Advertisement

ಸಂತ್ರಸ್ತರಿಗೆ ಸಿಗುತ್ತಿಲ್ಲ ಪರಿಹಾರ: ಶಾಸಕ ಅಜಯ್‌ ಸಿಂಗ್

04:07 PM Dec 08, 2020 | Suhan S |

ಕಲಬುರಗಿ: ಭೀಕರ ಮಳೆಯಿಂದ ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದರೂ ಜತೆಗೆ ರೈತರ ಬೆಳೆ ಎಲ್ಲ ನಾಶವಾಗಿದ್ದರೂ ಪರಿಹಾರ ಸಿಗದಿರುವುದಕ್ಕೆ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ| ಅಜಯ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸೋಮವಾರ ಆರಂಭವಾಗಿರುವ ವಿಧಾನಸಭೆ ಚಳಿಗಾಲದ ಅ ಧಿವೇಶನದಲ್ಲಿ ರಾಜ್ಯ ಸರಕಾರದ ವಿರುದ್ಧ ಮಾತನಾಡಿದ ಅವರು, ಈ ವರ್ಷಭೀಕರ ನೆರೆ, ಮಳೆ ರೈತರು, ಜನರನ್ನು ಕಾಡಿತ್ತು. ಒಟ್ಟಾರೆ 24,491 ಕೋಟಿ ರೂ. ಹಾನಿ ಎಂಬುದಾಗಿ ಲೆಕ್ಕ ಹಾಕಿ ಕೇಂದ್ರಕ್ಕೆಪರಿಹಾರ ಕೇಳಿತ್ತು. ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿಸರಕಾರ, ಪರಿಹಾರ ಹೆಚ್ಚಿಗೆ, ಬೇಗ ಬರಬಹುದು ಎಂಬುದು ಲೆಕ್ಕವಾಗಿತ್ತು. ಆದರೆ ಎರಡು ತಿಂಗಳು ಗತಿಸಿದರೂ ಇನ್ನೂಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ ಎಂದು ಅಂಕಿ-ಅಂಶ ಸಮೇತ ಸರಕಾರದ ಗಮನ ಸೆಳೆದಿದ್ದಾರೆ. 27,700 ಕುಟುಂಬಗಳಿಗೆ ತಲಾ 10 ಸಾ.ರೂ.ನಂತೆ 27 ಕೋಟಿ ರೂ. ಪರಿಹಾರ ನೀಡಲಾಗಿದೆ. ಆದರೆ 48, 424 ಕುಟುಂಬಗಳ ಮನೆಗಳು ಬಿದ್ದು, ಹೋಗಿವೆ. ಇಂದಿಗೂ ನಯಾಪೈಸೆ ಪರಿಹಾರ ನೀಡಲಾಗಿಲ್ಲ, ತುರ್ತು ಪರಿಹಾರ ವೆಂದು 120 ಕೋಟಿ ರೂ. ಬಿಡುಗಡೆ ಮಾಡಿದ್ದಾಗಿ ಹೇಳುತ್ತೀರಿ, ರೈತರ ಬೆಳೆ ಹಾನಿಗೆ ಪರಿಹಾರ ಇನ್ನೂ ಬಂದಿಲ್ಲ ಯಾಕೆ?. ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದರೂ ಸಮರ್ಪಕ ಪರಿಹಾರ ಬಿಡುಗಡೆಯಾಗದಿರುವುದು ನಿಜಕ್ಕೂ ಅನ್ಯಾಯವನ್ನೇ ಮಾಡಿದಂತಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಅಫಜಲಪುರ, ಜೇವರ್ಗಿಯಲ್ಲಂತೂ 90 ಹಳ್ಳಿಗಳಿಗೆ ಪ್ರವಾಹ ಕಾಡಿದೆ. 1112 ಕುಟುಂಬ ನೊಂದಿವೆ. ಇವರಿಗೆ ಇಂದಿಗೂ ಹಣ ಬಂದಿಲ್ಲ. ಸಾವಿರಾರು ಮನೆಗಳುನೆಲಕ್ಕೆ ಉರುಳಿವೆ. ಅವರಿಗೆಲ್ಲರಿಗೂ ಯಾರೂ ದಿಕ್ಕಿಲ್ಲದಂತಾಗಿದೆಎಂದು ನೊಂದವರ ಗೋಳು ವಿವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಲಬುರಗಿ ಕಡೆ ಕಾಲಿಡುತ್ತಿಲ್ಲ ಎಂದು ಸದನಕ್ಕೆ ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next