ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿದ ನಗರನಹಳ್ಳಿ ಗ್ರಾಪಂನಲ್ಲಿನ ಕೆಲವುಗ್ರಾಮಗಳು ಕುಡಿವ ನೀರಿನ ಬವಣೆಯಿದ್ದರೂ ಪರಿಸ್ಥಿತಿಕೈಮೀರುವ ಹಂತ ತಲುಪಿಲ್ಲ.ನಗರನಹಳ್ಳಿ ಗ್ರಾಪಂಗಳಿಗೆಸೇರಿದ ನೆಗ್ಗಲಹಳ್ಳಿ,ಹಿರೇತಳಾಲು, ಗುಲಗಂಜಿಹಳ್ಳಿಹಾಗು ಹಾವಿನಮಾರನಹಳ್ಳಿಗ್ರಾಮಗಳಲ್ಲಿನ ಜನತೆ ಕುಡಿವನೀರಿನ ಬವಣೆಅನುಭವಿಸಬೇಕಾಗಿ ಬಂದಿದೆ.ತಾಲೂಕಿನ 26 ಗ್ರಾಪಂಗಳಲ್ಲಿ ಹಳ್ಳಿಮೈಸೂರುಹೋಬಳಿಗೆ 12 ಗ್ರಾಪಂಗಳನ್ನು ಹೊಂದಿದ್ದು, ಈಭಾಗದಲ್ಲಿ ಬರುವ ಗ್ರಾಮಗಳು ಮಳೆ ನೀರುಆಶ್ರಯದಲ್ಲಿ ಕೃಷಿ ಚಟುವಟಿಕೆ ನಡೆಸಬೇಕಿದೆ.
ಇದನ್ನರಿತ ಜನಪ್ರತಿನಿಧಿಗಳು ಹೇಮಾವತಿಅಣೆಕಟ್ಟೆಯಿಂದ ಹೇಮಾವತಿ ಬಲ ಮೇಲ್ದಂಡೆ ನಾಲೆಮೂಲಕ ಹಳ್ಳಿಮೈಸೂರು ಹೋಬಳಿ ಮೂಲಕ ಪಕ್ಕದಕೃಷ್ಣರಾಜಪೇಟೆಗೆ ಹಾದು ಹೋಗುವ ನಾಲೆ ಮೂಲಕಬಹಳಷ್ಟು ಗ್ರಾಮಗಳಲ್ಲಿನ ಕೆರೆ ಕಟ್ಟೆಗಳಿಗೆ ನೀರು ಹರಿಸಿತುಂಬಿಸುವುದರಿಂದ ಅಂತರಜಲ ವೃದ್ಧಿಯಾಗಿದೆ.
ಈಭಾಗಗಳಲ್ಲಿ ವಾರ್ಷಿಕ ಮಳೆ ಅತ್ಯಂತ ಕಡಿಮೆಯಿರಲಿದ್ದು,ಕೃಷಿ ಚಟುವಟಿಕೆಗಳಿಗೆ ಸಹಕಾರಿ ಆಗಲಾರದು. ಆದ್ದರಿಂದಲೇ ನಾಲೆ ಮೂಲಕಹರಿಯುವ ನೀರಿನಿಂದಅಲ್ಪಸ್ವಲ್ಪ ಕೃಷಿ ಚಟುವಟಿಕೆನಡೆಸಿ ತಂಬಾಕು, ರೇಷ್ಮೆ ಕೃಷಿಸೇರಿದಂತೆ ಭತ್ತ ರಾಗಿಯಕೃಷಿ ಚಟುವಟಿಕೆಗಳು ನಡೆಯುತ್ತಿದೆ.ಪ್ರಸಕ್ತ ಬೇಸಿಗೆಯ ಹೊಡೆತ ಅಧಿಕವಾಗಿದ್ದು, ಈಭಾಗದಲ್ಲಿ ಬರುವ ಕೆಲ ಗ್ರಾಪಂಗಳಲ್ಲಿ ನೀರಿನ ಭವಣೆತೀರಿಸುವ ಸಲುವಾಗಿ ಆಯಾ ಗ್ರಾಪಂ ಅಭಿವೃದ್ಧಿಅಧಿಕಾರಿಗಳು ಮುಂಜಾಗ್ರತೆಯಾಗಿ ಕುಡಿವ ನೀರಿನಕೊರೆತೆ ಇಲ್ಲದಂತೆ ಕ್ರಮಕೈಗೊಳ್ಳುವಲ್ಲಿಮುಂದಾಗಿದ್ದಾರೆ.
