ಬೆಂಗಳೂರು: ಶೂ ಬಾಕ್ಸ್ನಲ್ಲಿಟ್ಟಿದ್ದ ಮನೆಯ ಕೀ ಬಳಸಿಕೊಂಡು ಬೀಗ ತೆಗೆದು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ ಮಹಿಳೆಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಿಗೆಪಾಳ್ಯ ನಿವಾಸಿ ರತ್ನ(30) ಬಂಧಿತೆ.
1,06 ಲಕ್ಷ ರೂ. ಮೌಲ್ಯದ 17.7 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ದೂರುದಾರ ಹಾಗೂ ಕೊಟ್ಟಿಗೆಪಾಳ್ಯ ನಿವಾಸಿ ಮಹದೇವ್ ಸೆ.10ರಂದು ಮಧ್ಯಾಹ್ನ 1 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು, ಬೀಗದ ಕೀ ಹೊರಗಡೆ ಇರುವ ಶೂ ಬಾಕ್ಸ್ನಲ್ಲಿ ಇಟ್ಟು ತಮ್ಮ ಊರಿಗೆ ಹೋಗಿದ್ದರು.
ಸೆ.22ರಂದು ವಾಪಸ್ ಬಂದು ನೋಡಿದಾಗ ಮನೆಯದ್ದ 1 ಲಕ್ಷ ರೂ. ನಗದು, 14.5 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಆದರೆ, ಮನೆಯ ಬಾಗಿಲು, ಬೀರು ಯಾವುದಕ್ಕೂ ಹಾನಿ ಮಾಡದೆ ಕೃತ್ಯ ಎಸಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹದೇವ್ ದೂರು ನೀಡಿದ್ದರು.