Advertisement
ಸ್ವಾತಂತ್ರ್ಯೋತ್ಸವದ ದಿನದಂದೇ ಭ್ರಷ್ಟಾಚಾರಿಗಳ ವಿರುದ್ಧ ಸಮರ ಶುರುವಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳ ವಿಚಕ್ಷಣ ವಿಭಾಗಗಳು ಮತ್ತು ಸೇನೆಯ ವಿವಿಧ ವಿಭಾಗಗಳಿಂದ ಕಳಂಕ ಹೊತ್ತ ಅಧಿ ಕಾರಿಗಳ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜು.21ರಂದು ಸಚಿವಾಲಯಗಳಿಗೆ ಈ ಸೂಚನೆ ನೀಡಲಾಗಿದ್ದು, ಈ ಇಲಾಖೆಗಳು ಆ.5ರೊಳಗೆ ಕೇಂದ್ರ ಗೃಹ ಸಚಿವಾಲ ಯಕ್ಕೆ ಮಾಹಿತಿ ನೀಡಬೇಕಾಗಿದೆ. ಭಾನುವಾರವಷ್ಟೇ ಮನ್‌ಕೀ ಬಾತ್‌ನಲ್ಲಿ ಭ್ರಷ್ಟರ ವಿರುದ್ದ ಮತ್ತೂಮ್ಮೆ ಕ್ವಿಟ್ ಇಂಡಿಯಾ ಚಳುವಳಿ ನಡೆಸಬೇಕು ಎಂದಿದ್ದ ಬೆನ್ನಲ್ಲೇ, ಈ ಸುದ್ದಿ ಹೊರಬಿದ್ದಿದೆ.
ನುಡಿ, ನೈತಿಕ ಹೊಣೆಗಾರಿಕೆ, ಸರ್ಕಾರದ ಹಿತಾಸಕ್ತಿಗನು ಗುಣವಾಗಿ ಅಧಿಕಾರಿ ಕೈಗೊಂಡ ಕೆಲಸಗಳು, ಅಧಿಕಾರಿಗಳ ವಿರುದ್ಧ ಪುಟ್ಟ ಅಥವಾ ದೊಡ್ಡ ಮಟ್ಟದ ದಂಡ ಬಿದ್ದಿರುವ ಅಂಶಗಳನ್ನೂ ಸೇರ್ಪಡೆ ಮಾಡಿ ಕಳುಹಿಸಬೇಕಾಗಿದೆ. ಈ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾಹಿತಿ ನೀಡುತ್ತಾರೆ. ಜತೆಗೆ ಇಂಥ ಅಧಿಕಾರಿಗಳ ಮೇಲೆ ಈ ಇಲಾಖೆ ಹದ್ದಿನ ಕಣ್ಣಿಟ್ಟಿರುತ್ತದೆ. ಅಲ್ಲದೆ ಈ ಮಾಹಿತಿ ಅನ್ವಯ ಅಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗಾಗಿ ಸರ್ಕಾರಕ್ಕೆ ಅಥವಾ ಜನರಿಗೆ ಯಾವುದಾ ದರೂ ರೀತಿ ಮೋಸ ಮಾಡಿದ್ದಾರಾ ಎಂಬುದನ್ನೂ ಪರಿಶೀಲನೆ ಮಾಡಲಾಗುತ್ತದೆ.
ಇದಾದ ಬಳಿಕ ಈ ಪಟ್ಟಿಯನ್ನು ಸಿಬಿಐ ಮತ್ತು ಸಿವಿಸಿಗೆ ಕಳುಹಿಸಲಾಗುತ್ತದೆ. ಈ ವಿಭಾಗಗಳು ಅಧಿಕಾರಿಗಳ ಮೇಲೆ ಪೂರ್ಣ ನಿಗಾ ವಹಿಸಿ, ಇವರಿಗೆ ದಂಡ ವಿಧಿಸಬೇಕೋ, ವಿಭಾಗೀಯ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕೋ ಅಥವಾ ಸೇವೆಯಿಂದ ಅಮಾನತು ಅಥವಾ ವಜಾ ಮಾಡಬೇಕೋ ಎಂಬ ಬಗ್ಗೆ ನಿರ್ಧರಿಸಿ ಶಿಫಾರಸು ಮಾಡುತ್ತವೆ.
