ಎಚ್.ಡಿ.ಕೋಟೆ: ಭೂಮಿಯೊಳಗೆ ಹೂತಿದ್ದ ಮಡಕೆಗಳನ್ನು ಕಂಡು ನಿಧಿ ಎಂದು ಭಾವಿಸಿದ ಗ್ರಾಮಸ್ಥರು ತಾಲೂಕು ಆಡಳಿತವನ್ನು ಸ್ಥಳಕ್ಕೆ ಬರಮಾಡಿಕೊಂಡು ಬೆಸ್ತುಗೊಳಿಸಿದ ಘಟನೆ ತಾಲೂಕಿನ ಕನ್ನೇನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಕನ್ನೇನಹಳ್ಳಿ ಚರಂಡಿ ಕಾಮಗಾರಿಗೆ ಗುಂಡಿ ತೆಗೆಯುವ ವೇಳೆ ಹಳೆಯ ಕಾಲದ ಒಂದೆರಡು ಮಡಿಕೆಗಳು ಗೋಚರಿಸಿವೆ.
ಇದರಿಂದ ವಿಚಲಿತರಾದ ಗ್ರಾಮಸ್ಥರು ಪೂಜಾರಿಯೊಬ್ಬರನ್ನು ಸಂಪರ್ಕಿಸಿ ದಾಗ ಇದು ನಿಧಿ ವಿಧಿವಿಧಾನಗಳಂತೆ ಪೂಜಾ ಕೈ ಂಕರ್ಯ ನೆರವೇರಿಸದೆ ನಿಧಿ ಹೊರ ತೆಗೆದರೆ ರಕ್ತ ಕಾರಿಕೊಂಡು ಸಾಯುವುದಾಗಿ ತಿಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳನ್ನು ಕಂಡ ಗ್ರಾಮಸ್ಥರು ಇತ್ತ ಮಡಿಕೆಗಳನ್ನು ಹೊರ ತೆಗೆಯಲೂ ಆಗದೇ ಅತ್ತ ಸುಮ್ಮನೆ ಇರದ ಸ್ಥಿತಿ ನಿರ್ಮಾಣಗೊಂಡಿದೆ.
ನಿಧಿ ಇರುವುದೆಂದೇ ಭಾವಿಸಿದ್ದ ಇಡೀ ಗ್ರಾಮಸ್ಥರ ಗಮನ ಭೂಮಿಯೊಳೆಗೆ ಹುದುಗಿದ್ದ ಮಡಕೆಯ ಮೇಲೆ ಕೇಂದ್ರೀಕೃತವಾಗಿದೆ. ಕೊನೆಗೆ ಈ ವಿಷಯ ತಹಶೀಲ್ದಾರ್ ಗಮನಕ್ಕೆ ಬಂದಿದ್ದು ತಹಶೀಲ್ದಾರ್ ಎಂ. ನಂಜುಂಡಯ್ಯ ಪೊಲೀಸರೊಡನೆ ಸ್ಥಳಕ್ಕೆ ಧಾವಿಸಿದಾಗ ಘಟನೆಯ ಚಿತ್ರಣ ತಿಳಿದಿದೆ.
ಮಡಿಕೆ ಹೊರತೆಗೆಯಲು ಮುಂದಾಗದ ಗ್ರಾಮಸ್ಥರು: ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ಗೆ ನಿಧಿಯ ವಿಚಾರವಾಗಿ ತಿಳಿಸುತ್ತಿದ್ದಂತೆಯೇ ಮಡಕೆಯಲ್ಲಿ ಏನಿದೆ ಅನ್ನುವುದನ್ನು ಸಾರ್ವಜನಿಕರ ಮುಂದೆ ಖಾತರಿ ಪಡಿಸಿಕೊಳ್ಳುವ ಸಲುವಾಗಿ ಸ್ವತಃ ತಹಶೀಲ್ದಾರ್ ಮಡಕೆ ಹೊರತೆಗೆಯುವಂತೆ ಆದೇಶಿಸಿದರೂ ಇಡೀ ಗ್ರಾಮದ ಯಾವೊಬ್ಬ ವ್ಯಕ್ತಿಯೋ ಮುಂದೆ ಬರಲಿಲ್ಲ.
