಕೊಂಡು ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದ. ಅಲ್ಲದೆ, ಅವರ ದಿನಚರಿಗಳ ಬಗ್ಗೆಯೂ ತಿಳಿದುಕೊಂಡಿದ್ದ.

ಇದನ್ನೂ ಓದಿ;- ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್‌ ಪೂರೈಸಿ

ಹೀಗಾಗಿ ಸೆ.30ರಂದು ಸಂಬಂಧಿಯ ಪತ್ನಿ ಸಂಜೆ 4 ಗಂಟೆ ಸುಮಾರಿಗೆ ಯೋಗ ತರಗತಿಗೆ ಹೋಗಲು ಮನೆ ಬೀಗ ಹಾಕಿ ಹೂ ಕುಂಡದಲ್ಲಿ ಇಟ್ಟಿದ್ದರು. ಈ ವಿಚಾರ ಮೊದಲೇ ತಿಳಿದುಕೊಂಡಿದ್ದ ಆರೋಪಿ, ಆ ಮಹಿಳೆ ಹೊರಗಡೆ ಹೋಗುತ್ತಿದ್ದಂತೆ ಹೆಲ್ಮೆಟ್‌ ಧರಿಸಿ ಕೀ ತೆಗೆದುಕೊಂಡು ಮನೆಯೊಳಗೆ ಹೋಗಿ ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಸಂಜೆ 5 ಗಂಟೆಗೆ ಮಹಿಳೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮೆರಾ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next