Related Articles
Advertisement
ಈಗಾಗಲೇ ದಂಡಂ ದಶಗುಣಂ ಮಂತ್ರ ಜಾರಿಈಗಾಗಲೇ ಕೆಲಸ ಮಾಡದ ಮತ್ತು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ 357 ಅಧಿಕಾರಿಗಳು ಮತ್ತು 24 ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವೇ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ವಹಿಸಿಕೊಂಡ ಮೇಲೆ ಸರಿಯಾಗಿ ಕೆಲಸ ಮಾಡದ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರ ಪ್ರಕಾರ, ಒಟ್ಟು 381 ನಾಗರಿಕ ಸೇವೆಯ ಅಧಿಕಾರಿಗಳನ್ನು ಶಿಕ್ಷಿಸಲಾಗಿದೆ. ಇದರಲ್ಲಿ 24 ಮಂದಿ ಐಎಎಸ್ ಅಧಿಕಾರಿಗಳೂ ಸೇರಿದ್ದಾರೆ. ಇವರನ್ನು ಅವಧಿ ಪೂರೈಸುವ ಮುನ್ನವೇ ಸೇವೆಯಿಂದ ಮುಕ್ತಿ ನೀಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ ಎಂದೂ ಹೇಳಿದ್ದಾರೆ. ಈಗಾಗಲೇ 11,828 ಗ್ರೂಪ್ ಎ ಅಧಿಕಾರಿಗಳು, ಇವರಲ್ಲಿ 2,953 ಐಎಎಸ್, ಐಪಿಎಸ್ ಮತ್ತು ಐಎಫ್ ಒಎಸ್ ಅಧಿಕಾರಿಗಳ ಕುರಿತಂತೆ ಪರಿಶೀಲನೆ ನಡೆಸಲಾಗಿದೆ. ಜತೆಗೆ, 19,714 ಗ್ರೂಪ್ ಬಿ ಅಧಿಕಾರಿಗಳ ಬಗ್ಗೆ ಪರಿಶೀಲನೆ ನಡೆಸಿ, ಕೆಲಸ ಮಾಡದ ಮತ್ತು ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಒಬ್ಬ ಐಎಎಸ್ ಮತ್ತು ಇಬ್ಬರು ಐಪಿಎಸ್ ಸೇರಿ 25 ಗ್ರೂಪ್ ಎ ಅಧಿಕಾರಿಗಳು, 99 ಗ್ರೂಪ್ ಬಿ ಅಧಿಕಾರಿಗಳನ್ನು ಕಡ್ಡಾಯವಾಗಿ ನಿವೃತ್ತಿ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜತೆಗೆ 10 ಐಎಎಸ್ ಅಧಿಕಾರಿಗಳು ಸೇರಿ 21
ನಾಗರಿಕ ಸೇವೆಯ ಅಧಿಕಾರಿಗಳ ಬಳಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ. ಐವರು ಐಎಎಸ್ ಅಧಿಕಾರಿಗಳು ಸೇರಿ 37 ಗ್ರೂಪ್ ಎ ಅಧಿಕಾರಿಗಳ ನಿವೃತ್ತಿ ನಂತರದ ಪಿಂಚಣಿ ತಡೆಹಿಡಿಯ ಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಆರೇ ತಿಂಗಳ ಅವಧಿ
ಇದುವರೆಗೆ ಅಧಿಕಾರಿಗಳ ವಿರುದ್ಧ ದಾಖಲಾದ ದೂರು ಸಂಬಂಧ ಎಷ್ಟು ದಿನ ಬೇಕಾದರೂ ತನಿಖೆ ನಡೆಸಬಹುದಿತ್ತು. ಇದೀಗ ಕೇಂದ್ರ ಸರ್ಕಾರ 50 ವರ್ಷಗಳ ಈ ನಿಯಮ ಬದಲಿಸಿದ್ದು, ಆರು ತಿಂಗಳ ಒಳಗೆ ಸಂಬಂಧ ಪಟ್ಟ ವಿಭಾಗಗಳು ತನಿಖೆ ಮುಗಿಸಲೇಬೇಕು. ಹಲವಾರು ದಿನಗಳಿಂದ ಬಾಕಿ ಉಳಿದು ಕೊಂಡಿರುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಅತಿ ಶೀಘ್ರವಾಗಿ ಇತ್ಯರ್ಥ ಮಾಡಬೇಕು. ಕೇಂದ್ರ ನಾಗರಿಕ ಸೇವೆಗಳ ಕಾಯ್ದೆಗೆ ತಿದ್ದುಪಡಿ ತಂದಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಭ್ರಷ್ಟಾಚಾರದ ವಿರುದ್ಧದ ತನಿಖೆಗೆ ನಿಗಧಿತ ಅವಧಿ ನೀಡಿದೆ. ತನಿಖೆ ನಡೆಸುವ ಇಲಾಖೆ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ 6 ತಿಂಗಳಲ್ಲಿ ವರದಿ ನೀಡಬೇಕು ಒಂದು ವೇಳೆ ತನಿಖೆಗೆ ಆರು ತಿಂಗಳಿಗೂ ಹೆಚ್ಚು ಅವಧಿ ಬೇಕೆಂದರೆ ಇದಕ್ಕೆ ಸೂಕ್ತ ಕಾರಣಗಳನ್ನು ನೀಡಲೇಬೇಕು.