ಇದರಿಂದ ತಹಶೀಲ್ದಾರ್ ಅವರೇಮುಂದಿದ್ದು ಮಡಿಕೆ ತೆಗೆ ಯಲು ಸಹಾಯ ಮಾಡುವ ಭರವಸೆ ನೀಡಿದರೂ ನಿಧಿ ಹೊರತೆಗೆಯುವ ಮಂದಿ ವಿಧಿವಿಧಾನ ಅನುಸರಿಸದೇ ಹೊರ ತೆಗೆದರೆ ರಕ್ತ ಕಾರಿ ಸಾಯುವ ಮೂಢನಂಬಿಕೆ ಎಲ್ಲರನ್ನೂ ಕಾಡಿದೆ. ಗ್ರಾಮದ ವೃದ್ಧನೊಬ್ಬ ಮುಂದೆ ಬಂದು ಮಡಕೆ ಹೊರತೆಗೆಯಲು ಯತ್ನಿಸಿದ್ದಾರೆ. ಆರಂಭದಲ್ಲಿ 2-3 ಮಡಕೆಗಳು ಗೋಚರಿಸಿದರೂ ಹೊರ ತೆಗೆಯುವಾಗ ಮಡಿಕೆಗಳು ಆಕಸ್ಮಿಕವಾಗಿ ಒಡೆದು ಹೋಯಿತಾದರೂ ಮಡಕೆಯಲ್ಲಿ ಮಣ್ಣು ಬಿಟ್ಟರೆ ಬೇರೆನೂ ಇರಲಿಲ್ಲ.
ಗುಹೆಯಲ್ಲಿ ಮಡಕೆ: ಬಳಿಕ ಗುಹೆಯೊಂದು ಇರುವುದು ಖಾತರಿ ಪಡಿಸುತ್ತಿದ್ದಂತೆಯೇ ಅಲ್ಲಿ ಏನಾದರೂ ನಿಧಿ ಇದ್ದೇ ಇರಬೇಕೆಂದು ಅಲ್ಲಿಯೂ ಹುಡುಕಾಟ ನಡೆಸಿ ಮಡಿಕೆ ಹೊರತೆಗೆದಾಗ ಅಲ್ಲಿಯೂ ಮಡಿಕೆಗಳಲ್ಲಿ ಮಣ್ಣು ತುಂಬಿದ್ದು ಗೋಚರವಾಯಿತು. ಆಗ ತಹಶೀಲ್ದಾರ್ ಬಂದ ದಾರಿಗೆ ಸುಂಕ ಇಲ್ಲ ಅನ್ನುವುವಂತೆ ಬರಿಗೈಯಲ್ಲಿ ವಾಪಸ್ಸಾಗಬೇಕಾಯಿತು.
ಒಟ್ಟಾರೆ ಭೂಮಿಯಲ್ಲಿ ಹೂತಿಟ್ಟಿದ್ದ ಮಡಕೆಗಳು ನಿಧಿ ಅನ್ನುವಂತೆ ವೈಭವೀಕರಣ ಗೊಂಡಂತ್ತಾದರೂ ಹುದುಗಿದ್ದ ಮಡಿಕೆಗಳನ್ನು ಹೊರತೆಗೆಯುವಾಗ ಮತ್ತು ಹೊರ ತೆಗೆದಾಗ ಮಡಕೆಯಲ್ಲಿರುವುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಇತರೆ ಮಡಿಕೆಗಳನ್ನು ಒಡೆದು ವೀಕ್ಷಿಸಿದಾಗಷ್ಟೇ ಇಲ್ಲಿರುವುದು ನಿಧಿಯಲ್ಲ ಕೇವಲ ಮಡಿಕೆಗಳು ಮಾತ್ರ ಅನ್ನುವುದು. ತಹಶೀಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಬರಿ ಗೈಯಲ್ಲಿ ಹಿಂದಿರುಗಬೇಕಾಯಿತು.