Advertisement

Theft case ಮೂರು ಸರಗಳ್ಳತನ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು

08:33 PM Oct 04, 2023 | Team Udayavani |

ಸಂಕೇಶ್ವರ : ಮೂರು ಸರಗಳ್ಳತನ ಪ್ರಕರಣಗಳನ್ನು ಭೇಧಿಸಿರುವ ಸಂಕೇಶ್ವರ ಪೊಲೀಸರು ಓರ್ವ ಖದೀಮನನ್ನು ಬಂಧಿಸಿದ್ದು, ಬಂಧಿತನಿಂದ 4,02,500 ರೂ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಈ ಸರಗಳ್ಳತನ ಪ್ರಕರಣದಲ್ಲಿ ಮಲ್ಲಪ್ಪ ದತ್ತು ಮಗದುಮ್ಮ (ಸಾ. ನೇರಲಿ ಸದ್ಯ ಅರ್ಜುನವಾಡ ನಿವಾಸಿ) ಬಂಧಿತ ಆರೋಪಿ.

ಅ. 02ರಂದು ಶ್ರೀಮತಿ ಶೈಲಜಾ ದಯಾನಂದ ಮರಿಗುದ್ದಿ ಸಾ. ಸಂಕೇಶ್ವರ ಇವರ ಕೊರಳಲ್ಲಿಯ ಬಂಗಾರದ ತಾಳಿ ಕಿತ್ತುಕೊಂಡು ಪರಾರಿಯಾಗಿರುವ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೇ ಇದೇ ರೀತಿ ಇನ್ನೂ ಎರಡು ಸರಗಳ್ಳತನ ಆದ ಬಗ್ಗೆ ಪ್ರಕರಣಗಳು ವರದಿಯಾಗಿದ್ದು, ಸುಲಿಗೆ ಮಾಡಿದ ಆರೋಪಿ ಬಗ್ಗೆ ತಪಾಸಣೆ ಮಾಡುತ್ತಿದ್ದಾಗ ಅ. 4ರಂದು ಸಂಕೇಶ್ವರದ ಹೊಸ ಓಣಿಯಲ್ಲಿ ಆರೋಪಿತನಿಗೆ ಪತ್ತೆ ಮಾಡಿ ಆತನ ಬಳಿ ಮೂರು ಸರಗಳ್ಳತನ ಪ್ರಕರಣಗಳಲ್ಲಿ ಕಳ್ಳತನ ಮಾಡಲಾದ ಬಂಗಾರದ ತಾಳಿ 40 ಗ್ರಾಂ, ಬಂಗಾರದ ಅವಲಕ್ಕಿ ಚೈನ್ 10 ಗ್ರಾಂ, ಬಂಗಾರದ ತಾಳಿ 15 ಗ್ರಾಂ, ಹೀಗೆ ಒಟ್ಟು 4.02.500 ರೂ. ಮೌಲ್ಯದ 65 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನ ನಂಬರ ಎಮ್‌ಎಚ್‌ 09 ಸಿಪಿ 3740 ವಶಪಡಿಸಿಕೊಂಡಿದ್ದಾರೆ.

ಇದರಿಂದ ಸಂಕೇಶ್ವರ ಪೊಲೀಸ್ ಠಾಣೆಯ 3 ಸರಗಳವು ಪ್ರಕರಣಗಳು ಪತ್ತೆ ಮಾಡಲಾಗಿದ್ದು, ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರ ಮಾರ್ಗದರ್ಶನದಲ್ಲಿ ಹೆಚ್ವುವರಿ ಎಸ್ ಪಿ ವೇಣುಗೋಪಾಲ, ಗೋಕಾಕ ಡಿಎಸ್ ಪಿ ಎಚ್.ಡಿ ಮುಲ್ಲಾ ಅವರ ನೇತೃತ್ವದಲ್ಲಿ ಸಂಕೇಶ್ವರ ಪೊಲೀಸ್ ಠಾಣೆಯ ಸಿಪಿಐ ಎಸ್. ಎಮ್. ಅವಜಿ, ಪಿ.ಎಸ್.ಐ ನರಸಿಂಹರಾಜು ಜೆ ಡಿ. ಎ.ಎಸ್.ಐ ಎಲ್.ಎಸ್.ಖೋತ, ಯು.ಎಸ್. ಶೆಟ್ಟೆನ್ನವರ ಹಾಗೂ ಸಿಬ್ಬಂದಿಗಳಾದ ಬಿ.ವಿ.ಹುಲಕುಂದ, ಎಮ್.ಜಿ.ದಾದಾಮಕ, ಎಮ್.ಎಮ್. ಕರಗುಪ್ಪಿ, ಎ.ಐ.ಯಶವಂತ, ಎಮ್.ಐ.ಚಿಪ್ಪಲಕಟ್ಟಿ, ಎಸ್.ವಿ.ಬಾಗಿ, ಬಿ.ಜಿ.ಕರಿಗಾರ, ಎಮ್.ಎಮ್.ಜಂಬಗಿ, ಬಿ.ಟಿ.ಪಾಟೀಲ, ಎಸ್.ಎಮ್.ಯಕ್ಸಂಬಿ, ವಿ.ವಿ.ದಾಮನೆಮಠ ಇವರುಪಾಲ್ಗೊಂಡಿರುತ್ತಾರೆ.

Advertisement

ಈ ಮೂರು ಸರಗಳ್ಳತನ ಪ್ರಕರಣ ಭೇಧಿಸಿರುವ ಸಂಕೇಶ್ವರ ಪೊಲೀಸರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next