Advertisement

ತಂತ್ರಜ್ಞಾನ ಬಳಸಿ ಕಳ್ಳತನ ತಪ್ಪಿಸಿದ ಎಂಜಿನಿಯರ್‌!

12:35 AM Jan 20, 2022 | Team Udayavani |

ಲಕ್ನೋ: ತಂತ್ರಜ್ಞಾನ ಸಾಕಷ್ಟು ಮುಂದುವರಿ ದಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಕಾನ್ಪುರದಲ್ಲಿರುವ ಪೂರ್ವಜರ ಮನೆಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ಸಾಫ್ಟ್ ವೇರ್‌ ಎಂಜಿನಿಯರ್‌ ಒಬ್ಬರು ತಪ್ಪಿಸಿದ್ದಾರೆ.

Advertisement

ಅಮೆರಿಕದ ನ್ಯೂಜೆರ್ಸಿಯಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವ ವಿಜಯ್‌ ಅವಸ್ತಿ ಅವರ ಮೊಬೈಲ್‌ಗೆ ಸೋಮವಾರ ಮಧ್ಯರಾತ್ರಿ ಅಲರ್ಟ್‌ ಬಂದಿದೆ. ಅವರು, ಕಾನ್ಪುರದಲ್ಲಿ ರುವ ತಮ್ಮ ಪೂರ್ವಜರ ಮನೆಯಲ್ಲಿ ಅಳವಡಿಸಿದ್ದ ಸೆನ್ಸಾರ್‌ ಗಳು ಹಾಗೂ ಸಿಸಿಟಿವಿ ಕೆಮರಾ ಅವರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿ ಕೊಟ್ಟಿದೆ.

ತತ್‌ಕ್ಷಣ ಎಚ್ಚೆತ್ತುಕೊಂಡ ವಿಜಯ್‌, ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಅಲ್ಲಿ ಕಳ್ಳರು ಮನೆಯ ಬೀಗ ಒಡೆಯುತ್ತಿರುವುದು ಗೊತ್ತಾಗಿದೆ. ತತ್‌ಕ್ಷಣ ಅವರು ಆ ಮನೆಯ ಲ್ಲಿದ್ದ ಸ್ಪೀಕರ್‌ಗಳ ಮೂಲಕ ಕಳ್ಳರಿಗೆ ಎಚ್ಚರಿಕೆ ನೀಡಿದ್ದರಾದರೂ ಕಳ್ಳರು ಡೋಂಟ್‌ ಕೇರ್‌ ಎನ್ನುವಂತೆ ತಮ್ಮ ಕೆಲಸ ಮುಂದುವರಿಸಿದ್ದಾರೆ. ಕಳ್ಳರ ನಡವಳಿಕೆ ಕಂಡು, ವಿಜಯ್‌ ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾನೆ. ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದು, ಐದೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗಿನ್ನೂ ಮನೆಯೊಳಗೇ ಇದ್ದ ಕಳ್ಳರು, ಓಡಿಹೋಗಲು ಪ್ರಯತ್ನಿಸಿದ್ದು, ಓರ್ವನ ಮೇಲೆ ಗುಂಡು ಹಾರಿಸಲಾಗಿದೆ. ಇನ್ನುಳಿದವರು ತಪ್ಪಿಸಿ ಕೊಂಡಿದ್ದಾಗಿ ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next