ತಾಲೂಕಿನ ನಗರಹಳ್ಳಿ ಗ್ರಾಪಂಗೆ ಸೇರಿದ ನೆಗ್ಗಲಹಳ್ಳಿ,ಹಿರೇತಳಾಲು, ಗುಲಗಂಜಿಹಳ್ಳಿ ಹಾವಿನಮಾರನಹಳ್ಳಿ ಇರುವ ನೀರಿನ ಬವಣೆ ಕಡಿಮೆಗೊಳಿಸುವ ಸಲುವಾಗಿ ಎಚ್ಚರಿಕೆಯ ಹೆಜ್ಜೆಯನ್ನುಇಡುತ್ತಿರುವ ಸೂಚನೆಗಳು ಬಂದಿವೆ.ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ್‌ಅವರನ್ನು ಸಂಪರ್ಕಿಸಿ ನಗರನಹಳ್ಳಿ ಗ್ರಾಪಂಗೆಸೇರಿದ ಗ್ರಾಮಗಳು ಬೇಸಿಗೆಯಿಂದ ನೀರಿನಬವಣೆಯಿದ್ದರೂ ಅದನ್ನು ಸರಿದೂಗಿಸುವಸಲುವಾಗಿ ತಾವು ಮತ್ತು ತಮ್ಮ ಸಿಬ್ಬಂದಿ ಕುಡಿವನೀರಿನ ಬವಣೆ ತಪ್ಪಿಸಲು ಬೇಕಾದ ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿ ಒದಗಿಸಿದ್ದಾರೆ.
ನಗರಹಳ್ಳಿ ಗ್ರಾಪಂನಲ್ಲಿ ಅಕಸ್ಮಾತ್ ಮುಂದಿನದಿನಗಳಲ್ಲಿ ಕುಡಿಯುವ ನೀರಿನ ಕೊರೆತೆ ಎದುರಾದರೆಅದನ್ನು ಎದುರಿಸುವ ಸಲುವಾಗಿ ಬೇಕಾಗಿರುವ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಮ್ಮ ಸಿದ್ಧತೆಗಳಿಗೆತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಹೆಚ್ಚಿನಸಹಕಾರ ನೀಡುತ್ತಿರುವುದು ಕಾಮಗಾರಿ ಗಳ ಭರದಿಂದಸಾಗಲು ಅನುಕೂಲ ವಾಗಿದೆ ಎಂದಿದ್ದಾರೆ.
ನೀರಿನ ಟ್ಯಾಂಕುಗಳ ದುರಸ್ತಿ: ನಗರನಹಳ್ಳಿಗ್ರಾಮದಲ್ಲಿನ ಮನೆಗಳಿಗೆ ಅಳವಡಿಸಿರುವಕೊಳವೆ ಪೈಪುಗಳು ಒಡೆದು ಹಾಳಾಗಿದ್ದಪೈಪುಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ.ಗುಲಗಂಜಿಹಳ್ಳಿ ಗ್ರಾಮದಲ್ಲಿನ ನೀರಿನಟ್ಯಾಂಕುಗಳು ಇದ್ದು ಅವುಗಳಲ್ಲಿಒಂದೆರಡು ಟ್ಯಾಂಕುಗಳು ದುರಸ್ತಿಪಡಿಸುತ್ತಿರುವುದರಿಂದ ಗ್ರಾಮದಲ್ಲಿನನೀರಿನ ಬವಣೆ ಕಡಿಮೆ ಆಗಲಿದೆ ಎಂಬಮಾಹಿತಿ ದೊರೆತಿದೆ. ಶ್ರವಣೂರು ಗ್ರಾಮದಲ್ಲಿಅಂತರ್ಜಲ ಕಡಿಮೆಯಾಗಿ ಕುಡಿಯುವ ನೀರು ಕಡಿಮೆಆಗುತ್ತಿದೆ, ಆದ್ದರಿಂದ ಗ್ರಾಪಂ ಅಧಿಕಾರಿಗಳುಕೊಳವೆಬಾವಿಗಳನ್ನು ದುರಸ್ತಿಗೊಳಿಸಿ ಬರುವ ನೀರಿನಬವಣೆ ಕಡಿಮೆಗೊಳಿಸಲು ಮುಂದಾಗಿದ್ದಾರೆ.
ಎನ್.ಎಸ್.ರಾಧಾಕೃಷ್ಣ