Advertisement

ಬಾರ್ಡರ್‌ನಲ್ಲಿ ದಿ ವಿಲನ್‌

11:55 AM May 08, 2017 | Team Udayavani |

ಪ್ರೇಮ್‌ ಈ ಬಾರಿ ಜಿದ್ದಿಗೆ ಬಿದ್ದವರಂತೆ ಚಿತ್ರೀಕರಣ ಮಾಡುತ್ತಿದ್ದಾರೆ. “ದಿ ವಿಲನ್‌’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿ ಚಿತ್ರೀಕರಣದಲ್ಲಿ ತೊಡಗಿರುವ ಪ್ರೇಮ್‌, ಸುದೀಪ್‌ ಹಾಗೂ ತೆಲುಗು ನಟ ಶ್ರೀಕಾಂತ್‌ ಕಾಂಬಿನೇಶನ್‌ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದರು. ಪ್ರೇಮ್‌ ಈಗ ಎರಡನೇ ಶೆಡ್ನೂಲ್‌ಗೆ ರೆಡಿಯಾಗಿದ್ದಾರೆ.

Advertisement

ಎರಡನೇ ಹಂತದ ಚಿತ್ರೀಕರಣ ಮೇ 18 ರಿಂದ ಬೆಳಗಾವಿಯಲ್ಲಿ ನಡೆಯಲಿದೆ. ಕರ್ನಾಟಕ- ಮಹಾರಾಷ್ಟ್ರ ಗಡಿಭಾಗದಲ್ಲಿ “ದಿ ವಿಲನ್‌’ ಚಿತ್ರದ ಚಿತ್ರೀಕರಣ ಮಾಡಲು ಪ್ರೇಮ್‌ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಗಡಿ ಭಾಗದಲ್ಲಿ ಚಿತ್ರೀಕರಿಸಲು ಕಾರಣವೇನು, ಕಥೆಗೂ ಅಲ್ಲಿನ ಲೊಕೇಶನ್‌ಗೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.

ಆದರೆ, ಪ್ರೇಮ್‌ ಮಾತ್ರ ಆ ಬಗ್ಗೆ ಬಾಯಿ ಬಿಡುತ್ತಿಲ್ಲ. “ಲೊಕೇಶನ್‌  ತುಂಬಾ ಚೆನ್ನಾಗಿದೆ. ಹಿಂದೆ ಹಸಿರಿನಿಂದ ಕೂಡಿರುವ ದೊಡ್ಡ ಫೀಲ್ಡ್‌ ಇದೆ. ಆ ಬ್ಯಾಕ್‌ಡ್ರಾಪ್‌ಲ್ಲಿ ಚಿತ್ರೀಕರಿಸುತ್ತಿದ್ದೇವೆ. ಉಳಿದಂತೆ ಸಿಜಿ ವರ್ಕ್‌ ಮಾಡುತ್ತೇನೆ’ ಎನ್ನುವ ಮೂಲಕ ಕಥೆಯ ಬಗ್ಗೆ ಗುಟ್ಟುಬಿಟ್ಟು ಕೊಡುವುದಿಲ್ಲ ಪ್ರೇಮ್‌.  

ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಮಿಥುನ್‌ ಚಕ್ರವರ್ತಿ ಹಾಗೂ ಸುದೀಪ್‌ ಕಾಂಬಿನೇಶನ್‌ನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಿದ್ದಾರೆ ಪ್ರೇಮ್‌. ಮಿಥುನ್‌ ಚಕ್ರವರ್ತಿಯವರ ಪಾತ್ರ ಕೂಡಾ ಪ್ರಮುಖವಾಗಿದ್ದು, ಚಿತ್ರಕ್ಕೆ ಟರ್ನಿಂಗ್‌ ಪಾಯಿಂಟ್‌ ನೀಡುವ ಪಾತ್ರವಂತೆ.

ಅಲ್ಲಿಗೆ ಗಡಿಭಾಗದಲ್ಲಿ ಸುದೀಪ್‌ ಹಾಗೂ ಮಿಥುನ್‌ ಚಕ್ರವರ್ತಿ ಮುಖಾಮುಖೀಯಾಗಲಿದ್ದಾರೆನ್ನಲಡ್ಡಿಯಿಲ್ಲ. ಇನ್ನು ಚಿತ್ರಕ್ಕೆ ನಾಯಕಿ ಯಾರು ಎಂಬ ಪ್ರಶ್ನೆಗೆ ಸದ್ಯ ಪ್ರೇಮ್‌ ಬಳಿಯೂ ಉತ್ತರವಿಲ್ಲ. ಒಂದಷ್ಟು ಮಂದಿ ಟಾಪ್‌ ಹೀರೋಯಿನ್‌ಗಳನ್ನು ನಟಿಸಲು ರೆಡಿ ಇದ್ದರೂ ಪ್ರೇಮ್‌ ಕೇಳುವಷ್ಟು ಡೇಟ್‌ ಕೊಡಲು ಅವರು ರೆಡಿಯಿಲ್ಲ.

Advertisement

ಪ್ರೇಮ್‌ 60ರಿಂದ 70 ದಿನಗಳ ಕಾಲ್‌ಶೀಟ್‌ ಕೇಳುತ್ತಿದ್ದು, ಆ ನಾಯಕಿಯರು ಬೇರೆ ಸಿನಿಮಾಗಳಲ್ಲೂ ಬಿಝಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next