Advertisement

ದಿ ವಿಲನ್‌ ಪೂರ್ಣ

11:24 AM Feb 05, 2018 | |

ಶಿವರಾಜಕುಮಾರ್‌ ಹಾಗು ಸುದೀಪ್‌ ಅಭಿನಯದ “ದಿ ವಿಲನ್‌’ ಚಿತ್ರದ ಚಿತ್ರೀಕರಣ ಶುಕ್ರವಾರ ಪೂರ್ಣಗೊಂಡಿದೆ. ಆದರೆ, ಇನ್ನಿತರೆ ಕಲಾವಿದರ ದೃಶ್ಯಗಳು ಮಾತ್ರ ಬಾಕಿ ಉಳಿದಿದ್ದು, ಇಷ್ಟರಲ್ಲೇ ಚಿತ್ರಕ್ಕೆ ಕುಂಬಳಕಾಯಿ ಎಂಬುದನ್ನು ಚಿತ್ರತಂಡ ಹೇಳಿಕೊಂಡಿದೆ.

Advertisement

ಪ್ರೇಮ್‌ ನಿರ್ದೇಶಿಸುತ್ತಿರುವ “ದಿ ವಿಲನ್‌’ಗೆ ಶಿವರಾಜಕುಮಾರ್‌ ಹಾಗೂ ಸುದೀಪ್‌ ಕಾಂಬಿನೇಷನ್‌ ದೃಶ್ಯಗಳ ಚಿತ್ರೀಕರಣ ಮುಗಿದಿದ್ದು, ಸಣ್ಣಪುಟ್ಟ ದೃಶ್ಯಗಳು ಮಾತ್ರ ಉಳಿದುಕೊಂಡಿವೆ. ಈಗಾಗಲೇ ಶಿವರಾಜಕುಮಾರ್‌ ಹಾಗು ಸುದೀಪ್‌ ಇಬ್ಬರ ಕಾಂಬಿನೇಷನ್‌ನ ಚಿತ್ರೀಕರಣ ಲಂಡನ್‌, ಥೈಲಾಂಡ್‌ ಮತ್ತು ಬ್ಯಾಂಕಾಕ್‌ನಲ್ಲಿ ನಡೆದಿದ್ದು, ಬೆಂಗಳೂರಿನಲ್ಲಿ ಕೊನೆಯ ಹಂತದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು.

ಇಬ್ಬರು ಇರುವ ದೃಶ್ಯಗಳನ್ನು ಯಶಸ್ವಿಯಾಗಿ ಚಿತ್ರೀಕರಿಸಿರುವ ಪ್ರೇಮ್‌, ಶುಕ್ರವಾರ ಚಿತ್ರೀಕರಣ ಮುಗಿದ ಬಗ್ಗೆ ಹೇಳಿಕೊಂಡಿದ್ದಾರೆ. ಈ ಚಿತ್ರವನ್ನು ಸಿ.ಆರ್‌.ಮನೋಹರ್‌ ನಿರ್ಮಿಸುತ್ತಿದ್ದು, ಯಾಮಿ ಜಾಕ್ಸಿನ್‌ ಸೇರಿದಂತೆ ಹಲವು ನಟ,ನಟಿಯರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next