Advertisement

ಮೆಸ್ಕಾಂ ನಿರ್ಲಕ್ಷ್ಯ: ವಿದ್ಯುತ್ ಕೊಡದೆ ಕುಟುಂಬವನ್ನು ಕತ್ತಲಲ್ಲಿ ಕೂರಿಸಿದ ಇಲಾಖೆ

09:37 PM Sep 03, 2021 | Adarsha |

ತೀರ್ಥಹಳ್ಳಿ: ಮೆಸ್ಕಾಂ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಇಂದು ನಿನ್ನೆಯದೇನಲ್ಲ ಸದಾಕಾಲ ಯಾವುದಾದರೊಂದು ಯಡವಟ್ಟು ಮಾಡುತ್ತಲೇ ಇರುತ್ತಾರೆ.

Advertisement

ಅದರಲ್ಲೂ ಇತ್ತೀಚೆಗೆ ಕನಿಷ್ಠ 200-300 ವಿದ್ಯುತ್ ಬಿಲ್ಲು ಕಟ್ಟದೆ ಇರುವ ಗ್ರಾಹಕರಿಗೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದು ಸರ್ವೆಸಾಮಾನ್ಯವಾಗುತ್ತಿದ್ದು ಸರ್ಕಾರದ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿಯೂ  ಬಡವರಿಗೆ ಸರ್ಕಾರ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ಕತ್ತಲೆಯಲ್ಲಿ ಕೂರಿಸುತ್ತಿದ್ದು ಅದರಲ್ಲೂ ತೀರ್ಥಹಳ್ಳಿ ಮೆಸ್ಕಾಂ ಇಲಾಖೆ 1 ಹೆಜ್ಜೆ ಮುಂದೆ ಇದೆ ಇತ್ತೀಚೆಗೆ ತಾಲ್ಲೂಕಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ

ಕಡುಬಡವ ಭಾಗ್ಯಜ್ಯೋತಿ ನಿವಾಸಿಯೊಬ್ಬರ ಮನೆಯ ವಿದ್ಯುತ್ ಬಿಲ್ 800 ₹ಕಟ್ಟಿಲ್ಲ ಎಂದು ವಿದ್ಯುತ್ ನಿಲುಗಡೆ ಮಾಡಿದ್ದಾರೆ,

ನಂತರದಲ್ಲಿ  ಪೂರ್ತಿ ಬಿಲ್ ಕಟ್ಟಿ ಮರು ವಿದ್ಯುತ್ ಸಂಪರ್ಕ  ನೀಡುವಂತೆ  ಗ್ರಾಹಕ ಕೋರಿಕೊಂಡು  ಬಂದಿದ್ದರೂ ಕೂಡ 3 ದಿನಗಳಿಂದ ಆ ಮನೆಗೆ ವಿದ್ಯುತ್ ಮರು ಸಂಪರ್ಕ  ನೀಡದೆ ಕುಟುಂಬವನ್ನು ಕತ್ತಲೆಯಲ್ಲಿ ಇರುವಂತೆ ಮಾಡಿದ್ದಾರೆ.

Advertisement

ಇದನ್ನೂ ಓದಿ:ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಹೋರಾಟವನ್ನು ಸದ್ಯಕ್ಕೆ ಮಾಡುವುದಿಲ್ಲ

ಈ ಬಗ್ಗೆ ಇಲಾಖೆ ಸಿಬ್ಬಂದಿಗೆ ಕೇಳಿದರೆ ನಾನು ಲೈನ್ ಮೆನ್ ಗೆ ಮಾಹಿತಿ ಕೊಟ್ಟಿದ್ದೇನೆ ಅವರು ಹೋಗಿಲ್ಲ  ನಾವೇನು ಮಾಡುವುದು ಎಂಬ ಉತ್ತರವನ್ನು ನೀಡಿದ್ದಾರೆ.

ತಕ್ಷಣ ಗ್ರಾಹಕ ಗ್ರಾಮಸ್ಥರ ಸಹಕಾರದೊಂದಿಗೆ ಮೆಸ್ಕಾಂ ಇಲಾಖೆ ದಾವಿಸಿದ್ದು ಕಾರ್ಯಪಾಲಕ ಎಂಜಿನಿಯರ್ ಪ್ರಶಾಂತ್ ರ ಗಮನಕ್ಕೆ ತಂದು ತಕ್ಷಣ ಮರ ವಿದ್ಯುತ್ ಸಂಪರ್ಕ ನೀಡಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ  ಅಣ್ಣಪ್ಪ,ಮುಖಂಡರಾದ  ಪೂರ್ಣೇಶ್,ದೇವರಾಜ್ ಆದರ್ಶ,ಮೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಕರ್ತವ್ಯಲೋಪದ ವಿರುದ್ಧ ತರಾಟೆ ತೆಗೆದುಕೊಂಡಿದ್ದು, ಗ್ರಾಮಸ್ಥರ ಹಲವು ದಶಕಗಳ ಬೇಡಿಕೆಯಾಗಿದ್ದ ಪಟ್ಟಣ ವಿದ್ಯುತ್ತನ್ನು ಶಾಸಕ ಆರಗ ಜ್ಞಾನೇಂದ್ರರವರು ವಿಶೇಷ ಪ್ರಯತ್ನದಿಂದ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೇಲಿನ ಕುರುವಳ್ಳಿ, ಬುಕ್ಲಾಪುರ ಕೆಲ ಗ್ರಾಮಕ್ಕೆ  ಪಟ್ಟಣ ವಿದ್ಯುತ್ ಸಂಪರ್ಕ ಕೊಡಿಸುವಲ್ಲಿ ಸಹಕಾರಿಯಾಗಿದ್ದು 1ವರ್ಷ ಕಳೆದರೂ ಕೂಡ ಇಂದಿಗೂ ಪಟ್ಟಣ ವ್ಯಾಪ್ತಿಗೆ ಸೇರ್ಪಡಿಸುವ  ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಮೆಸ್ಕಾಂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.

ಈ ಬಗ್ಗೆ ಹಿರಿಯ ಅಧಿಕಾರಿಗಳು ತಕ್ಷಣದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದು,ವಿದ್ಯುತ್ ಮರು ಸಂಪರ್ಕಕ್ಕೆ ವಿಳಂಬ ಮಾಡಿರುವ ಕುರಿತು ಇಲಾಖೆಯ  ವತಿಯಿಂದ ಕ್ರಮ ಕೈಗೊಳ್ಳುವ ಭರವಸೆಯನ್ನು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್  ಪ್ರಶಾಂತ್ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next