ಚಿಂತಾಮಣಿ : (ಚಿಕ್ಕಬಳ್ಳಾಪುರ) ರಸ್ತೆ ಅಪಘಾ*ತದಲ್ಲಿ ಒಬ್ಬ ವ್ಯಕ್ತಿ ಮೃ*ತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡದವಾಡಿ ಸಮೀಪ ಶುಕ್ರವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಚಿಂತಾಮಣಿ ನಗರದ ಎನ್ ಆರ್ ಬಡಾವಣೆಯ ನಿವಾಸಿ 21 ವರ್ಷದ ಮೋನಿಶ್ ಎಂದು ತಿಳಿದು ಬಂದಿದೆ.
ಮೋನಿಶ್ ಕಾರಿನಲ್ಲಿ ಚಿಂತಾಮಣಿ ಕಡೆಯಿಂದ ಮುಳಬಾಗಿಲು ಕಡೆ ಕೆಲಸದ ನಿಮಿತ್ತ ಹೋಗುತ್ತಿದ್ದ ವೇಳೆ ಈ ಅಪಘಾ*ತ ಸಂಭವಿಸಿದೆ. ಗಾಯಗೊಂಡವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಮೋನಿಶ್ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ.
ಅಪಘಾತದಲ್ಲಿ ಗಾಯಗೊಂಡಿರುವ ವ್ಯಕ್ತಿಗಳು ಯಾರು ಎಂಬುದು ಮಾಹಿತಿ ಇನ್ನು ಲಭ್ಯವಾಗಲಿಲ್ಲ.
ಘಟನೆ ಕುರಿತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.