Advertisement

ಯುವಕರೇ ರಕ್ತದಾನದ ರಾಯಭಾರಿಗಳು

01:05 AM Jun 27, 2019 | Lakshmi GovindaRaj |

ಬೆಂಗಳೂರು: ರಕ್ತದಾನ ಶಿಬಿರಗಳಲ್ಲಿ ಶೇ.80ರಷ್ಟು ಪ್ರಮಾಣದ ರಕ್ತ ನೀಡುತ್ತಿರುವ ಯುವಕರೇ ರಕ್ತದಾನದ ನಿಜ ರಾಯಭಾರಿಗಳು ಎಂದು ಕರ್ನಾಟಕ ರಾಜ್ಯ ಸ್ವಯಂ ರಕ್ತದಾನಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜು ಚಂದ್ರಶೇಖರ್‌ ಹೇಳಿದರು.

Advertisement

ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಸ್ಥೆ ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಹಾಗೂ ಚಿತ್ರ ರಚನಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಮನುಷ್ಯ ಚಂದ್ರನ ಮೇಲೆ ಕಾಲಿಡುವಷ್ಟು ವಿಜ್ಞಾನದಲ್ಲಿ ಮುಂದುವರೆದಿದ್ದಾನೆ. ಆದರೆ, ಯಾವುದೇ ಪ್ರಯೋಗಾಲಯಗಳಲ್ಲಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ವಸ್ತುವೂ ಅಲ್ಲ. ಆದ್ದರಿಂದ, ಯುವ ಸಮುದಾಯ ರಕ್ತದಾನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ದೇವರಿಗೆ ಕೂದಲು ನೀಡಿ ಭಕ್ತಿ ಮೆರೆಯುತ್ತೇವೆ. ಅದೇ ರೀತಿಯಲ್ಲಿ ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸುವುದಕ್ಕೂ ಮುಂದಾಗಬೇಕು. ಒಕ್ಕೂಟದ ಮೂಲಕ àರ್ಪಡಿಸುವ ರಕ್ತದಾನ ಶಿಬಿರಗಳಲ್ಲಿ ಶೇ.80ರಷ್ಟು ಯುವಜನರು ಪಾಲ್ಗೊಳ್ಳುವ ಮೂಲಕ ಜವಾಬ್ದಾರಿ ತೋರಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪಕಾರ್ಧಿಕಾರಿ ಡಾ.ಗಣನಾಥಶೆಟ್ಟಿ ಎಕ್ಕಾರು ಮಾತನಾಡಿ, ರಾಜ್ಯಕ್ಕೆ, ದೇಶಕ್ಕೆ ಅಗತ್ಯವಿರುವ ರಕ್ತದಲ್ಲಿ ಅರ್ಧದಷ್ಟು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಇದಕ್ಕೆರಕ್ತದಾನದ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಯೇ ಕಾರಣ ಎಂದರು.

Advertisement

ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಗಾಂಧೀಜಿಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ. ಎಲ್ಲ ಕಾಲೇಜುಗಳು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸವಂತೆ ಎಲ್ಲ ಕಾಲೇಜುಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ, ಖ್ಯಾತ ವೈದ್ಯ ಡಾ.ಎಚ್‌.ಎಸ್‌.ನರೇಂದ್ರ, ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕರ್ನಾಟಕ ಚಿತ್ರಕಲಾ ಪರಿಷತ್‌ ಪ್ರಾಂಶುಪಾಲ ಪ್ರೊ.ತೇಜೆಂದರ್‌ ಸಿಂಗ್‌ ಬಾವನಿ ಮತ್ತಿತರರು ಹಾಜರಿದ್ದರು.

18 ಸಾವಿರ ಯೂನಿಟ್‌ ರಕ್ತ ಸಂಗ್ರಹ: ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 18 ಸಾವಿರ ಯುನಿಟ್‌ಗಿಂತ ಹೆಚ್ಚು ರಕ್ತ ಸಂಗ್ರಹವಾಗಿದೆ. ಈ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗಿರುವುದರಿಂದ ನಮಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಿದ್ದು, ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ಮತ್ತಷ್ಟು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸ್ವಯಂ ರಕ್ತದಾನಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜು ಚಂದ್ರಶೇಖರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.