ಹುಬ್ಬಳ್ಳಿ: ಎಸ್‌ಎಸ್‌ಕೆ ಸಮಾಜ ಚಿಂತನ-ಮಂಥನ ಸಮಿತಿ ವತಿಯಿಂದ ಯುಗಾದಿ ಹಾಗೂ ಶ್ರೀರಾಮನವಮಿ ಪ್ರಯುಕ್ತ ಏಪ್ರಿಲ್ 2ರಿಂದ 10ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಹನುಮಂತಸಾ ನಿರಂಜನ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏ.2ರಂದು ಬೆಳಗ್ಗೆ 8 ಗಂಟೆಗೆ ಹರ್ ಘರ್ ಭಗವಾ-ಘರ್ ಘರ್ ಭಗವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಸಮಾಜದವರು ತಮ್ಮ ಮನೆ ಮೇಲೆ ಭಗವಾಧ್ವಜ ಹಾರಿಸಲಿದ್ದಾರೆ.
3ರಂದು ಸಂಜೆ 6:30 ಗಂಟೆಗೆ ಕಮರಿಪೇಟೆಯ ಶ್ರೀರಾಮ ಮಂದಿರ ಆವರಣದಲ್ಲಿ ಆರ್‌ಎಸ್‌ಎಸ್‌ನ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಅವರು ಕೌಟುಂಬಿಕ ಮೌಲ್ಯಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.
ಏ.4ರಿಂದ 8ರವರೆಗೆ ಪ್ರತಿದಿನ ಸಂಜೆ 6:30 ಗಂಟೆಗೆ ಸಮರ್ಥ ಸದ್ಗುರು ಡಾ| ಎ.ಸಿ.ವಾಲಿ ಮಹಾರಾಜ ಗುರುಗಳು ಶ್ರೀರಾಮ ಚಿಂತನ ಪ್ರವಚನ ನಡೆಸಿಕೊಡಲಿದ್ದಾರೆ ಎಂದರು.
ಏ.10ರಂದು ಶ್ರೀರಾಮ ನವಮಿ ಪ್ರಯುಕ್ತ ಸಂಜೆ 4:00 ಗಂಟೆಗೆ ಕಮರಿಪೇಟೆಯ ಶ್ರೀರಾಮ ಮಂದಿರದಿಂದ ಶ್ರೀರಾಮ ಶೋಭಾಯಾತ್ರೆ ಆರಂಭಗೊಂಡು ಮೂರುಸಾವಿರಮಠ ಶಾಲೆ ಆವರಣದಲ್ಲಿ ಮುಕ್ತಾಯಗೊಳ್ಳಲಿದೆ. ಸಂಜೆ 6:30 ಗಂಟೆಗೆ ಸಾರ್ವಜನಿಕ ಸಮಾರಂಭ ನಡೆಯಲಿದ್ದು, ಮೂಜಗು ಸಾನ್ನಿಧ್ಯ ವಹಿಸಲಿದ್ದಾರೆ.
ಸಮರ್ಥ ಸದ್ಗುರು ಡಾ|ಎ.ಸಿ.ವಾಲಿ ಮಹಾರಾಜ ಗುರುಗಳು, ಎಸ್‌ಎಸ್‌ಕೆ ಸಮಾಜದ ಆಧ್ಯಾತ್ಮಿಕ ಚಿಂತಕರು ವಿಜಯಾ ಮಾತಾ, ಭಾರತ ವರ್ಷ ಗುರೂಜಿ, ಅತಿಥಿಯಾಗಿ ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠಸಾ ಜಡಿ, ಮುಖ್ಯ ವಕ್ತಾರರಾಗಿ ಆರ್‌ಎಸ್‌ಎಸ್‌ನ ಜಲ ಮತ್ತು ಪರಿಸರ ಸಂರಕ್ಷಣೆ ಸಂಚಾಲಕ ಜಯರಾಮ ಬೊಳ್ಳಾಜೆ ಆಗಮಿಸಲಿದ್ದಾರೆ ಎಂದರು.
ಗೀತಾ ಮೇತ್ರಾಣಿ, ಸುನಿಲ ವಾಳ್ವೆàಕರ, ಅಭಿಷೇಕ ನಿರಂಜನ, ಶ್ರೀಕಾಂತ ಹಬೀಬ, ಹರೀಶ ಜರತಾರಘರ, ವಿನಾಯಕ ಬಾಬುಲೆ ಸುದ್ದಿಗೋಷ್ಠಿಯಲ್ಲಿದ್ದರು.