Advertisement

ಪ್ರೇಕ್ಷಕರಲ್ಲಿದೆ ರಂಗಭೂಮಿ ಉಳಿವು-ಅಳಿವು

12:21 PM Jul 24, 2017 | Team Udayavani |

ಹುಬ್ಬಳ್ಳಿ: ರಂಗಭೂಮಿ ಉಳಿವು, ಅಳಿವು ಎರಡು ಜನರ ಕೈಯಲ್ಲಿದ್ದು, ಅದನ್ನು ಇದೀಗ ಬೆಳೆಸುತ್ತಿರುವವರು ಜನರೇ ಎಂದು ಹಿರಿಯ ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ಹೇಳಿದರು. ಇಲ್ಲಿನ ಬಸವ ವನದ ಬಳಿಯ ಕೆಬಿಆರ್‌ ಡ್ರಾಮಾ ಕಂಪನಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ “ಹೆಂಡತಿನ್ನ ಕೇಳಿ ಮದುವೆಯಾಗು’ ನಾಟಕದ 101ನೇ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಇಂದು ಇಡೀ ನಾಡಿನಲ್ಲಿ ರಂಗಭೂಮಿ ಉಳಿದಿದೆ ಎಂದರೆ ಅದು ಉತ್ತರ ಕರ್ನಾಟಕದಲ್ಲಿ ಮಾತ್ರ ಎಂದು ಹೆಮ್ಮೆಯಿಂದ ಹೇಳಬಹುದು. ಬನಶಂಕರಿ ಜಾತ್ರೆಯಲ್ಲಿ 8ಕ್ಕೂ ಹೆಚ್ಚು ನಾಟಕ ಕಂಪನಿಯವರು ವಿವಿಧ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಈ ಭಾಗದಲ್ಲಿ ರಂಗಭೂಮಿ ಉಳಿದಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. 

ಈ ಹಿಂದೆ ಚಿಂದೋಡಿ ಲೀಲಾ ಅವರು ಇದ್ದಾಗ ರಂಗಭೂಮಿಗೆ ಒಂದು ಉನ್ನತ ಸ್ಥಾನ ಒದಗಿಸಿಕೊಟ್ಟವರು. ಅಂಥವರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಲೇ ಈ ರಂಗಭೂಮಿಗೆ ಒಂದು ನೆಲೆ ಸಿಕ್ಕಿದ್ದು ಎಂದರೆ ತಪ್ಪಾಗಲಾರದು ಎಂದರು. ನಗರದಲ್ಲಿರುವ ಟೌನ್‌ ಹಾಲ್‌ನ್ನು ಅಭಿವೃದ್ಧಿ ಪಡಿಸಿ ರಂಗಭೂಮಿ ಕಾರ್ಯಗಳಿಗೆ ನೀಡುವ ಮೂಲಕ ರಂಗಭೂಮಿ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಮಹಾಪೌರ ಡಿ.ಕೆ. ಚವ್ಹಾಣ ಅವರಿಗೆ ಮನವಿ ಮಾಡಿದರು. 

ಮಹಾಪೌರ ಡಿ.ಕೆ. ಚವ್ಹಾಣ ಅಧ್ಯಕ್ಷತೆ ವಹಿಸಿ, ಕೆಬಿಆರ್‌ ಡ್ರಾಮಾ ಹಲವಾರು ವರ್ಷಗಳಿಂದ ತನ್ನ ಛಾತಿ ಬಿಡದೆ ನಾಟಕ ಪ್ರದರ್ಶನದ ಮೂಲಕ ಇಡೀ ನಾಡಿನ ಜನತೆಯ ಮನಸ್ಸನ್ನು ಗೆದ್ದಿದೆ. ಇಂತಹ ನಾಟಕ ಪ್ರದರ್ಶನ ಕೇವಲ 100ಅಲ್ಲ, 500, ಸಾವಿರ ದಿನಗಳವರೆಗೆ ಪ್ರದರ್ಶನಗೊಳ್ಳಬೇಕು.

ಟೌನ್‌ ಹಾಲ್‌ ನವೀಕರಣ ಕಾರ್ಯಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಚಿತ್ರ ನಿರ್ದೇಶಕ ಮಂಜು ದೈವಜ್ಞ, ಚಿತ್ರ ಹಾಗೂ ಕಿರುತೆರೆ ನಟ ಅಮಿತ್‌ರಾವ್‌ ಹಾಗೂ ಮಾಜಿ ಸಂಸದ ಪ್ರೊ| ಐ.ಜಿ.ಸನದಿ ಮಾತನಾಡಿದರು.

Advertisement

ಚಿಂದೋಡಿ ವಿಜಯಕುಮಾರ, ಚಿಂದೋಡಿ ಕಿಶೋರಕುಮಾರ ಸೇರಿದಂತೆ ಮೊದಲಾದವರು ಇದ್ದರು. ಕೊನೆಯಲ್ಲಿ ಹೆಂಡತಿನ್ನ ಕೇಳಿ ಮದುವೆಯಾಗು 101ನೇ ನಾಟಕ ಪ್ರದರ್ಶನ ನಡೆಯಿತು. ಚಿಂದೋಡಿ ಶ್ರೀಕಂಠೇಶ ಸ್ವಾಗತಿಸಿದರು. ಚಿಂದೋಡಿ ಶಂಭುಲಿಂಗಪ್ಪ ನಿರೂಪಿಸಿದರು. ಚಿಂದೋಡಿ ಬಂಗಾರೇಶ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next