Advertisement

ಕತಾರ್‌ ವಿಶ್ವಕಪ್‌ ಸಿದ್ಧತೆಗೆ ಇತಿಹಾಸದಲ್ಲೇ ಗರಿಷ್ಠ ಖರ್ಚು!

08:44 PM Nov 21, 2022 | Team Udayavani |

ದೋಹಾ: ಕತಾರ್‌ ವಿಶ್ವಕಪ್‌ ಸಿದ್ಧತೆಗೆ ಸಂಘಟಕರಿಗೆ ಆದ ಖರ್ಚು ಎಷ್ಟು ಗೊತ್ತೇ? 24.5 ಲಕ್ಷ ಕೋಟಿ ರೂ. (300 ಬಿಲಿಯನ್‌ ಡಾಲರ್‌). ಇದು ಫಿಫಾ ವಿಶ್ವಕಪ್‌ ಸಿದ್ಧತೆಯ ಇತಿಹಾಸದಲ್ಲೇ ಆದ ಗರಿಷ್ಠ ವೆಚ್ಚ.

Advertisement

ಯಾಕಿಷ್ಟು ಖರ್ಚಾಯಿತು ಗೊತ್ತೇ? ಇದು ಅತಿಪುಟ್ಟ ರಾಷ್ಟ್ರ. ವಿಶ್ವದ 32 ತಂಡಗಳು ಭಾಗವಹಿಸುವ ಬೃಹತ್‌ ಕೂಟಕ್ಕೆ ಆತಿಥ್ಯ ವಹಿಸುವ ಶಕ್ತಿ ಮೂಲಭೂತವಾಗಿ ಇದಕ್ಕಿಲ್ಲವೇ ಇಲ್ಲ.ಜತೆಗೆ ಕೆಂಡಕಾರುವ ಬಿಸಿ ಮರುಭೂಮಿಯ ರಾಷ್ಟ್ರ. ಹಾಗಾಗಿ ಮೂಲಭೂತ ವ್ಯವಸ್ಥೆಗೇ ವಿಪರೀತ ವೆಚ್ಚ ಮಾಡಬೇಕಾಯಿತು. ಜತೆಗೆ 6 ವಿಶ್ವದರ್ಜೆಯ ನೂತನ ಫ‌ುಟ್‌ಬಾಲ್‌ ಮೈದಾನಗಳ ನಿರ್ಮಾಣ ಮಾಡಲಾಗಿದೆ. ಇನ್ನೆರಡು ಮೈದಾನಗಳನ್ನು ನವೀಕರಣ ಮಾಡಲಾಗಿದೆ.

ಇಷ್ಟೂ ಮೈದಾನಗಳಲ್ಲಿ ತರಬೇತಿ ಕೇಂದ್ರಗಳೂ ಇವೆ. ಅದ್ಭುತ ಹೆದ್ದಾರಿಗಳು, ಹೊಟೇಲ್‌ಗ‌ಳು, ಮನರಂಜನಾ ಕೇಂದ್ರಗಳನ್ನು ನಿರ್ಮಿಸಿದೆ. ಇನ್ನುಳಿದ ಖರ್ಚುಗಳ ಬಗ್ಗೆ ಕೇಳಲೇಬೇಡಿ. ಫ‌ುಟ್‌ಬಾಲ್‌ ಬಗ್ಗೆ ಈ ದೇಶದ ಜನರಿಗೆ ಆಸಕ್ತಿಯಿದ್ದರೂ, ಕೂಟಕ್ಕೆ ನೇರ ಅರ್ಹತೆ ಪಡೆಯುವ ಶಕ್ತಿಯೂ ಇದಕ್ಕಿಲ್ಲ. ಈ ಬಾರಿ ಆತಿಥೇಯ ತಂಡವೆಂಬ ಕಾರಣಕ್ಕೆ ಅರ್ಹತೆ ಪಡೆದಿದೆ ಅಷ್ಟೇ. ಹೀಗಿರುವಾಗ ವೆಚ್ಚ ಸಹಜವಾಗಿ ಏರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next